Advertisement

ರಚಿತಾ ಕೈತುಂಬಾ ಸಿನಿಮಾ; ಕೊಲಮಾವು ಕೋಕಿಲ ರೀಮೇಕ್‌ಗೆ ಗ್ರೀನ್‌ಸಿಗ್ನಲ್‌

03:46 PM Aug 07, 2020 | mahesh |

ಕನ್ನಡದಲ್ಲಿ ರಚಿತಾ ರಾಮ್‌ ಕೈಯಲ್ಲಿ ಸಾಲು ಸಾಲು ಚಿತ್ರಗಳಿವೆ. ಈಗಾಗಲೇ ರಚಿತಾ “ಲಿಲ್ಲಿ’, “ಏಪ್ರಿಲ್’, “ವೀರಂ’ ಹೀಗೆ ನಾಲ್ಕೈದು ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ರಚಿತಾ ರಾಮ್‌ ಕನ್ನಡದಲ್ಲಿ ಇನ್ನೂ ಹೆಸರಿಡದ ಮತ್ತೂಂದು ಹೊಸ ಚಿತ್ರವನ್ನು ಇತ್ತೀಚೆಗೆ ಒಪ್ಪಿಕೊಂಡಿದ್ದಾರೆ.

Advertisement

ಕಳೆದ ವರ್ಷ “ಐ ಲವ್‌ ಯು’ ಮತ್ತು “ಆಯುಷ್ಮಾನ್‌ ಭವ’ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟಿ ರಚಿತಾ ರಾಮ್‌, ಬಳಿಕ ತೆಲುಗಿನಲ್ಲಿ ಬ್ಯುಸಿಯಾದರು. ತೆಲುಗಿನಲ್ಲಿ “ಸೂಪರ್‌ ಮಚ್ಚಿ’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವ ರಚಿತಾ, ಈ ವರ್ಷದ ಆರಂಭದಿಂದಲೂ ಆ ಚಿತ್ರದ ಕಡೆಗೆ ಹೆಚ್ಚು ಗಮನ ನೀಡುತ್ತಿದ್ದಾರೆ. ಕೋವಿಡ್ ಲಾಕ್‌ಡೌನ್‌ನಿಂದಾಗಿ “ಸೂಪರ್‌ ಮಚ್ಚಿ’ ಚಿತ್ರದ ಚಿತ್ರೀಕರಣ ಅರ್ಧಕ್ಕೆ ನಿಂತಿದ್ದು, ಲಾಕ್‌ಡೌನ್‌ ನಿಯಮ ಸಡಿಲವಾಗುತ್ತಿದ್ದಂತೆ, ರಚಿತಾ ರಾಮ್‌ ಬಾಕಿಯಿದ್ದ ಚಿತ್ರೀಕರಣ ಮುಗಿಸಿಕೊಂಡು ಬಂದಿದ್ದಾರೆ.

ಇದರ ನಡುವೆಯೇ ಕನ್ನಡದಲ್ಲಿ ರಚಿತಾ ರಾಮ್‌ ಕೈಯಲ್ಲಿ ಸಾಲು ಸಾಲು ಚಿತ್ರಗಳಿವೆ. ಈಗಾಗಲೇ ರಚಿತಾ “ಲಿಲ್ಲಿ’, “ಏಪ್ರಿಲ್ ‘, “ವೀರಂ’ ಹೀಗೆ ನಾಲ್ಕೈದು ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ರಚಿತಾ ರಾಮ್‌ ಕನ್ನಡದಲ್ಲಿ ಇನ್ನೂ ಹೆಸರಿಡದ ಮತ್ತೂಂದು ಹೊಸ ಚಿತ್ರವನ್ನು ಇತ್ತೀಚೆಗೆ ಒಪ್ಪಿಕೊಂಡಿದ್ದಾರೆ. ಹಿಂದೆ ಹರಿಪ್ರಿಯಾ ಅಭಿನಯದ “ಕನ್ನಡ್‌ ಗೊತ್ತಿಲ್ಲ’ ಚಿತ್ರವನ್ನು ನಿರ್ದೇಶಿಸಿರುವ ಮಯೂರ ರಾಘವೇಂದ್ರ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. 2018ರಲ್ಲಿ ತಮಿಳಿನಲ್ಲಿ ತೆರೆಕಂಡು ಸೂಪರ್‌ ಹಿಟ್‌ ಆಗಿದ್ದ “ಕೊಲಮಾವು ಕೋಕಿಲ’ ಚಿತ್ರದ ಕನ್ನಡ ರಿಮೇಕ್‌ ಇದಾಗಿದ್ದು, ತಮಿಳಿನಲ್ಲಿ ನಯನಾ ತಾರಾ ಮಾಡಿದ್ದ ಪಾತ್ರವನ್ನು ಕನ್ನಡದಲ್ಲಿ ರಚಿತಾ ರಾಮ್‌ ಮಾಡಲಿದ್ದಾರೆ. ಈಗಾಗಲೇ ಚಿತ್ರದ ಕಥೆ ಮತ್ತು ತಮ್ಮ ಪಾತ್ರವನ್ನು ಕೇಳಿ ಖುಷಿಯಾಗಿರುವೆ ರಚಿತಾ, ಈ ಚಿತ್ರವನ್ನು ಮಾಡಲು ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರಂತೆ.

