Advertisement

Kuno National Park; 6 ಚೀತಾಗಳಿಗೆ ಅಳವಡಿಸಿದ್ದ ರೇಡಿಯೊ ಕಾಲರ್‌ ತೆರವು

09:38 PM Jul 24, 2023 | Team Udayavani |

ಭೋಪಾಲ್‌: ಮಧ್ಯಪ್ರದೇಶದ ಶಿಯೋಪುರ್‌ ಜಿಲ್ಲೆಯ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಆರೋಗ್ಯ ತಪಾಸಣೆಯ ಕಾರಣ ಆರು ಚೀತಾಗಳಿಗೆ ಅಳವಡಿಸಿದ್ದ ರೇಡಿಯೊ ಕಾಲರ್‌ಗಳನ್ನು ತೆಗೆದುಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ದಕ್ಷಿಣ ಆಫ್ರಿಕಾದ ನಮೀಬಿಯದಿಂದ ಈ ಚೀತಾಗಳನ್ನು ತರಲಾಗಿತ್ತು. ಈ ವರ್ಷದ ಮಾರ್ಚ್‌ನಿಂದ ಇಲ್ಲಿಯವರೆಗೆ ಐದು ವಯಸ್ಕ ಚೀತಾಗಳು ಹಾಗೂ ಮೂರು ಮರಿ ಚೀತಾಗಳು ಮೃತಪಟ್ಟಿವೆ.

ಪ್ರಸ್ತುತ ಆರು ಗಂಡು ಮತ್ತು ಐದು ಹೆಣ್ಣು ಚೀತಾಗಳು ಸೇರಿದಂತೆ ಒಟ್ಟು 11 ಚೀತಾಗಳು ಕುನೊ ರಾಷ್ಟ್ರೀಯ ಉದ್ಯಾನದಲ್ಲಿವೆ. “ಗೌರವ್‌, ಶೌರ್ಯ, ಪವನ್‌, ಪವಕ್‌, ಆಶಾ ಮತ್ತು ಧೀರಾ ಎಂಬ ಹೆಸರಿನ ಚೀತಾಗಳ ರೇಡಿಯೊ ಕಾಲರ್‌ಗಳನ್ನು ತೆಗೆಯಲಾಗಿದೆ. ಅವುಗಳ ಆರೋಗ್ಯ ಪರಿಶೀಲನೆ ನಡೆಸಲಾಗಿದೆ.

ಎಲ್ಲಾ ಆರು ಚೀತಾಗಳು ಆರೋಗ್ಯವಾಗಿವೆ’ ಎಂದು ಕುನೊ ರಾಷ್ಟ್ರೀಯ ಉದ್ಯಾನದ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next