Advertisement
ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಸೋನಿಯಾ ಪ್ರಚಾರ ಕಣಕ್ಕೆ ಧುಮುಕಿದ್ದು, ಸ್ವಕ್ಷೇತ್ರ ರಾಯ್‌ಬರೇಲಿಯಲ್ಲಿ ಪುತ್ರನ ಪರ ಮತಯಾಚಿಸಿದ್ದಾರೆ. ಸಮಾಜವಾದಿ ಪಕ್ಷದ ಜತೆಗೆ ನಡೆಸಿದ ಜಂಟಿ ಚುನಾವಣ ಪ್ರಚಾರ ಸಭೆಯಲ್ಲಿ ಪುತ್ರ ರಾಹುಲ್ ಹಾಗೂ ಪುತ್ರಿ ಪ್ರಿಯಾಂಕಾ ವಾದ್ರಾರನ್ನು ಪಕ್ಕದಲ್ಲೇ ನಿಲ್ಲಿಸಿಕೊಂಡು ಸೋನಿಯಾ ಭಾಷಣ ಮಾಡಿದ್ದಾರೆ.
Related Articles
ರಾಯ್‌ಬರೇಲಿಯಲ್ಲಿ ಸಂಸದನಾಗಿ ಆಯ್ಕೆ ಯಾದರೆ ಆ ಕ್ಷೇತ್ರದ ಅಭಿವೃದ್ಧಿ ಮಾತ್ರವಲ್ಲ, ಅಮೇಠಿಯ ಅಭಿವೃದ್ಧಿಗೂ ಸಮಾನ ಪ್ರಾಶಸ್ತ್ಯ ನೀಡುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಅಮೇಠಿಯಲ್ಲಿ ರ್ಯಾಲಿ ನಡೆ ಸಿ ಮಾತನಾಡಿ, “ಸಂಸದನಾಗಿ ನಾನು ಆಯ್ಕೆ ಯಾದರೆ ರಾಯ್‌ಬರೇಲಿಯ ಅಭಿವೃದ್ಧಿಗೆ 10 ರೂ. ಖರ್ಚು ಮಾಡಿದರೆ, ಅಮೇಠಿಯ ಅಭಿವೃದ್ಧಿಗೂ ಅಷ್ಟೇ ವ್ಯಯಿಸುತ್ತೇನೆ. ಇದು ನನ್ನ ವಾಗ್ಧಾನ’ ಎಂದಿದ್ದಾರೆ.
Advertisement
ಮೋದಿಯಿಂದ ಏನು ಬೇಕಾದರೂ ಹೇಳಿಸಬಲ್ಲೆ: ರಾಹುಲ್ ಲೇವಡಿ
ಲಕ್ನೋ: ಮೋದಿ ಅವರ ಬಾಯಿಂದ ನೀವು ಏನನ್ನು ಕೇಳ ಬಯಸುತ್ತೀರಿ ಹೇಳಿ, ಅದೆಲ್ಲವನ್ನೂ ನಾನು ಹೇಳಿಸಬಲ್ಲೆ ಎಂದು ರಾಹುಲ್ ಗಾಂಧಿ ಪ್ರಧಾನಿ ಮೋದಿ ಅವರನ್ನು ಲೇವಡಿ ಮಾಡಿದ್ದಾರೆ.
ರಾಯ್‌ಬರೇಲಿ ರ್ಯಾಲಿಯಲ್ಲಿ ಪ್ರಧಾನ ಮೋದಿ ವಿರುದ್ಧ ಚಾಟಿ ಬೀಸಿರುವ ರಾಹುಲ್, “ನಾನು ಅದಾನಿ-ಅಂಬಾನಿ ವಿಚಾರವನ್ನು ಮೋದಿ ಮಾತಾಡುತ್ತಿಲ್ಲ ಎಂದೆ, 2 ದಿನದಲ್ಲಿ ಅದನ್ನೇ ಮೋದಿ ಮಾತನಾಡಿದರು. ನಾನು ಬ್ಯಾಂಕ್ ಖಾತೆಗಳಿಗೆ ಫಟಾ-ಫಟ್ ಹಣ ಹಾಕುತ್ತೇವೆ ಎಂದೆ – ಮೋದಿ ಅದನ್ನೇ ಭಾಷಣದಲ್ಲಿ ಹೇಳಿದರು. ಹೇಳಿ ಮೋದಿ ಬಾಯಿಯಿಂದ ನೀವು ಏನು ಕೇಳಬಯಸುತ್ತೀರೋ ಅದನ್ನೇ ನಾನು ಹೇಳಿಸಬಲ್ಲ, ಹಾಗೆಯೇ ಏನು ಬೇಡವೋ ಅದನ್ನೂ ನಾನು ಸಾಧ್ಯವಾಗಿಸುತ್ತೇನೆ’ ಎಂದಿದ್ದಾರೆ.
ಪಿಎಂ ಹುದ್ದೆಗೆ ಅರ್ಹರಲ್ಲ ಎಂದು ಮೋದಿಗೆ ಗೊತ್ತಾಗಿದೆ: ಪ್ರಿಯಾಂಕಾತಾವು ಪ್ರಧಾನಿ ಹುದ್ದೆಗೆ ಅರ್ಹರಲ್ಲ ಎಂಬುದು ಮೋದಿ ಅವ ರಿಗೆ ಈಗ ಅರಿವಾಗುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ. ಒಂದು ಕಡೆ ಹಿಂದೂ, ಮುಸ್ಲಿಂ ರಾಜಕಾರಣ ಮಾಡಿ ದರೆ, ಮತ್ತೂಂದೆಡೆ ಮುಸ್ಲಿಮರು ನಮ್ಮ ಮನೆ ಅಕ್ಕ ಪಕ್ಕದಲ್ಲಿದ್ದರು ಎನ್ನುತ್ತಾರೆ. ಇಂದಿರಾ ತಮ್ಮ ಹೇಳಿ ಕೆಗೆ ಸದಾ ಬದ್ಧರಾಗಿದ್ದರು. ಹಾಗೆಯೇ ಮೋದಿ ತಮ್ಮ ಮಾತಿಗೆ ಬದ್ಧ ಇರಬೇಕು ಎಂದರು.