Advertisement

ರಾಧಿಕಾ ಕುಮಾರಸ್ವಾಮಿ ಸಂಭಾಷಣೆಯ ಆಡಿಯೋ ವೈರಲ್: ಇಂದು ವಿಚಾರಣೆ

10:32 AM Jan 08, 2021 | Team Udayavani |

ಬೆಂಗಳೂರು: ನಟಿ ರಾಧಿಕಾ ಕುಮಾರಸ್ವಾಮಿ ಹಾಗೂ ಯುವರಾಜ್‌ ನಡುವೆ ಸುಮಾರು 40 ನಿಮಿಷಗಳ ಸಂಭಾಷಣೆ ಇರುವ ಆಡಿಯೋ ಕೂಡ ವೈರಲ್‌ ಆಗಿದೆ.

Advertisement

ಯುವರಾಜ್‌ ಮೊಬೈಲ್‌ ಪರಿಶೀಲನೆ ವೇಳೆ ಸಿಸಿಬಿಗೆ ಈ ಆಡಿಯೋ ಸಿಕ್ಕಿದೆ. ರಾಜ್ಯದ ರಾಜಕೀಯ ವ್ಯಕ್ತಿಯೊಬ್ಬರ ವಿಚಾರವಾಗಿ ಇಬ್ಬರು ಸಂಭಾಷಣೆ ನಡೆಸಿದ್ದಾರೆ.

ಈ ವೇಳೆ ಯುವರಾಜ್‌, ಹಣಕಾಸು ಹಾಗೂ ವೈಯಕ್ತಿಕ ವಿಚಾರದ ಬಗ್ಗೆಯೂ ಮಾತನಾಡಿದ್ದಾನೆ ಎಂದು ಹೇಳಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸಿಸಿಬಿ ಮೂಲಗಳುತಿಳಿಸಿವೆ.

ಮತ್ತೂಂದು ಕುತೂಹಲ ಸಂಗತಿ ಎಂದರೆ, ಯುವರಾಜ್‌ ಮತ್ತು ರಾಧಿಕಾ ನಡುವೆ ಯಾದವ್‌ ಎಂಬಾತ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದಾನೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸದ್ಯ ಈತ ನಾಪತ್ತೆಯಾಗಿದ್ದಾನೆ. ಆತನ ಮಾಹಿತಿ ಸಿಕ್ಕಿದ್ದು, ಸದ್ಯದಲ್ಲೇ ವಶಕ್ಕೆ ಪಡೆಯಲಾಗುವುದು ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಡಕರ್‌ ರೇಸ್‌: ಗಂಭೀರ ಅಪಘಾತ, ಕೋಮಾದಲ್ಲಿ ಬೆಂಗಳೂರಿನ ಸಂತೋಷ್‌

Advertisement

ಏನೆಲ್ಲ ವಿಚಾರಣೆ?: ಯುವರಾಜ್‌ ಜತೆಗಿನ ಸಂಬಂಧ ಏನು? ಎಷ್ಟು ವರ್ಷಗಳಿಂದ ಪರಿಚಯವಾಗಿದೆ? ಆತನ ಸಿನಿಮಾದಲ್ಲಿ ಬೇರೆ ಯಾರೆಲ್ಲ ನಟಿಸಬೇಕಿತ್ತು? ಆತನ ಸಿನಿಮಾ ನಿರ್ಮಾಣದಲ್ಲಿ ನೀವು ಪ್ರಮುಖ ಪಾತ್ರ ವಹಿಸಿದ್ದೀರಿ ಎಂದು ಹೇಳಲಾಗಿದೆ. ಹೀಗಾಗಿ ಬೇರೆ ಯಾರ ಖಾತೆಗೆ ಹಣ ವರ್ಗಾವಣೆಯಾಗಿದೆ? ಸಿನಿಮಾ ಶೂಟಿಂಗ್‌ ಆರಂಭವಾಗಿಲ್ಲ ಎಂದಾದರೆ ಯಾಕೆ ಹಣ ವಾಪಸ್‌ ನೀಡಿಲ್ಲ ಎಂಬಿತ್ಯಾದಿ ಹಲವು ಆಯಾಮಗಳಲ್ಲಿ ಪ್ರಶ್ನಿಸಲಾಗುವುದು ಎಂದು ಮೂಲಗಳು ತಿಳಿಸಿವೆ

Advertisement

Udayavani is now on Telegram. Click here to join our channel and stay updated with the latest news.

Next