Advertisement

Rabkavi Banhatti: ಪ್ರಾಚೀನ ದೇವಸ್ಥಾನಕ್ಕೆ ಬೇಕಿದೆ ರಕ್ಷಣೆ

06:49 PM May 16, 2024 | Team Udayavani |

ರಬಕವಿ-ಬನಹಟ್ಟಿ: ಪ್ರಪಂಚದಲ್ಲಿ ಅದೆಷ್ಟೋ ಕೌತುಕದ ಸಂಗತಿಗಳು ನಮಗೆ ಗೊತ್ತೇಇರದ ವಿಚಾರಗಳು ಇರುತ್ತವೆ. ಅವುಗಳ ಬಗ್ಗೆ ತಿಳಿದು ಕೊಂಡಾಗ ಅಚ್ಚರಿಯಾಗುವುದಂತು ಸತ್ಯ. ಅಂತೆಯೇ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿ ಸಮೀಪದ ಕೃಷ್ಣಾ ನದಿಯ ಒಡಲಿನಲ್ಲಿ ಹುದುಗಿ ಹೋಗಿದ್ದ ಪುರಾತನ ದೇವಸ್ಥಾನವೊಂದು ನೀರು ಕಡಿಮೆ ಆದ ಹಿನ್ನಲೆಯಲ್ಲಿ ಇದೀಗ ಗೋಚರಿಸುತ್ತಿದೆ.

Advertisement

ಆದರೆ ಶತಮಾನದ ಇತಿಹಾಸ ಹೊಂದಿರುವ ದೇವಸ್ಥಾನ ಯಾವುದೇ ಪ್ರವಾಹಕ್ಕೂ ದಕ್ಕೆ ಯಾಗದೇ ಹಾಗೇ ನದಿಯ ಮಧ್ಯದಲ್ಲಿ ನಿಂತಿತ್ತು ಆದರೆ ಇತ್ತೀಚಿಗೆ ಸೇತುವೆ ನಿರ್ಮಾಣ ಕಾರ್ಯ ಮಡುತ್ತಿದ್ದು ಅಲ್ಲಿ ರಸ್ತೆ ನಿರ್ಮಾಣ ಮಾಡಿಕೊಂಡು ಕಾಮಗಾರಿ ಮಾಡುತ್ತಿರುವುದರಿಂದ ಶತಮಾನದ ದೇವಸ್ಥಾನಕ್ಕೆ ದಕ್ಕೆ ಯಾಗುವಂತಾಗಿದೆ.

ರಬಕವಿಯ ಬಾಳಪ್ಪ ಮರೆಗುದ್ದಿಯವರು ಸುಮಾರು 1912ರ ಸುಮಾರಿಗೆ ತಾವು ಕೂಡಿಸಿದ ಹಣದಿಂದ ನದಿ ತೀರದಲ್ಲಿ ಜನರಿಗೆ ಅನುಕೂಲವಾಗಲೆಂದು ಈಶ್ವರ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದರು.

ಈ ಮೊದಲು ನದಿಯ ವ್ಯಾಪ್ತಿ ಬಹಳ ಕಡಿಮೆ ಇದ್ದ ಕಾರಣ ದೇವಾಲಯ ನದಿಯ ದಡದಲ್ಲಿ ಇತ್ತು. ಆದರೆ 1971ರಲ್ಲಿ ವಿರೇಂದ್ರ ಪಾಟೀಲ ಸರ್ಕಾರ ರಬಕವಿ-ಬನಹಟ್ಟಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಕುಡಿಯುವ ನೀರಿನ ಸಲುವಾಗಿ ಬ್ಯಾರೇಜ ನಿರ್ಮಿಸಲು ಅನುಮತಿ ನೀಡಿದರೆ, 1973ರಲ್ಲಿ ದೇವರಾಜ ಅರಸು ಸರ್ಕಾರವಿದ್ದಾಗ ಪ್ರಥಮ ಬಾರಿಗೆ ನೀರನ್ನು ತಡೆ ಹಿಡಿಯಲಾಯಿತು. ಕಾರಣ ದೇವಾಲಯ ನೀರೊಳಗೆ ಮುಳುಗಿ ಹೋಯಿತು. ಈಗ ಅದೇ ನದಿಯ ಮಧ್ಯ ಭಾಗವಾಯಿತು. ನಿಜಕ್ಕೂ ಒಂದು ಅಪರೂಪದ ದೇವಸ್ಥಾನವಾಗಿರುವ ಇದು ಶತಮಾನಗಳು ಕಳೆದರೂ ಯಾವುದೇ ನೀರಿಗೂ ಗರ್ಭಗುಡಿಯಲ್ಲಿರುವ ಮೂರ್ತಿಗಳು ಜಗ್ಗದೇ ಆಲುಗಾಡದೇ ಹಾಗೇ ನಿಂತಿರುವುದು ವಿಶೇಷವಾಗಿದೆ.

