Advertisement
ಇಲ್ಲಿನ ಜನರು ಕಗ್ಗತ್ತಲಿನಲ್ಲಿ ದಿನ ದೂಡುತ್ತಿದ್ದು, ನಾಗರಿಕ ಜಗತ್ತೇ ತಿಳಿ ಯದಂತೆ ವಾಸಿಸುತ್ತಿದ್ದಾರೆ. ಇದೀಗ ಜಿಲ್ಲಾಧಿಕಾರಿ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದಡಿ ರಾಚಪ್ಪಾಜಿನಗರದಲ್ಲಿ ಶನಿವಾರ ತಾಲೂಕು ಆಡಳಿತ ವಾಸ್ತವ್ಯ ಹೂಡುತ್ತಿದ್ದು, ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆಯೋ ಎಂಬುದು ಶನಿವಾರ ತಿಳಿಯಲಿದೆ.
Related Articles
Advertisement
ಕುಡಿಯುವ ನೀರು: ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ಕಾಡುತ್ತಿದ್ದು, ಗ್ರಾಮ ಪಂಚಾಯಿತಿ ವತಿ ಯಿಂದ ನಿರ್ಮಿಸಿರುವ ಹ್ಯಾಂಡ್ ಪಂಪ್ ಕೆಟ್ಟು ನಿಂತಿದೆ. ಮತ್ತೂಂದು ಕೊಳವೆ ಬಾವಿ ಯಲ್ಲಿ ನೀರಿಲ್ಲದೆ ಬತ್ತಿ ಹೋ ಗಿದೆ. ಗ್ರಾಮದ ಮುಖ್ಯ ಗಲ್ಲಿವೊಂದ ರಲ್ಲಿ ಕೊಳಚೆ ನೀರು ರಸ್ತೆಗೆ ಬಂದು ನಿಲ್ಲುವುದರಿಂದ ಗಬ್ಬು ನಾರುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಗ್ರಾಮಸ್ಥರಲ್ಲಿ ಕಾಡುತ್ತಿದೆ.
ವಿದ್ಯುತ್ ಸಮಸ್ಯೆ: ಗ್ರಾಮ ದಲ್ಲಿ ವಿದ್ಯುತ್ ಸಮಸ್ಯೆ ತಾಂಡವಾಡುತ್ತಿದ್ದು, ಸೆಸ್ಕ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಗ್ಗಿ ನಿಂತಿ ರುವ ವಿದ್ಯುತ್ ಕಂಬದಿಂದ ತಂತಿ ತಂಡಾಗಿದೆ. ಹಲವಾರು ಮನೆಗಳಿಗೆ ವಿದ್ಯುತ್ ಇಲ್ಲದೇ ಕಗ್ಗತ್ತಲಿನಲ್ಲಿ ಜೀವಿಸುವಂತಾಗಿದೆ.
ಗ್ರಾಮಸ್ಥರ ಬೇಡಿಕೆ: ಗ್ರಾಮದಲ್ಲಿ ನೀರು, ವಿದ್ಯುತ್, ಚರಂಡಿ ಸೇರಿದಂತೆ ಮೂಲ ಭೂತ ಸೌಲಭ್ಯಗಳು ವಂಚಿತವಾಗಿದ್ದು, ಕಾಡು ಮಧ್ಯೆ ಜೀವಿಸುತ್ತಿರುವ ನಮಗೆ ಎಲ್ಲರಂತೆ ಬದುಕುಕಟ್ಟಿಕೊಳ್ಳಲು ಅವಕಾಶ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಜಿಲ್ಲಾಧಿಕಾರಿ ನಡೆ ಹಳ್ಳಿಗಳ ಕಡೆ ಕಾರ್ಯ ಕ್ರಮವು ಕಾಡಂಚಿನ ಗ್ರಾಮದ ಸಮ ಸ್ಯೆ ಗಳನ್ನು ಯಾವ ರೀತಿ ಇತ್ಯರ್ಥ ಪಡಿ ಸುತ್ತದೆ ಎಂಬುದನ್ನು ಕಾದು ನೋಡ ಬೇಕಿದೆ.
ಅಹವಾಲು ಸ್ವೀಕಾರ: ತಾಲೂ ಕಿನ ವಿವಿಧ ಇಲಾ ಖೆಗಳ ಅಧಿ ಕಾ ರಿ ಗಳ ಸಮ್ಮು ಖ ದಲ್ಲಿ ಗ್ರಾಮಸ್ಥರಿಂದ ಅಹ ವಾ ಲು ಸ್ವೀಕ ರಿಸಲಾಗುವುದು. ಜೊತೆಗೆ ಸರ್ಕಾ ರ ದಿಂದ ಮಂಜೂ ರಾ ಗಿ ರುವ ವಿವಿಧ ಸವಲತ್ತುಗ ಳನ್ನು ಫಲಾನುಭವಿಗಳಿಗೆ ವಿತರಿಸಲಾಗುವುದು. ಸಂಜೆ 4 ಗಂಟೆಗೆ ವೇದಿಕೆ ಕಾರ್ಯ ಕ್ರಮ ಆಯೋ ಜಿಸಿ ಗ್ರಾಮ ಸ್ಥ ರಿಗೆ ಅರಿವು ಮೂಡಿಸಲಾಗುವುದು ಎಂದು ತಹಶೀಲ್ದಾರ್ ಕುನಾಲ್ ತಿಳಿಸಿದ್ದಾರೆ.