ನವದೆಹಲಿ:ವಿವಿಧ ಕಾರ್ಯಾಚರಣೆಗಳಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಹಿಂದೂ ಮಹಾಸಾಗರದಲ್ಲಿ 120ಕ್ಕೂ ಅಧಿಕ ಯುದ್ಧನೌಕೆಗಳನ್ನು ನಿಯೋಜಿಸಲಾಗಿದೆ ಎಂದು ಶುಕ್ರವಾರ ಸಿಡಿಎಸ್(ರಕ್ಷಣಾ ಪಡೆಗಳ ಮುಖ್ಯಸ್ಥ) ಬಿಪಿನ್ ರಾವತ್ ತಿಳಿಸಿದ್ದಾರೆ.
ಆಯಕಟ್ಟಿನ ಸಮುದ್ರ ಪ್ರದೇಶದಲ್ಲಿ ವಿವಿಧ ದೇಶಗಳು ಯುದ್ಧನೌಕೆಗಳ ಉಪಸ್ಥಿತಿಯನ್ನು ಹೆಚ್ಚಳ ಮಾಡುತ್ತಿರುವುದನ್ನು ಉಲ್ಲೇಖಿಸಿ ರಾವತ್ ಭಾರತದ ಕ್ರಮವನ್ನು ಸಮರ್ಥಿಸಿಕೊಂಡಿರುವುದಾಗಿ ವರದಿ ಹೇಳಿದೆ.
ಅಂತರ್ಜಾಲತಾಣದ ಮೂಲಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜನರಲ್ ರಾವತ್, ಹಿಂದೂ ಮಹಾಸಾಗರ(ಐಒಆರ್)ದಲ್ಲಿ ಯುದ್ಧ ಕಾರ್ಯತಂತ್ರ ಸ್ಥಳಗಳಿಗಾಗಿ ಮತ್ತು ನೆಲೆಗಾಗಿ ಸ್ಪರ್ಧೆ ನಡೆಯುತ್ತಿದೆ, ಇದು ಮುಂದಿನ ದಿನಗಳಲ್ಲಿ ಈ ಪ್ರವೃತ್ತಿ ಇನ್ನೂ ಅಧಿಕವಾಗಲಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಬಹುತೇಕ ದೇಶಗಳು ತಮ್ಮ ಸಮುದ್ರ ಪ್ರದೇಶದಲ್ಲಿ ಬೌಗೋಳಿಕ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಪರಿಗಣಿಸಿ ರಕ್ಷಣಾ ಕಾರ್ಯಕ್ಕೆ ಆದ್ಯತೆ ನೀಡುತ್ತಿದೆ ಎಂದು ಸಿಡಿಎಸ್ ಚೀನಾದ ಹೆಸರನ್ನು ಉಲ್ಲೇಖಿಸದೇ ತಿಳಿಸಿದ್ದಾರೆ.
ಇದನ್ನೂ ಓದಿ:ಅಸ್ಸಾಂ: ಕುಡಿದ ಮತ್ತಿನಲ್ಲಿ ಮದುವೆ ಕಾರ್ಯಕ್ರಮದಲ್ಲಿ ಗಲಾಟೆ; ಓರ್ವ ಸಾವು, ಇಬ್ಬರಿಗೆ ಗಾಯ
ಹಿಂದೂ ಮಹಾಸಾಗರವನ್ನು ಭಾರತೀಯ ನೌಕಾಪಡೆಯ ಹಿಂಭಾಗದಲ್ಲಿದೆ ಎಂದು ಪರಿಗಣಿಸಲ್ಪಟ್ಟಿದೆ. ಇದು ಭಾರತದ ಕಾರ್ಯತಂತ್ರದ ಹಿತಾಸಕ್ತಿಗೆ ನಿರ್ಣಾಯಕವಾಗಿದೆ. ಈ ಪ್ರದೇಶದಲ್ಲಿ ಚೀನಾ ತನ್ನ ಅಸ್ತಿತ್ವ ಹೆಚ್ಚಿಕೊಳ್ಳು ಪ್ರಯತ್ನಿಸುತ್ತಿರುವುದಾಗಿ ವರದಿ ತಿಳಿಸಿದೆ.