ಮಳೆಯ ಕೊರತೆಯಿಂದಾಗಿ ಈ ಬಾರಿಯೂ ಕೂಡಾ ದೇವಸ್ಥಾನ ಸಂಪೂರ್ಣವಾಗಿ ತೆಗೆದುಕೊಂಡಿದೆ. ಸದ್ಯ ದೇವಸ್ಥಾನಕ್ಕೆ ಸೇತುವೆ ನಿರ್ಮಾಣದಿಂದ ತೊಂದರೆಯಾಗಿದೆ.

Advertisement

ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗೆ ಸಂಪರ್ಕ ಬೆಳೆಸುವ ನಿಟ್ಟಿನಲ್ಲಿ ಕೃಷ್ಣಾ ನದಿಗೆ ಸೇತುವೆಯನ್ನು ನಿರ್ಮಾಣ ಮಾಡುವ ಕಾಮಗಾರಿ ನಡೆದಿದೆ. ಸದ್ಯ ನದಿಯ ಮಧ್ಯ ಭಾಗದಲ್ಲಿ ಕಂಬಗಳನ್ನು ನಿಲ್ಲಿಸುವ ಕಾಮಗಾರಿ ನಡೆದಿದೆ. ನದಿಯ ಮಧ್ಯ ಭಾಗದಕ್ಕೆ ತೆರಳಲು ರಸ್ತೆ ಮಾಡಲಾಗಿದೆ.

ಈಗ ದೇವಸ್ಥಾನ ರಸ್ತೆಯ ಕೆಳಗಡೆ ಬಂದಿದ್ದು, ದೇವಸ್ಥಾನದ ಸುತ್ತ ಮುತ್ತ ಬೃಹತ್ ಕಲ್ಲುಗಳು ಬಿದ್ದಿವೆ. ಇನ್ನೂ ಕೆಲವು ಕಲ್ಲುಗಳು ದೇವಸ್ಥಾನದ ಒಳಗಡೆ ಕೂಡಾ ಬಿದ್ದಿವೆ. ಮುಂದಿನ ದಿನಗಳಲ್ಲಿ ಕಲ್ಲು ಮಣ್ಣಿನಿಂದ ದೇವಸ್ಥಾನ ಮುಚ್ಚುವ ಪರಿಸ್ಥಿತಿ ಉಂಟಾಗಬಹುದಾಗಿದೆ. ಇದರಿಂದ ದೇವಸ್ಥಾನಕ್ಕೆ ಧಕ್ಕೆಯಾಗಲಿದೆ.

ನಮ್ಮ ಭಾರತೀಯ ನದಿಗಳು ನಾಗರೀಕತೆಯ ಮೆಟ್ಟಿಲುಗಳಾಗಿದ್ದು, ಅವುಗಳಲ್ಲಿ ಒಂದೊಂದು ವಿಶೇಷತೆಯನ್ನು ಒಳಗೊಂಡಿವೆ. ಸದ್ಯ ಒಂದು ಶತಮಾನದಷ್ಟು ಹಳೆಯದಾದ ಈ ದೇವಾಲಯ ಅನೇಕ ಬರಗಾಲ ಹಾಗೂ ಪ್ರವಾಹಗಳಿಗೆ ಮೂಖ ಸಾಕ್ಷಿಯಾಗಿ ನಿಂತಿದ್ದು, ಸೇತುವೆ ನಿರ್ಮಾಣ ಮಾಡುತ್ತಿರುವ ಗುತ್ತಿಗೆದಾರರು ದೇವಸ್ಥಾನಕ್ಕೆ ಯಾವುದೆ ರೀತಿಯ ಧಕ್ಕೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕಾಗಿದೆ. ಶತಮಾನಗಳಷ್ಟು ಹಿಂದಿನ ಇತಿಹಾಸ ಹೇಳುವ ದೇವಸ್ಥಾನವನ್ನು ಉಳಿಸುವ ನಿಟ್ಟಿನಲ್ಲಿ ಸೇತುವೆ ನಿರ್ಮಾಣ ಮಾಡುತ್ತಿರುವವರು ಗಮನ ನೀಡಬೇಕಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಾ ಇತ್ತ ಗಮನ ನೀಡಬೇಕಾಗಿದೆ.

ಸಂಬಂಧಪಟ್ಟ ಅಧಿಕಾರಿಗಳು ಕೂಡಾ ಇತ್ತ ಗಮನ ನೀಡಬೇಕು ಎಂದು ದಿನನಿತ್ಯ ನದಿ ಸ್ನಾನಕ್ಕೆ ಹೋಗುವ ಅರವಿಂದ ಪತ್ತಾರ, ವೀರೂಪಾಕ್ಷಯ್ಯ ಮಠದ, ಶಾಂತೇಶ ಬಳಗಾರ, ಪಂಚಯ್ಯ ಮಠದ, ಮಹಾದೇವ ಸನ್ಮನಿ ಮತ್ತು ಈಶ್ವರ ಜವಳಗಿ ಆಗ್ರಹಿಸಿದ್ದಾರೆ.

ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next