ರಬಕವಿ-ಬನಹಟ್ಟಿ : ಹೊಸ ಬಸ್‌ನಿಲ್ದಾಣದ ಪಕ್ಕದಲ್ಲಿನ ಪ್ರಮುಖ ರಸ್ತೆ ಪಕ್ಕದಲ್ಲಿನ ಬೃಹತ್ ಆಲದ ಮರದ ಕೊಂಬೆಯೊಂದು ಮುರಿದು ಬಿದ್ದ ಪರಿಣಾಮ ಯುವಕ ನೋರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಬುಧವಾರ ರಾತ್ರಿ 7.30ಕ್ಕೆ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ರಬಕವಿ ವಿದ್ಯಾನಗರ ನಿವಾಸಿ ಮಹಾದೇವ ದುಂಡಪ್ಪ ಮಹಾಲಿಂಗಪುರ(41) ಸಾವನ್ನಪ್ಪಿದ ಯುವಕ. ಬುಧುವಾರ ಸಂತೆ ದಿನವಾಗಿದ್ದು, ಈ ರಸ್ತೆಯಲ್ಲಿ ಪ್ರತಿ ಬುಧವಾರ ಸಂತೆ ಸೇರಿ ಜನಜಂಗುಳಿಯಿಂದ ಕೂಡಿದ್ದು, ರಾತ್ರಿ ಹೊತ್ತು 7.30 ಆಗಿದ್ದರಿಂದ ಸಂತೆಯಲ್ಲಿ ಅಲ್ಪ ಪ್ರಮಾಣದಲ್ಲಿ ಜನ ಕಡಿಮೆಯಾಗಿತ್ತು,
ಈ ವೇಳೆ ಒಮ್ಮಿಂದೊಮ್ಮೇಲೆ ಆಲದ ಮರದ ಕೊಂಬೆಯೊಂದು ಮುರಿದು ಬಿದ್ದಿದ್ದು, ಸಂತೆಯಲ್ಲಿ ವ್ಯಾಪಾರ ಮಾಡುತ್ತಿದ್ದ ಮಹಾದೇವ ಎಂಬುವವರು ಕೊಂಬೆಯಡಿಗೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಉಳಿದ ಜನ ಓಡೋಡಿ ಹೋಗಿ ಪರಾಗಿದ್ದಾರೆ. ಘಟನೆಯಿಂದ ಕೆಲ ಮಹಿಳೆಯರಿಗೆ ಸಣ್ಣ ಪುಟ್ಟ ಗಾಯಗಳಾದ ವರದಿಯಾಗಿದೆ.
ಈ ಕುರಿತು ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಕೆ ಮುಂದುವರೆದಿದೆ.
ಇದನ್ನೂ ಓದಿ : ಗುಣಮಟ್ಟದ ಬೋಧನೆಗೆ ತರಬೇತಿ ಅತ್ಯಗತ್ಯ: ಪ್ರಶಾಂತ್