ಇನ್ನು ಈ ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಮಯೂರ್‌ ರಾಘವೇಂದ್ರ, “ಇದು ನನ್ನ ನಿರ್ದೇಶನದ ಎರಡನೇ ಸಿನಿಮಾ. ಈ ಹಿಂದೆ ಕೂಡ ಮಹಿಳಾ ಪ್ರಧಾನ ಸಿನಿಮಾವನ್ನು ನಿರ್ದೇಶಿಸಿದ್ದೆ. ಇದು ಕೂಡ ಮತ್ತೂಂದು ಮಹಿಳಾ ಪ್ರಧಾನ ಸಿನಿಮಾ. ತಮಿಳಿನಲ್ಲಿ ಈ ಸಿನಿಮಾವನ್ನು ನೋಡಿದಾಗ ಅದರ ಕಥೆ ಇಷ್ಟವಾಯ್ತು. ಇದೊಂದು ಸಸ್ಪೆನ್ಸ್‌ – ಥ್ರಿಲ್ಲರ್‌ ಶೈಲಿಯ ಸಿನಿಮಾ. ಕನ್ನಡದಲ್ಲಿ ಇಲ್ಲಿನ ನೇಟಿವಿಟಿಗೆ ತಕ್ಕಂತೆ ಸಾಕಷ್ಟು ಬದಲಾವಣೆ ಸಿನಿಮಾದಲ್ಲಿ ಇರಲಿದೆ. ಕನ್ನಡದಲ್ಲಿ ರಚಿತಾ ರಾಮ್‌ ಈ ಕ್ಯಾರೆಕ್ಟರ್‌ಗೆ ಸೂಕ್ತವೆನಿಸಿದ್ದರಿಂದ, ಅವರನ್ನು ಹೀರೋಯಿನ್‌ ಆಗಿ ಆಯ್ಕೆ ಮಾಡಿಕೊಂಡಿದ್ದೇವೆ. ಇದರ ಸಬ್ಜೆಕ್ಟ್, ಕ್ಯಾರೆಕ್ಟರ್‌ ಕೇಳಿದ ರಚಿತಾ ಕೂಡ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ಸದ್ಯ ಈ ಚಿತ್ರದ ಇತರ ಕಲಾವಿದರು, ತಂತ್ರಜ್ಞರ ಆಯ್ಕೆ, ಪ್ರೊಡಕ್ಷನ್‌ ಹೌಸ್‌ ಮತ್ತಿತರ ಪ್ರೀ-ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿದ್ದು, ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ಸೆಪ್ಟೆಂಬರ್‌ ಅಂತ್ಯ ಅಥವಾ ಅಕ್ಟೋಬರ್‌ ವೇಳೆಗೆ ಈ ಚಿತ್ರ ಸೆಟ್ಟೇ ರುವ ಸಾಧ್ಯತೆ ಇದೆ.

Advertisement

ಜಿ.ಎಸ್‌.ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next