Advertisement

ರಫೆಲ್‌ ನಡಾಲ್‌ ಈಗ ಸಾವಿರ ಗೆಲುವಿನ ಸರದಾರ

12:52 PM Nov 06, 2020 | keerthan |

ಪ್ಯಾರಿಸ್‌: ಸ್ಟಾರ್‌ ಟೆನಿಸಿಗ ರಫೆಲ್‌ ನಡಾಲ್‌ ಸಾವಿರ ಗೆಲುವಿನ ಸರದಾರನೆಂಬ ಹಿರಿಮೆಗೆ ಭಾಜನರಾಗಿದ್ದಾರೆ. ಬುಧವಾರ ರಾತ್ರಿ “ಪ್ಯಾರಿಸ್‌ ಮಾಸ್ಟರ್’ ಕೂಟದ 2ನೇ ಸುತ್ತಿನಲ್ಲಿ ಅವರು ತಮ್ಮದೇ ದೇಶದ ಫೆಲಿಶಿಯಾಮೊ ಲೋಪೆಜ್‌ ಅವರನ್ನು 4-6, 7-6 (5), 6-4ರಿಂದ ಸೋಲಿಸಿ ಈ ಮೈಲುಗಲ್ಲು ನೆಟ್ಟರು.

Advertisement

“ಓಪನ್‌ ಯುಗ’ದಲ್ಲಿ ರಫೆಲ್‌ ನಡಾಲ್‌ ಸಾವಿರ ಎಟಿಪಿ ಪಂದ್ಯಗಳನ್ನು ಗೆದ್ದ 4ನೇ ಸಾಧಕ. ಉಳಿದ ಮೂವರೆಂದರೆ ಜಿಮ್ಮಿ ಕಾನರ್ (1,274), ರೋಜರ್‌ ಫೆಡರರ್‌ (1,242) ಮತ್ತು ಇವಾನ್‌ ಲೆಂಡ್ಲ್ (1,068).

ಕ್ವಾರ್ಟರ್‌ ಫೈನಲ್‌ಗೆ ಬೋಪಣ್ಣ ಜೋಡಿ

ಭಾರತದ ರೋಹನ್‌ ಬೋಪಣ್ಣ-ಆಸ್ಟ್ರಿಯಾದ ಒಲಿವರ್‌ ಮರಾಕ್‌ “ಪ್ಯಾರಿಸ್‌ ಮಾಸ್ಟರ್’ ಪುರುಷರ ಡಬಲ್ಸ್‌ ನಲ್ಲಿ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. ದ್ವಿತೀಯ ಸುತ್ತಿನ ಜಿದ್ದಾಜಿದ್ದಿ ಪಂದ್ಯದಲ್ಲಿ ಇವರು 9ನೇ ಶ್ರೇಯಾಂಕದ ಫ್ಯಾಬ್ರಿಕ್‌ ಮಾರ್ಟಿನ್‌-ಜೀನ್‌ ಜೂಲಿಯನ್‌ ರೋಜರ್‌ ವಿರುದ್ಧ 3-6, 6-4, 10-8 ಅಂತರದಿಂದ ಮೇಲುಗೈ ಸಾಧಿಸಿದರು. ಶುಕ್ರವಾರದ ಕ್ವಾರ್ಟರ್‌ ಫೈನಲ್‌ನಲ್ಲಿ ಬೋಪಣ್ಣ-ಮರಾಕ್‌ 8ನೇ ಶ್ರೇಯಾಂಕದ ಎಡ್ವರ್ಡ್‌ ರೋಜರ್‌ ವಸೆಲಿನ್‌ -ಜರ್ಗನ್‌ ಮೆಲ್ಜರ್‌ ವಿರುದ್ಧ ಆಡುವರು.

Advertisement

Udayavani is now on Telegram. Click here to join our channel and stay updated with the latest news.

Next