Advertisement
ತುಳಿತಕ್ಕೊಳಗಾದವರಿಗೆ ಮೇಲೆತ್ತಿದ್ದರು: ಪ್ರಪಂಚಕ್ಕೆ ಅಹಿಂಸೆಯನ್ನು ಸಾರಿದ ಬುದ್ಧ, ದೇಶಕ್ಕೆ ಪವಿತ್ರವಾದ ಸಂವಿಧಾನಕೊಟ್ಟ ಅಂಬೇಡ್ಕರ್ ಅವರ ಹಾದಿಯಲ್ಲಿ ಸಾಗಿದ ಬಿ. ರಾಚಯ್ಯ ಅವರು ರಾಜಕೀಯ ಅಧಿಕಾರವನ್ನು ಪಡೆದುಕೊಂಡು, ತುಳಿತಕ್ಕೊಳಗಾದ ಸಮುದಾಯಗಳಿಗೆ ಸಲವತ್ತುಗಳನ್ನು ಕಲ್ಪಿಸಿದರು. ದೂರದೃಷ್ಟಿತ್ವವನ್ನು ಹೊಂದಿ ಚಾಮರಾಜನಗರ ತಾಲೂಕಿನ ಕಾಡಂಚಿನಲ್ಲಿ 13 ಕಾಲೋನಿಗಳನ್ನು ನಿರ್ಮಾಣ ಮಾಡಿದರು. ಅಲ್ಲದೇ ರಾಜ್ಯದ ಉದ್ದಗಲಕ್ಕೂ ಅವರ ಸೇವೆ ಅವಿಸ್ಮರಣೀಯ ಎಂದರು.
Related Articles
Advertisement
ಜೀವನ ಚರಿತ್ರೆ ಬಗ್ಗೆ ಸಂಪುಟ ಪ್ರಕಟಿಸಿ: ಸಾಹಿತಿ ಡಾ. ಹೊಂಗನೂರು ನಂಜಯ್ಯ ಮಾತನಾಡಿ, ಬಿ. ರಾಚಯ್ಯ ಅವರಂಥ ವ್ಯಕ್ತಿ ಈ ನೆಲದಲ್ಲಿ ಹುಟ್ಟಿ ಇಷ್ಟೊಂದು ಅಭಿವೃ ದ್ಧಿ ಕಾರ್ಯಗಳನ್ನು ಮಾಡಿದ್ದರು ಎಂಬುದು ಇತಿಹಾಸವಾಗಬೇಕು. ಈ ಪೀಳಿಗೆ ಜನರು ಅವರನ್ನು ಸ್ಮರಣೆ ಮಾಡಿಕೊಂಡ ಮಾದರಿಯಲ್ಲಿ ಮುಂದಿನ ಪೀಳಿಗೆಯು ನೆನಪು ಮಾಡಿಕೊಳ್ಳುವಂತಹ ಕಾರ್ಯಕ್ರಮಗಳು ಆಗಬೇಕಾಗಿದೆ. ಅವರ ಜನ್ಮ ಶತಮಾನೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡುವ ಜೊತೆಗೆ ಅವರ ಜೀವನ ಚರಿತ್ರೆ ಸಾಧನೆ ಕುರಿತು ಸಂಪುಟವನ್ನು ಪ್ರಕಟಿಸುವ ಚಿಂತನೆ ಮಾಡಿರುವುದಾಗಿ ತಿಳಿಸಿದರು.
ಪ್ರತಿ ವರ್ಷ ಜಯಂತಿ ಆಚರಣೆ: ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ತಮ್ಮ ತಂದೆ ಬಿ. ರಾಚಯ್ಯ ಅವರು ಅಂದು ಮಾಡಿದ್ದ ಕಾರ್ಯ ಗಳನ್ನು ಸ್ಮರಣೆ ಮಾಡಿಕೊಂಡು ಕುಂಭೇಶ್ವರ ಕಾಲೋನಿಯ ಗ್ರಾಮಸ್ಥರು ಪ್ರತಿ ವರ್ಷ ಜಯಂತಿಯನ್ನು ಆಚರಣೆ ಮಾಡುತ್ತಿರುವುದು ಹೆಮ್ಮೆ ತಂದಿದೆ. ಅವರ ದೂರದೃಷ್ಟಿತ್ವ ರಾಜಕಾರಣ ಹಾಗೂ ಶೋಷಿತರು ಮತ್ತು ದೀನದಲಿತರು ಎಲ್ಲಾ ವರ್ಗದ ಬಡವರಿಗೆ ಸವಲತ್ತು ಕಲ್ಪಿಸಿ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಿದ್ದರು. ರಾಜ್ಯದ ಯಾವ ಭಾಗಕ್ಕೆ ಹೋದರು ಸಹ ಅವರ ರಾಚಯ್ಯ ಅವರ ಸೇವೆಯನ್ನು ಸ್ಮರಣೆ ಮಾಡಿಕೊಳ್ಳುತ್ತಾರೆ ಅವರ ಮಕ್ಕಳಾದ ನಮಗೆ ವಿಶೇಷವಾದ ಗೌರವ, ಪ್ರೀತಿಯನ್ನು ನೀಡುತ್ತಿದ್ದಾರೆ. ಜೀವನದಲ್ಲಿ ಇದಕ್ಕಿಂತ ಮಿಗಿಲಾದ ಪುಣ್ಯವಿಲ್ಲ ಎಂದರು.
ಜಿಲ್ಲಾಡಳಿತದಿಂದ ಆಚರಣೆಗೆ ಒತ್ತಾಯ: ಸಾಹಿತಿ ಮಂಜು ಕೋಡಿಉಗನೆ ಮಾತನಾಡಿ, ಬಿ.ರಾಚಯ್ಯ ಅವರ ಜಿಲ್ಲೆಗೆ ನೀಡಿರುವ ಸೇವೆಯನ್ನು ಸ್ಮರಿಸಿ, ಅವರ ಪ್ರಾಮಾಣಿಕತೆ, ಸರಳತೆ ಹಾಗೂ ಸಜ್ಜನಿಕೆಯನ್ನು ಜಿಲ್ಲಾಡಳಿತ ಮನವರಿಕೆ ಮಾಡಿಕೊಂಡು ಬಿ.ರಾಚಯ್ಯನವರ ಜನ್ಮ ದಿನಾಚರಣೆಯನ್ನು ಜಿಲ್ಲಾಡಳಿತವೇ ಆಚರಣೆ ಮಾಡಬೇಕೇಂದು ಒತ್ತಾಯಿಸಿದರು. ರಂಗಕರ್ಮಿಗಳಾದ ಜನ್ನಿ ಹಾಗೂ ಸಿ.ಎಂ. ನರಸಿಂಹಮೂರ್ತಿ ಜನಪದ ಗೀತೆಗಳನ್ನು ಹಾಡಿದರು. ತಾಪಂ ಮಾಜಿ ಅಧ್ಯಕ್ಷ ಆರ್. ಮಹದೇವ್, ಮುಖಂಡರಾದ ಬಸವೇಗೌಡ, ಮಹದೇವಯ್ಯ, ನಂಜುಂಡಯ್ಯ, ಮಂಜು, ಸ್ವಾಮಿ, ಜಿ.ಎಂ.ಮರಿಸ್ವಾಮಿ, ಗೋವಿಂದರಾಜು, ನಿಂಗಯ್ಯ, ಕುಮಾರ್, ಹೊಂಗನೂರು ಚೇತನ್ ಇತ ರರು ಇದ್ದರು.