Advertisement

ಅಂತೂ ಕಾಣಿಸಿಕೊಂಡ್ರು ಡಿಂಪಲ್‌ ಕ್ವೀನ್‌! ರಚಿತಾ ‘ಶಬರಿ’ಗೆ ಮುಹೂರ್ತ

12:28 PM Jul 05, 2021 | Team Udayavani |

ರಚಿತಾ ರಾಮ್‌ “ಶಬರಿ’ ಎಂಬ ಸಿನಿಮಾ ಒಪ್ಪಿಕೊಂಡಿರುವ ಬಗ್ಗೆ ನೀವು ಕೇಳಿರಬಹುದು. ಈಗ ಆ ಚಿತ್ರ ಮುಹೂರ್ತ ಮಾಡಿಕೊಂಡಿದೆ. “ಶಬರಿ’ ಚಿತ್ರದ ಮುಹೂರ್ತ ಭಾನುವಾರ ನಡೆದಿದೆ. ಗಾಲಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸರಳವಾಗಿ ಈ ಚಿತ್ರದ ಮುಹೂರ್ತ ಮಾಡಲಾಗಿದೆ

Advertisement

“ಶಬರಿ’ ಚಿತ್ರಕ್ಕೆ “ಸರ್ಚಿಂಗ್‌ ಫಾರ್‌ ರಾವಣ’ ಎಂಬ ಟ್ಯಾಗ್‌ ಲೈನ್‌ ಇದೆ. ಚಿತ್ರದ ಫ‌ಸ್ಟ್‌ ಲುಕ್‌ ಶ್ರೀರಾಮನವಮಿಯ ದಿನ ಬಿಡುಗಡೆಯಾಗಿತ್ತು. ಮಹಿಳಾ ಪ್ರಧಾನ ರೀವೆಂಜ್‌ ಹಾಗೂ ಥ್ರಿಲ್ಲರ್‌ ಕಥಾಹಂದರ ಇರುವ ಈ ಚಿತ್ರದಲ್ಲಿ ರಚಿತಾ ಶಬರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಅವರ36ನೇ ಚಿತ್ರವಾಗಿದೆ.

ಈ ಚಿತ್ರಕ್ಕೆ ಯುವ ನಿರ್ದೇಶಕ ನವೀನ್‌ ಶೆಟ್ಟಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇದು ಇವರ ಚೊಚ್ಚಲ ಚಿತ್ರ. ಕೇಶವ್‌ -ಚೇತನ್‌ ಚಿತ್ರಕಥೆ ಹೆಣೆದಿದ್ದಾರೆ. ಈವರೆಗೆ ಸಂಕಲನಕಾರನಾಗಿ ಗುರುತಿಸಿಕೊಂಡಿದ್ದ ನವೀನ್‌ ಶೆಟ್ಟಿ ಶಬರಿ ಚಿತ್ರದ ಮೂಲಕ ನಿರ್ದೇಶಕರಾಗಿ ಭಡ್ತಿ ಪಡೆದಿದ್ದಾರೆ. ಮಹಿಳಾ ಪ್ರಧಾನ ಕಥಾ ಹಂದರ ಒಳಗೊಂಡಿರುವಈಚಿತ್ರದಲ್ಲಿ ರಾವಣ ಯಾರಾಗಲಿದ್ದಾರೆ ಎನ್ನುವುದು ಇನ್ನೂ ಕುತೂಹಲವಾಗಿದೆ.

ಇನ್ನು ಶಬರಿಗೆ ಅನೂಪ್‌ ಸೀಳಿನ್‌ ಅವರ ಸಂಗೀತ ಸಂಯೋಜನೆ ಇದ್ದು, ಸುರೇಶ್‌ ಆರ್ಮುಗಂ ಅವರ ಸಂಕಲನ, ವಿಶಾಲ್‌ ಕುಮಾರ್‌ ಗೌಡ ಅವರ ಛಾಯಾಗ್ರಹಣವಿದೆ. ಚಿತ್ರದಲ್ಲಿ ರಘು ಮುಖರ್ಜಿ, ಅಚ್ಯುತ್‌ ಕುಮಾರ್‌, ಪ್ರದೀಪ್‌ ನಾರಾಯಣ್‌, ಅರ್ಚನಾ ಕೊಟ್ಟಿಗೆ ಈ ಚಿತ್ರದ ಪ್ರಮುಖ ಪಾತ್ರವರ್ಗದಲ್ಲಿದ್ದಾರೆ.

Advertisement

ಇನ್ನು, ಕನ್ನಡದಲ್ಲಿ ರಚಿತಾ ರಾಮ್‌ ಕೈಯಲ್ಲಿ ಸಾಲು ಸಾಲು ಚಿತ್ರಗಳಿವೆ. ಈಗಾಗಲೇ ರಚಿತಾ”ಲಿಲ್ಲಿ’, “ಏಪ್ರಿಲ್’, “ವೀರಂ’ ಹೀಗೆ ನಾಲ್ಕೈದು ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ “ಪಂಕಜ ಕಸ್ತೂರಿ’ ಚಿತ್ರದಲ್ಲೂ ರಚಿತಾ ನಟಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next