Advertisement
ನಿವೇತನ್ ರಾಧಾಕೃಷ್ಣನ್ ಇದಕ್ಕೂ ಮುನ್ನ ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ಟೂರ್ನಿಗಳಲ್ಲಿ, ತಮಿಳುನಾಡು ಪ್ರೀಮಿಯರ್ ಲೀಗ್‌ಗಳಲ್ಲಿ ಆಡಿದ್ದರು. 2021ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ನೆಟ್ ಬೌಲರ್ ಆಗಿಯೂ ಕಾಣಿಸಿಕೊಂಡಿದ್ದರು. ಟ್ಯಾಸ್ಮೆನಿಯಾದಲ್ಲಿ ಇವರ ವಾಸ.
Related Articles
“ವೈಫಲ್ಯದ ಬಗ್ಗೆ ನನಗೆ ಭಯ ಇಲ್ಲ. ನನ್ನ ಬಗ್ಗೆ ಜನರು ಏನು ಯೋಚಿಸುತ್ತಾರೆಂಬ ಬಗ್ಗೆಯೂ ನಾನು ತಲೆ ಕೆಡಿಸಿಕೊಳ್ಳುವವನಲ್ಲ. ಈ ರೀತಿಯ ನಿಯಂತ್ರಣಗಳಿಗೆ ಒಳಗಾದರೆ ಸಾಧನೆ ಮಾಡಲು ಸಾಧ್ಯವೇ?’ ಎಂದು ಅವರ ದಿಟ್ಟ ಪ್ರಶ್ನೆ.
Advertisement
2019ರಲ್ಲಿಯೇ ಆಸ್ಟ್ರೇಲಿಯದ ಅಂಡರ್-16 ತಂಡದಲ್ಲಿ ಸ್ಥಾನ ಪಡೆದಿದ್ದ ರಾಧಾಕೃಷ್ಣನ್ ಪಾಕಿಸ್ಥಾನ ವಿರುದ್ಧ ಆಡಿದ್ದರು. 5 ಪಂದ್ಯಗಳ ಸರಣಿಯಲ್ಲಿ 172 ರನ್ ಹಾಗೂ 8 ವಿಕೆಟ್ ಉರುಳಿಸಿ ಎಲ್ಲರ ಗಮನ ಸೆಳೆದಿದ್ದರು.
ಪ್ರಯತ್ನ ಫಲಿಸಿತುಎರಡೂ ಕೈಗಳಿಂದ ಸ್ಪಿನ್ ಮಾಡುವ ಕೌಶಲದ ಬಗ್ಗೆ ಪ್ರತಿಕ್ರಿ ಯಿಸಿದ ರಾಧಾಕೃಷ್ಣನ್, “ಟಿವಿ ಯಲ್ಲಿ ನೋಡಿದ ಹಾಗೆ, ಚೆನ್ನೈ ಲೀಗ್ ಟೂರ್ನಿಗಳಲ್ಲಿ ಕಂಡಂತೆ ಎರಡೂ ಕೈಗಳಿಂದ ಬೌಲ್ ಮಾಡುವವರು ಯಾರೂ ನನ್ನ ಗಮನಕ್ಕೆ ಬಂದಿರಲಿಲ್ಲ. ಇಂಥ ಬೌಲರ್‌ಗಳ ಬಗ್ಗೆ ನಾನು ಕೇಳಿಯೂ ಇರಲಿಲ್ಲ. ಹೀಗಾಗಿ ನಾನೇ ಏಕೆ ಈ ರೀತಿ ಬೌಲಿಂಗ್ ಮಾಡಬಾರದು ಎಂದು ಅಂದುಕೊಂಡಿದ್ದೆ. ಈ ನಿಟ್ಟಿನಲ್ಲಿ ಪ್ರಯತ್ನಿಸಿದೆ. ಇದು ಯಶಸ್ವಿಯಾಯಿತು’ ಎಂದಿದ್ದಾರೆ.