Advertisement

Rachita Ram: ಇಂದು ರಚಿತಾ ರಾಮ್‌ ಬರ್ತ್‌ಡೇ

10:45 AM Oct 03, 2024 | Team Udayavani |

ಕನ್ನಡದ ಬಹುತೇಕ ಸ್ಟಾರ್‌ಗಳ ಜೊತೆ ನಾಯಕ ನಟಿಯಾಗಿ ನಟಿಸಿ, ಚಿತ್ರರಂಗದಲ್ಲಿ ಒಂದು ರೌಂಡ್‌ ಹಾಕಿರುವ ನಟಿ ರಚಿತಾ ರಾಮ್‌ ಈಗ ಮತ್ತೆ ಹೊಸಬರ ಸಿನಿಮಾಗಳತ್ತ ಗಮನ ಹರಿಸಿದಂತಿದೆ.

Advertisement

ಸಚಿವ ಜಮೀರ್‌ ಅಹಮದ್‌ ಪುತ್ರ ಝೈದ್‌ ಖಾನ್‌ ಎರಡನೇ ಚಿತ್ರ “ಕಲ್ಟ್’ಗೆ ರಚಿತಾ ನಾಯಕಿಯಾಗಿ ದ್ದಾರೆ. ಹೀಗೆ ಸಿನಿಮಾಗಳಲ್ಲಿ ಬಿಝಿಯಾಗಿರುವ ರಚಿತಾ ರಾಮ್‌ಗೆ ಇಂದು ಬರ್ತ್‌ಡೇ ಸಂಭ್ರಮ. ಆದರೆ ಸಿನಿಮಾ ಚಿತ್ರೀಕರಣದಲ್ಲಿ ಅವರು ಬಿಝಿಯಾಗಿರುವುದರಿಂದ ಯಾವುದೇ ಸಂಭ್ರಮಾಚರಣೆ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.

ಕನ್ನಡದ ಬಹುತೇಕ ಎಲ್ಲಾ ಸ್ಟಾರ್‌ಗಳ ಜೊತೆಯೂ ರಚಿತಾ ನಟಿಸಿದ್ದಾರೆ. ಸದ್ಯ ರಚಿತಾ ನಾಯಕಿಯಾಗಿರುವ “ಸಂಜು ವೆಡ್ಸ್‌ ಗೀತಾ-2′ ಚಿತ್ರ ಚಿತ್ರೀಕರಣ ಪೂರೈಸಿದ್ದು ಬಿಡುಗಡೆಗೆ ಸಿದ್ಧವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next