ಬೆಂಗಳೂರು: ನಗರದಲ್ಲಿ ಪ್ರತಿದಿನಕನಿಷ್ಠ 800 ಬೀದಿನಾಯಿಗಳಿಗೆರೇಬಿಸ್ ಚುಚ್ಚುಮದ್ದು ಹಾಕುವಯೋಜನೆ ಹಮ್ಮಿಕೊಳ್ಳಲಾಗಿದೆಎಂದು ಪಾಲಿಕೆ ಆಯುಕ್ತ ಗೌರವ್‌ಗುಪ್ತ ಹೇಳಿದರು.ವಿಶ್ವ ಪ್ರಾಣಿಜನ್ಯ ರೋಗ ತಡೆದಿನಾಚರಣೆ ಅಂಗವಾಗಿಮಂಗಳವಾರ ಬಿಬಿಎಂಪಿಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿರೇಬಿಸ್ ಚುಚ್ಚುಮದ್ದು ನೀಡಲುಮೀಸಲಿಟ್ಟಿರುವ 8 ವಾಹನಗಳಿಗೆಚಾಲನೆ ನೀಡಿ ಮಾತನಾಡಿದರು.
ಪಾಲಿಕೆ ವ್ಯಾಪ್ತಿಯ 198 ವಾರ್ಡ್‌ಗಳಲ್ಲಿ ಕನಿಷ್ಠ ಶೇ.70 ಬೀದಿನಾಯಿಗಳಿಗೆರೇಬಿಸ್‌ಲಸಿಕೆಯನ್ನುಪ್ರತಿ ವರ್ಷ ಹಾಕಲು ಯೋಜನೆಯನ್ನು ರೂಪಿಸಲಾಗಿದೆ. ಪ್ರಸ್ತುತ ಸಾಲಿನಲ್ಲಿ ಲಸಿಕಾಕಾರ್ಯಕ್ರಮದಡಿಯಲ್ಲಿ 44 ವಾರ್ಡ್‌ಗಳಲ್ಲಿ ಬೀದಿನಾಯಿಗಳಿಗೆ ಲಸಿಕಾ ಕಾರ್ಯಕ್ರವನ್ನುಪೂರ್ಣಗೊಳಿಸಲಾಗಿದೆ ಎಂದರು.
6 ತಿಂಗಳಲ್ಲಿ 41,934 ಬೀದಿನಾಯಿಗಳಿಗೆ ಲಸಿಕೆ:ಶಂಕಿತ ಮತ್ತು ರೇಬಿಸ್ ರೋಗಗ್ರಸ್ತ ನಾಯಿಹಿಡಿದಿರುವ ಸುತ್ತಲಿನ ಪ್ರದೇಶದಲ್ಲಿ ರಿಂಗ್ ಲಸಿಕಾಕಾರ್ಯಕ್ರಮ ನಿರ್ವಹಿಸಲಾಗಿದೆ. 2020ರಲ್ಲಿ47,167 ಮತ್ತು2021ರಲ್ಲಿ ಮೊದಲ ಆರು ತಿಂಗಳಲ್ಲಿ41,934 ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆಹಾಕಲಾಗಿದೆ. ಸಂಖ್ಯೆ ಹೆಚ್ಚಿಸುವುದು ಪಾಲಿಕೆಗುರಿಯಾಗಿದೆ ಎಂದರು
ರೇಬಿಸ್ ಸಹಾಯವಾಣಿ: ರೇಬಿಸ್ ತಡೆಗಟ್ಟುವನಿಟ್ಟಿನಲ್ಲಿಪಾಲಿಕೆಈಗಾಗಲೇರೇಬಿಸ್‌ಸಹಾಯವಾಣಿಯನ್ನು ಪ್ರಾರಂಭಿಸಿದೆ. ಈ ಸಹಾಯವಾಣಿಯುಸಾರ್ವಜನಿಕರಿಂದ ರೇಬಿಸ್ ರೋಗದ ಮತ್ತು ಶಂಕಿತರೇಬಿಸ್ ರೋಗಗ್ರಸ್ಥ ಪ್ರಾಣಿಗಳ ಮಾಹಿತಿಪಡೆಯಲಿದೆ. ಆ ನಂತರ ರೇಬಿಸ್ ಇರುವಪ್ರಾಣಿಗಳನ್ನು ಹಿಡಿದು ಪ್ರತ್ಯೇಕ ಕೊಠಡಿಯಲ್ಲಿರಿಸಿತೀವ್ರವಾಗಿ ನಿಗವಹಿಸಲಾಗುವುದು ಎಂದರು.ಒಂದು ವೇಳೆ ಪ್ರಾಣಿ ಮರಣ ಹೊಂದಿದರೆ ಅದರಮೆದುಳು ಮಾದರಿಯನ್ನು ರೋಗ ದೃಢಪಡಿಸಲುಪ್ರಯೋಗಾಲಯಕ್ಕೆ ಒಳಪಡಿಸಲಾಗುವುದು.ಈಗಗಾಲೇ ವಿಶ್ವ ಆರೋಗ್ಯ ಸಂಸ್ಥೆ ಮತ್ತುವಿಶ್ವಪ್ರಾಣಿಜನ್ಯ ಆರೋಗ್ಯ ಸಂಸ್ಥೆ ರೇಬಿಸ್‌ರೋಗವನ್ನು 2030ರೊಳಗೆ ವಿಶ್ವಾದ್ಯಂತನಿರ್ಮೂಲನೆಮಾಡಲು ಪಣತೊಟ್ಟಿದೆ. ಆ ನಿಟ್ಟಿನಲ್ಲಿ ಕಾರ್ಯನಡೆಯುತ್ತಿದೆ ಎಂದರು. ಪಾಲಿಕೆಯ ವಿಶೇಷಆಯುಕ್ತ(ಪಶುಪಾಲನೆ) ಡಿ.ರಂದೀಪ್, ಜಂಟಿನಿರ್ದೇಶಕ(ಪಶುಪಾಲನೆ) ಡಾ. ಮಂಜುನಾಥ್‌ಶಿಂಧೆ ಸೇರಿದಂತೆ ಇತರರಿದ್ದರು.