Advertisement

ರವೀಂದ್ರನಾಥ್‌ ನಮ್‌ ನಾಯಕರು!

12:13 PM Jan 25, 2017 | |

ದಾವಣಗೆರೆ: ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ್‌ ನಮ್ಮ ನಾಯಕರು. ಅವರ ನೇತೃತ್ವದಲ್ಲಿ ನಾನು ಸಹ ಪ್ರಚಾರ ಮಾಡುತ್ತೇವೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್‌ ಹೇಳಿದ್ದಾರೆ. ಮಂಗಳವಾರ ನಗರದ ವಿವಿಧೆಡೆ ಆಗ್ನೇಯ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

ಈ ಉಪ ಚುನಾವಣೆ ಮಾತ್ರವಲ್ಲ ಮುಂದಿನ ವಿಧಾನ ಸಭಾ ಚುನಾವಣೆಯಲ್ಲೂ ಜಿಲ್ಲೆಯ ಎಂಟೂ ಕ್ಷೇತ್ರಗಳಲ್ಲೂ ಗೆಲ್ಲುವ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ನನಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ಸಂಬಂಧ ಇಲ್ಲ. ಪಕ್ಷದ ಒಬಿಸಿ ಘಟಕದ ನೇತೃತ್ವದಲ್ಲಿ ಬೆಂಗಳೂರಿನಲ್ಲಿ 3-4 ಲಕ್ಷ ಜನರ ಸಮಕ್ಷಮದಲ್ಲಿ ಸಮಾವೇಶ ನಡೆಸಿದ್ದೇವೆ.

ಬಿ.ಎಸ್‌. ಯಡಿಯೂರಪ್ಪನವರ ಹೆಸರಲ್ಲಿ ಬ್ರಿಗೇಡ್‌ ಮಾಡುವ ಚಿಂತನೆಯೇ ಇಲ್ಲ. ಸತ್ತರೂ ಬಿಜೆಪಿ ಬಿಡುವುದಿಲ್ಲ ಎಂಬುದಾಗಿ ಹೇಳಿರುವಂಥಹ ರವೀಂದ್ರನಾಥ್‌ ಬ್ರಿಗೇಡ್‌ ಇತರೆ ಚಟುವಟಿಕೆಯಲ್ಲಿ ಭಾಗವಹಿಸುತ್ತಿರುವ ಬಗ್ಗೆ ಕೇಳಿದಾಗ, ಈ ಸಂಬಂಧ ಅವರನ್ನೇ ಕೇಳಬೇಕು. ಏನೇ ಆದರೂ, ರವೀಂದ್ರನಾಥ್‌ ನಮ್ಮ ನಾಯಕರು. ಅವರ ನೇತೃತ್ವದಲ್ಲಿ ವಿಧಾನ ಸಭಾ ಚುನಾವಣೆಯಲ್ಲಿ 8ಕ್ಕೆ 8 ಸ್ಥಾನ ಗೆಲ್ಲುವ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡುತ್ತೇವೆ ಪುನರುಚ್ಚರಿಸಿದರು. 

ಎಪಿಎಂಸಿ ಚುನಾವಣೆಯಲ್ಲಿ ನನಗಿಂತಲೂ ರವೀಂದ್ರನಾಥ್‌ ಹೆಚ್ಚಿನ ಪ್ರಚಾರ ನಡೆಸಿದರು. 29ಮಂದಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆ. ಅದು ಅವರ ಶಕ್ತಿಯನ್ನು ತೋರಿಸುತ್ತದೆ. ಎಪಿಎಂಸಿ ಚುನಾವಣೆ ಫಲಿತಾಂಶ ಮುಂದಿನ ಚುನಾವಣೆ ಫಲಿತಾಂಶದ ದಿಕ್ಸೂಚಿ ಅಲ್ಲ. ಅದರಲ್ಲಿ ಆಯ್ದ ರೈತರು ಮಾತ್ರವೇ ವೋಟ್‌ ಮಾಡುತ್ತಾರೆ. ಹಾಗಾಗಿ ಅದು ದಿಕ್ಸೂಚಿ ಅಲ್ಲ. ಆಡಳಿತ ಪಕ್ಷಗಳವರು ಗೆಲ್ಲುತ್ತಾರೆ.

ಜಿಲ್ಲಾ, ತಾಲೂಕು ಪಂಚಾಯತ್‌ ಚುನಾವಣೆ ಫಲಿತಾಂಶ ಮುಂದಿನ ಚುನಾವಣಾ ಫಲಿತಾಂಶದ ದಿಕ್ಸೂಚಿಯಾಗುತ್ತದೆ. ಕಾಂಗ್ರೆಸ್‌ ಆಡಳಿತದಲ್ಲೂ ಮತ್ತೆ ಜಿಲ್ಲಾ ಪಂಚಾಯತ್‌ ಗೆದ್ದಿದ್ದೇವೆ. 6 ತಾಲೂಕು ಪಂಚಾಯತಿಯಲ್ಲೂ ಅಧಿಕಾರಕ್ಕೆ ಬಂದಿದ್ದೇವೆ. ಜಗಳೂರಿನಲ್ಲಿ ರಿಸರ್ವೇಶನ್‌ ಕಾರಣಕ್ಕೆ ಅಧ್ಯಕ್ಷರು ಬೇರೆಯವರು ಆಗಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

