Advertisement

ಭರಾಟೆ ಹಾಡಿನಲ್ಲಿ ರಚಿತಾ ರಾಮ್‌ ಸ್ಟೆಪ್‌

09:52 AM Apr 05, 2019 | Lakshmi GovindaRaju |

ನಟಿ  ತಮಗೆ ಬಂದ ಅವಕಾಶವನ್ನು ಸದ್ದಿಲ್ಲದೇ ಒಪ್ಪಿಕೊಳ್ಳುತ್ತಿದ್ದಾರೆ. ಅದು ನಾಯಕಿಯಿಂದ ಹಿಡಿದು ಗೆಸ್ಟ್‌ಅಪಿಯರೆನ್ಸ್‌ವರೆಗೂ. ಈಗ ಯಾವ ಸಿನಿಮಾವನ್ನು ರಚಿತಾ ಒಪ್ಪಿಕೊಂಡರು ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ “ಭರಾಟೆ’. ಹೌದು, ಮುರಳಿ ನಾಯಕರಾಗಿರುವ “ಭರಾಟೆ’ ಸಿನಿಮಾಕ್ಕೆ ರಚಿತಾ ಸೇರಿಕೊಂಡಿದ್ದಾರೆ.

Advertisement

ಹಾಗಂತ ನಾಯಕಿಯಾಗಿಯಲ್ಲ. ಬದಲಾಗಿ ಹಾಡೊಂದರಲ್ಲಿ ಗೆಸ್ಟ್‌ ಅಪಿಯರೆನ್ಸ್‌ ಮಾಡಲು. ಇಂದಿನಿಂದ “ಭರಾಟೆ’ ಚಿತ್ರದ ಹಾಡಿನ ಚಿತ್ರೀಕರಣ ಆರಂಭವಾಗಲಿದ್ದು, ರಚಿತಾ ರಾಮ್‌ ಈ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಚಿತ್ರದ ನಾಯಕಿ ಶ್ರೀಲೀಲಾ ಕೂಡಾ ಸ್ಟೆಪ್‌ ಹಾಕಲಿದ್ದಾರೆ.

ಎಲ್ಲಾ ಓಕೆ, ರಚಿತಾ ಸೇರಿಕೊಳ್ಳಲು ಕಾರಣವೇನು ಎಂದು ಕೇಳಬಹುದು. ನಿರ್ದೇಶಕ ಚೇತನ್‌ ಹೇಳುವಂತೆ, ಚಿತ್ರದ ಹಾಡಿನಲ್ಲಿ ಸ್ಟಾರ್‌ನಟಿಯೊಬ್ಬಳು ಕಾಣಿಸಿಕೊಂಡರೆ ಚೆಂದ ಎಂಬ ಲೆಕ್ಕಾಚಾರವಿತ್ತಂತೆ. ಅದರಂತೆ ರಚಿತಾ ಅವರನ್ನು ಕೇಳಿದಾಗ ರಚಿತಾ ಕೂಡಾ ಖುಷಿಯಿಂದ ಒಪ್ಪಿಕೊಂಡರಂತೆ.

ಅಂದಹಾಗೆ, ರಚಿತಾ ಹಾಗೂ ಮುರಳಿ ಈಗಾಗಲೇ “ರಥಾವರ’ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದಾರೆ. ಆ ಚಿತ್ರದ ಹಾಡುಗಳು ಕೂಡಾ ಹಿಟ್‌ ಆಗಿತ್ತು. ಈಗ “ಭರಾಟೆ’ ಹಾಡಿನಲ್ಲಿ ಜೊತೆಯಾಗುತ್ತಿದ್ದಾರೆ. ನೆಲಮಂಗಲ ಬಳಿ ಈ ಹಾಡಿನ ಚಿತ್ರೀಕರಣ ನಡೆಯಲಿದೆ.

ಚೇತನ್‌ ಕುಮಾರ್‌ ನಿರ್ದೇಶಿಸುತ್ತಿರುವ “ಭರಾಟೆ’ ಔಟ್‌ ಅಂಡ್‌ ಔಟ್‌ ಆ್ಯಕ್ಷನ್‌ ಸಿನಿಮಾವಾಗಿದ್ದು, ಅದ್ಧೂರಿಯಾಗಿ ಚಿತ್ರೀಕರಣ ನಡೆಯುತ್ತಿದೆ. ಚಿತ್ರದಲ್ಲಿ ಸಾಯಿಕುಮಾರ್‌, ರವಿಶಂಕರ್‌, ಅಯ್ಯಪ್ಪ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರದ ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಇದ್ದು, ಈಗ ಆರಂಭವಾಗಿದೆ.

Advertisement

ಅಂದಹಾಗೆ, ಸದ್ಯ “ಭರಾಟೆ’ಯಲ್ಲಿ ಗೆಸ್ಟ್‌ ಅಪಿಯರೆನ್ಸ್‌ ಮಾಡುತ್ತಿರುವ ರಚಿತಾ ಅವರ, “ಐ ಲವ್‌ ಯು’ ಚಿತ್ರ ಬಿಡುಗಡೆ ಸಿದ್ಧವಾಗಿದೆ. ಈ ನಡುವೆಯೇ “ರುಸ್ತುಂ’ನಲ್ಲೂ ಗೆಸ್ಟ್‌ ಅಪಿಯರೆನ್ಸ್‌ ಮಾಡಿದ್ದಾರೆ. ಸದ್ಯ ಶಿವರಾಜಕುಮಾರ್‌ ನಾಯಕರಾಗಿರುವ “ಆನಂದ್‌’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಜೊತೆಗೆ “ಏಪ್ರಿಲ್‌’ ಎಂಬ ನಾಯಕಿಪ್ರಧಾನ ಚಿತ್ರವೂ ರಚಿತಾ ಕೈಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next