Advertisement
ತುಮಕೂರು: ಮನುಷ್ಯ ತನ್ನ ಒತ್ತಡದ ಜೀವನವನ್ನು ಕೊಂಚ ಹಗುರಾಗಿಸಿಕೊಳ್ಳಲು ನಾಯಿಯಂತಹ ಸಾಕು ಪ್ರಾಣಿಗಳು ಸಹಕಾರಿ, ಆದರೆ ಇಂದು ಕೋವಿಡ್ ಮಹಾಮಾರಿಯಿಂದಾಗಿ ಪ್ರಾಣಿಗಳ ಮೇಲಿನ ಮಮತೆಯೂ ದೂರವಾಗುತ್ತಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ವ್ಯಕ್ತಪಡಿಸಿದರು.
Related Articles
Advertisement
ಪ್ರಯೋಜನ ಪಡೆಯಿರಿ: ಇಂದು ಎಲ್ಲವೂ ಕೋವಿಡ್ ಸೋಂಕಿನದ್ದೇ ಆಗಿದೆ ಇದರ ನಡುವೆ ಹಲವಾರು ರೋಗಗಳು ಇಂದು ಮೆರತೇ ಹೋಗಿವೆ. ರೇಬಿಸ್ ದಿನಾಚರಣೆ ಅಂಗವಾಗಿ ರೇಬಿಸಿ ನಂತಹ ಮಾರಾಣಾಂತಿಕ ರೋಗಗಳ ಬಗ್ಗೆ ಇಲಾಖೆ ಎಚ್ಚೆತ್ತು ಕೊಂಡು ತನ್ನ ಕರ್ತವ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ. ಇಲಾಖೆಯ ಈ ಕಾರ್ಯಕ್ರಮ ಸಾರ್ಥಕವಾಗ ಬೇಕೆಂದರೆ ಸಾಕು ಪ್ರಾಣಿಗಳ ಮಾಲೀಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಿದರು.
ನೆರವು ನೀಡಲು ಸಿದ್ಧ: ಮಹಾನಗರ ಪಾಲಿಕೆ ಮೇಯರ್ ಫರೀದಾ ಬೇಗಂ ಮಾತನಾಡಿ, ಈ ರೋಗದ ಬಗ್ಗೆ ಜಾಗೃತಿ ಅಗತ್ಯ.ಬೀದಿ ನಾಯಿಗಳಿಗೆ ರೇಬಿಸ್ ರೋಗದ ವಿರುದ್ಧ ಲಸಿಕೆ ಹಾಕಿಸುವ ಸಂಬಂಧ ಪಾಲಿಕೆ ವತಿಯಿಂದ ಎಲ್ಲಾ ರೀತಿಯ ನೆರವನ್ನು ಪಶುವೈದ್ಯಕೀಯ ಇಲಾಖೆಗೆ ನೀಡಲು ಸಿದ್ಧ ಎಂದರು.
ಡಿ.ಎಚ್.ಒ ಡಾ.ನಾಗೇಂದ್ರಪ್ಪ ಮಾತನಾಡಿ, ಪ್ರಾಣಿ ಜನ್ಯ ರೋಗಗಳಿಂದ ಜನರನ್ನು ರಕ್ಷಿಸುವ ಉದ್ದೇಶದಿಂದ ಹಲವಾರು ಸವಲತ್ತುಗಳನ್ನು ಸರ್ಕಾರ ನೀಡಿದೆ. ಹುಚ್ಚು ನಾಯಿಕಡಿತದ ವಿರುದ್ಧ ಲಸಿಕೆ ಸಾಕಷ್ಟು ಲಭ್ಯವಿದ್ದು, ಒಂದು ವೇಳೆ ತಾಲೂಕು ಆಸ್ಪತ್ರೆಗಳಲ್ಲಿ ಲಭ್ಯವಿಲ್ಲದಿದ್ದರೆ ತಕ್ಷಣವೇ ಕೊಂಡುಕೊಳ್ಳಲು ಅಗತ್ಯ ಮಂಜೂರಾತಿಯನ್ನು ನೀಡಲಾಗಿದೆ ಎಂದು ತಿಳಿಸಿದರು.
ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ.ಕ್ರೋಟೇಶಪ್ಪ, ಡಾ.ನವೀನ್ ಜವಳಿ, ಜಿಲ್ಲಾ ಪಶುವೈದ್ಯಕೀಯ ಸಂಘದಅಧ್ಯಕ್ಷಡಾ.ರುದ್ರಪಸಾದ್,ಕುರಿಅಭಿವೃದ್ಧಿ ಮಂಡಳಿಯ ಉಪನಿರ್ದೇಶಕ ಡಾ.ನಾಗಣ್ಣ, ಇನ್ನರ್ ವ್ಹೀಲ್ ಕ್ಲಬ್‌ನ ಪ್ರಿಯಾ ಪ್ರದೀಪ್, ಡಾ. ಲಕ್ಷ್ಮೀ ನಾರಾಯಣ್, ಪಶುವೈದ್ಯಕೀಯ ಸಂಘದ
ಉಪಾಧ್ಯಕ್ಷ ಡಾ.ದಿವಾಕರ್, ಡಾ.ಶಶಿಕಾಂತ್ ಬೂದಿಹಾಳ್, ಡಾ.ನಾಗಭೂಷಣ್ ಇದ್ದರು. ಉಚಿತ ಲಸಿಕೆ ಕಾರ್ಯಕ್ರಮದಲ್ಲಿ ಸುಮಾರು 300ಕ್ಕೂ ಹೆಚ್ಚು ಸಾಕು ಪ್ರಾಣಿಗಳಿಗೆ ಪಶುವೈದ್ಯ ರಾದ ಡಾ.ವೆಂಕಟೇಶಬಾಬು, ಡಾ. ವಿಶ್ವನಾಥ್, ಡಾ. ಪ್ರಿಯಾಂಕ ಮತ್ತು ಡಾ. ಶರ್ಮಿಳಾ ಚುಚ್ಚುಮದ್ದು ನೀಡಿದರು.