Advertisement

ಬೆಜೆಪಿ ಅಭ್ಯರ್ಥಿಗೇ ಗೆಲುವು…. ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್‌. ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ 5,6 ವೇತನ ಆಯೋಗ ಜಾರಿಗೊಳಿಸಿರು ವುದು ಇಂದಿಗೂ ಶಿಕ್ಷಕರ ನೆನಪಿನಲ್ಲಿದೆ. ಈ ಬಾರಿಯ ಆಗ್ನೇಯ  ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಆರ್‌. ಬಸವರಾಜ್‌(ಪೆಪ್ಸಿ) ಗೆಲುವು  ಸಾಧಿಸಲಿದ್ದಾರೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಮಂಗಳವಾರ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ವೈ.ಎ. ನಾರಾಯಣಸ್ವಾಮಿ ಗೆಲವು ಸಾಧಿಸಿದ್ದರು. ಈಗಿನ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಆರ್‌. ಬಸವರಾಜ್‌(ಪೆಪ್ಸಿ) ಪರ ಎಲ್ಲ ಕಡೆ ಉತ್ತಮ ವಾತಾವರಣ, ಪ್ರತಿಕ್ರಿಯೆ ಇದೆ.

ಈ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದರು. ಜಿಲ್ಲೆಯ ದಾವಣಗೆರೆ, ಹರಿಹರ, ಜಗಳೂರು ತಾಲೂಕಿನಲ್ಲಿ ಮೂರು ದಿನಗಳ ಕಾಲ ನಿರಂತರವಾಗಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಲಾಗುವುದು. ವಾಸ್ತವವಾಗಿ ಸೋಮವಾರದಿಂದಲೇ ಪ್ರಚಾರ ನಡೆಸಬೇಕಿತ್ತು. ಕಲಬುರುಗಿಯಲ್ಲಿ ನಡೆದ ಪಕ್ಷ ರಾಜ್ಯ ಕಾರ್ಯಕಾರಣಿಯಲ್ಲಿ ಭಾಗವಹಿಸಿದ್ದು ಮತ್ತು ಬಂಧುವೊಬ್ಬರ ಮದುವೆ ಕಾರ್ಯದ ಹಿನ್ನೆಲೆಯಲ್ಲಿ ಇಂದಿನಿಂದ ಪ್ರಚಾರ ನಡೆಸುತ್ತಿದ್ದೇನೆ ಎಂದು ತಿಳಿಸಿದರು. 

ರಾಜ್ಯ ಸರ್ಕಾರ ಆದಷ್ಟು ಬೇಗ 7ನೇ ವೇತನ ಆಯೋಗ ರಚಿಸಿ, ಶಿಕ್ಷಕರಿಗೆ ವೇತನ ಸೌಲಭ್ಯ ನೀಡಬೇಕು ಎಂಬುದು ನನ್ನ ಒತ್ತಾಯ. ಈ ಸರ್ಕಾರ 7ನೇ ವೇತನ ಆಯೋಗ ಮಾಡದೇ ಇದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಅಧಿಕಾರಕ್ಕೆ ಬಂದ ನಂತರ 7ನೇ ವೇತನ ಆಯೋಗ ಜಾರಿಗೆ ತರಲಿದೆ ಹಾಗೂ ಶಿಕ್ಷಕ ಸಮುದಾಯದ ಎಲ್ಲಾ ಬೇಡಿಕೆಗೆ ಸ್ಪಂದಿಸಿ, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ, ಆದ್ಯತೆ ನೀಡಲಿದೆ ಎಂದು ತಿಳಿಸಿದರು.  

ಮಾಜಿ ಶಾಸಕ ಎಸ್‌.ವಿ. ರಾಮಚಂದ್ರ, ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌, ಮಾಜಿ ಅಧ್ಯಕ್ಷ ಎಲ್‌. ಬಸವರಾಜ್‌, ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷೆ ಸಹನಾ ರವಿ, ಎಚ್‌.ಎನ್‌. ಶಿವಕುಮಾರ್‌, ಎಚ್‌.ಸಿ. ಜಯಮ್ಮ, ಕೆ. ಹೇಮಂತ್‌ ಕುಮಾರ್‌, ಸಿ. ರಮೇಶ್‌ನಾಯ್ಕ, ಕೆ.ಎನ್‌.  ಓಂಕಾರಪ್ಪ, ಚ್‌.ಎಸ್‌. ಲಿಂಗರಾಜ್‌, ರಾಜನಹಳ್ಳಿ  ಶಿವಕುಮಾರ್‌, ಎನ್‌. ರಾಜಶೇಖರ್‌, ಸೋಗಿ ಶಾಂತ್‌ಕುಮಾರ್‌, ಪ್ರಭು ಕಲುºರ್ಗಿ ಇತರರು ಇದ್ದರು.   

Advertisement

Udayavani is now on Telegram. Click here to join our channel and stay updated with the latest news.

Next