Advertisement

ನಾಳೆ ರಾಡಾರ್‌ ಇಮೇಜಿಂಗ್‌ ಉಪಗ್ರಹ ಉಡಾವಣೆ

09:27 AM May 21, 2019 | keerthan |

ಮಣಿಪಾಲ: ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಇಸ್ರೋ ನಭೋಮಂಡಲದಲ್ಲಿ ಮತ್ತೂಂದು ಮೈಲುಗಲ್ಲು ಸ್ಥಾಪಿಸಲು ಸಿದ್ಧವಾಗಿದ್ದು, ಇದಕ್ಕಾಗಿ ಕ್ಷಣಗಣನೆ ಆರಂಭವಾಗಿದೆ.

Advertisement

RISAT 2B ಎಂಬ ಹೆಸರಿನ ರಾಡಾರ್‌ ಇಮೇಜಿಂಗ್‌ ಭೂ ಪರಿವೀಕ್ಷಣೆಯ ಉಪಗ್ರಹವನ್ನು ಮೇ 22ರಂದು ಬೆಳಗ್ಗೆ 5.30ಕ್ಕೆ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಿದೆ. RISAT 2B ಉಪಗ್ರಹವನ್ನು ಪಿಎಸ್‌ಎಲ್‌ವಿ ಸಿ46 ಎಂಬ ವಾಹಕ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಕೇಂದ್ರದಿಂದ ನಭಕ್ಕೆ ಹೊತ್ತೂಯ್ಯಲಿದೆ. ಇದು ಪಿಎಸ್‌ಎಲ್‌ವಿ ಸಿ46 ಯೋಜನೆಯ 46ನೇ ರಾಕೆಟ್‌; ಈ ಕೇಂದ್ರದಿಂದ ಉಡಾವಣೆ ಯಾಗುತ್ತಿರುವ 72ನೇ ಉಪಗ್ರಹ ವಾಹಕ.

ಅಧಿಕ ಸಾಮರ್ಥ್ಯ
ಇಸ್ರೋ ಈಗಾಗಲೇ ರಾಡಾರ್‌ ವ್ಯವಸ್ಥೆ ಇರುವ 2 ಉಪಗ್ರಹಗಳನ್ನು ಉಡಾವಣೆ ಮಾಡಿದೆ. 2009ರಲ್ಲಿ ಮತ್ತು 2012ರಲ್ಲಿ ಇವು ಬಾಹ್ಯಾರ್ಕಾ ಸೇರಿದ್ದವು. ಮೇ 22ರಂದು ಉಡಾವಣೆಯಾಗಲಿರುವ RISAT 2B ಈ ಎರಡು ಉಪಗ್ರಹಗಳ ಒಟ್ಟು ಸಾಮರ್ಥ್ಯಕ್ಕೆ ಸಮನಾಗಿದೆ.

ಏನು ವ್ಯತ್ಯಾಸ?
ಸಾಮಾನ್ಯವಾಗಿ ಉಪಗ್ರಹಗಳು ಮೋಡ ಅಥವಾ ಪ್ರತಿ ಕೂಲ ಹವಾಮಾನ ಸಂದರ್ಭ ತೆಗೆಯುವ ಚಿತ್ರಗಳಲ್ಲಿ ಸ್ಪಷ್ಟತೆ ಇರುವುದಿಲ್ಲ. ದಟ್ಟ ಮೋಡಗಳು ನಿರ್ಮಾಣ ವಾದರೆ ಭೂಭಾಗದ ಚಿತ್ರ ತೆಗೆಯಲು ಸಾಧ್ಯವಾಗುವುದಿಲ್ಲ. ಇದು ರಕ್ಷಣಾ ಕ್ಷೇತ್ರಕ್ಕೆ ಸವಾಲಿನ ಸಂಗತಿಯಾಗಿತ್ತು. ಈ ಸಾಧ್ಯತೆಯನ್ನು ನಿವಾರಿಸಲಿದೆ.

ವಿಶೇಷತೆ ಏನು?
ಈ ಉಪಗ್ರಹದಲ್ಲಿ ಆ್ಯಕ್ಟಿವ್‌ ಸೆನ್ಸರ್‌ನ ಜತೆಗೆ ಸಿಂಥೆಟಿಕ್‌ ಅಪರ್ಚರ್‌ ರಾಡಾರ್‌ (SAR) ತಂತ್ರಜ್ಞಾನ ಅಳವಡಿ ಸಲಾಗಿದ್ದು, ಇದು ಮಳೆ – ಕಾರ್ಮೋಡ ಕವಿದ ಕಠಿನ ಸಂದರ್ಭದಲ್ಲೂ ತೀವ್ರ ನಿಗಾ ವಹಿಸಲಿದೆ. 500 ಕಿ.ಮೀ.ಗೂ ಅಧಿಕ ದೂರದಿಂದ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿ ದ್ದು, ಕ್ಷಣ ಕ್ಷಣದ ಮಾಹಿತಿಯನ್ನು ನೀಡಲಿದೆ. ಹಗಲು-ರಾತ್ರಿ ಸಮಾನ ಕ್ಷಮತೆಯಿಂದ ಕೆಲಸ ಮಾಡುವ ಸಾಮರ್ಥ್ಯ ಇದಕ್ಕಿದೆ. ಇದು ರಕ್ಷಣೆ ಮತ್ತು ಪ್ರಾಕೃ ತಿಕ ವಿಕೋಪ ನಿರ್ವಹಣ ಸಂಸ್ಥೆಗಳಿಗೆ ಬಹಳ ಪ್ರಯೋಜನಕಾರಿಯಾಗಿದೆ.

Advertisement

ಇಸ್ರೋದ ಪಿಎಸ್‌ಎಲ್‌ವಿ ಸಿ46 ಯೋಜನೆಯ 46ನೇ ರಾಕೆಟ್‌
ಉಪಯೋಗಗಳೇನು?
· ಅರಣ್ಯ ಅಧ್ಯಯನ
· ಪ್ರಾಕೃತಿಕ ವಿಕೋಪ ಸಂದರ್ಭ
· ಕೃಷಿ ಕ್ಷೇತ್ರ

ಉಡಾವಣ ಕೇಂದ್ರ: ಸತೀಶ್‌ ಧವನ್‌
ಸಮಯ: ಬೆಳಗ್ಗೆ 5.30

Advertisement

Udayavani is now on Telegram. Click here to join our channel and stay updated with the latest news.

Next