ಪ್ಯಾರಿಸ್: ಪ್ಯಾರಿಸ್ ಮಾಸ್ಟರ್ ಟೆನಿಸ್ ಪಂದ್ಯಾವಳಿಯಲ್ಲಿ ರಫೆಲ್ ನಡಾಲ್ ಮತ್ತು ಡ್ಯಾನಿಲ್ ಮೆಡ್ವೆಡೇವ್ ಸೋಲಿನ ಆಘಾತಕ್ಕೆ ಸಿಲುಕಿದ್ದಾರೆ. ನಂ.1 ಟೆನಿಸಿಗ ಕಾರ್ಲೋಸ್ ಅಲ್ಕರಾಝ್ 3ನೇ ಸುತ್ತಿಗೆ ಮುನ್ನಡೆದಿದ್ದಾರೆ.
ರಫೆಲ್ ನಡಾಲ್ ಅವರಿಗೆ ಅಮೆರಿಕದ ಟಾಮಿ ಪೌಲ್ 3-6, 7-6 (7-4), 6-1 ಅಂತರದಿಂದ ಸೋಲುಣಿಸಿ ತಮ್ಮ ಟೆನಿಸ್ ಬಾಳ್ವೆಯ ಮಹೋನ್ನತ ಗೆಲುವನ್ನು ಕಂಡರು.
ಈ ಸೋಲಿನೊಂದಿಗೆ ಕಾರ್ಲೋಸ್ ಅಲ್ಕರಾಜ್ ಅವರನ್ನು ಅಗ್ರ ರ್‍ಯಾಂಕಿಂಗ್‌ನಿಂದ ಕೆಳಗಿಳಿಸುವ ರಫೆಲ್ ನಡಾಲ್ ಯೋಜನೆ ತಲೆಕೆಳಗಾಯಿತು.
ಕಳೆದ ವಾರವಷ್ಟೇ “ವಿಯೆನ್ನಾ ಟೆನಿಸ್’ ಪ್ರಶಸ್ತಿ ಜಯಿಸಿದ್ದ ವಿಶ್ವದ ನಂ.3 ಆಟಗಾರ ಡ್ಯಾನಿಲ್ ಮೆಡ್ವೆಡೇವ್ ಅವರನ್ನು ಆಸ್ಟ್ರೇಲಿಯದ ಅಲೆಕ್ಸ್ ಡಿ ಮಿನೌರ್ 6-4, 2-6, 7-5ರಿಂದ ಮಣಿಸಿದರು. ಇವರ ಮುಂದಿನ ಎದುರಾಳಿ ಫ್ರಾನ್ಸೆಸ್ ಥಿಯಾಫೊ. ಅವರು ಶ್ರೇಯಾಂಕ ರಹಿತ ಜಾಕ್ ಡ್ರಾಪರ್ ವಿರುದ್ಧ 6-3, 7-5ರಿಂದ ಗೆದ್ದು ಬಂದರು.
ನಂ.1 ಆಟಗಾರ ಕಾರ್ಲೋಸ್ ಅಲ್ಕರಾಝ್ ಜಪಾನ್‌ನ ಯೊಶಿಹಿಟೊ ನಿಶಿಯೋಕಾ ಅವರಿಗೆ 6-4, 6-4 ನೇರ ಸೆಟ್‌ಗಳ ಸೋಲುಣಿಸಿದರು.