Advertisement
ಒಟ್ಟು 36.38 ಕೋಟಿ ರೂ.ಗಳ ಬಜೆಟ್‌ನಲ್ಲಿ 29.6 ಕೋಟಿ ರೂ.ಗಳಷ್ಟು ಜಮಾ-ಖರ್ಚಿನ ಬಗ್ಗೆ ಆಯವ್ಯಯ ಮಂಡಿಸಿದರು. ನಗರಸಭೆಯ ಅಭಿವೃದ್ಧಿ ದೃಷ್ಠಿಯಿಂದ ಬಜೆಟ್ ಮಂಡಿಸಲಾಗಿದ್ದು ಎಲ್ಲ ಸದಸ್ಯರು ಹಾಗೂ ಸಾರ್ವಜನಿಕರು ನಗರದ ಸೌಂದರ್ಯಕರಣ ಹಾಗೂ ಅಭಿವೃದ್ಧಿ ದೃಷ್ಠಿಯಲ್ಲಿ ಸಹಕರಿಸಬೇಕು ಎಂದು ಶ್ರೀಶೈಲ ಬೀಳಗಿ ಹೇಳಿದರು.
Related Articles
Advertisement
ಪೌರಾಯುಕ್ತ ಶ್ರೀನಿವಾಸ ಜಾಧವ ಮಾತನಾಡಿ, ಸರ್ಕಾರಿ ಆಸ್ತಿಗಳನ್ನು ಲಪಟಾಯಿಸಿರುವ, ಬಾಡಿಗೆ ಮೂಲಕ ಅಕ್ರಮವಾಗಿ ಬೇರೋಬ್ಬರಿಗೆ ಬಳಕೆಗೆ ಅವಕಾಶ ನೀಡುತ್ತಿರುವವರು ಸ್ವಯಂಪ್ರೇರಿತವಾಗಿ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಶೀಘ್ರವೇ ಗಂಭೀರ ಸಮಸ್ಯೆ ಎದುರಿಸಬೇಕಾಗುವದೆಂದು ಭೂಗಳ್ಳರಿಗೆ ಖಡಕ್ ಎಚ್ಚರಿಕೆ ನೀಡಿದರು.
ಅಕ್ರಮ ಹಾಗು ಕರ ತುಂಬದೆ ನೀರು ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ನಗರಸಭೆ ಗಮನಕ್ಕೆ ಬಂದಿದ್ದು, ಅಂಥವರು ನಗರಸಭೆಗೆ ಹಣ ಭರಣಾ ಮಾಡಿಕೊಂಡು ಅಧಿಕೃತವಾಗಿಸಿಕೊಳ್ಳಬೇಕು. ಇಲ್ಲವಾದಲ್ಲಿ ನಮ್ಮ ಆಧಿಕಾರಿಗಳು ಸ್ವತಃ ಪರಿಶೀಲನೆ ನಡೆಸಿ ನಗರಸಭೆಯ ಕೆಎಂಸಿ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲಾಗುವದೆಂದು ಜಾಧವ ತಿಳಿಸಿದರು.
ಆಯವ್ಯಯ ಮಂಡನೆ ಸಂದರ್ಭ ಆಡಳಿತಾರೂಢ ಬಿಜೆಪಿ ಸದಸ್ಯರು ಮಾತ್ರ ಕಂಡು ಬಂದು ವಿಪಕ್ಷದ ಸದಸ್ಯರ ಗೈರು ಎದ್ದು ಕಾಣುತ್ತಿತ್ತು. ಆಯವ್ಯಯ ಮಂಡನೆಗೆ ಸಂಜಯ ತೆಗ್ಗಿ ಸಹಮತ ತೋರಿಸಿದರೆ ಯಲ್ಲಪ್ಪ ಕಟಗಿ ಅನುಮೋದಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಬಾಳವ್ವ ಕಾಖಂಡಕಿ, ವ್ಯವಸ್ಥಾಪಕ ಸುಭಾಸ ಖುದಾನಪುರ, ಬಸವರಾಜ ಶರಣಪ್ಪನವರ, ಬಿ. ಎಂ. ಡಾಂಗೆ, ಎಸ್. ಎಂ. ಕಲಬುರ್ಗಿ, ವಿ. ಆಯ್. ಬೀಳಗಿ, ಮುಕೇಶ ಬನಹಟ್ಟಿ , ವೈಶಾಲಿ ಹಿಪ್ಪರಗಿ, ಎಂ. ಎಂ. ಮುಘಳಖೋಡ, ರಾಜಕುಮಾರ ಹೊಸೂರ, ಶೋಭಾ ಹೊಸಮನಿ, ಸಂಗೀತಾ ಕೋಳಿ, ಮುತ್ತಪ್ಪ ಚೌಡಕಿ, ಎಸ್. ಎಂ. ಮಠದ, ರಮೇಶ ಮಳ್ಳಿ, ಅಭಿನಂದನ ಸೋನಾರ, ಪ್ರಭಾಕರ ಮೊಳೇದ, ಗೌರಿ ಮಳ್ಳಿ, ಅರುಣ ಬುದ್ನಿ ಸೇರಿದಂತೆ ನಗರಸಭೆ ಸದಸ್ಯರು, ನಾಮನಿರ್ದೇಶಿತ ಸದಸ್ಯರು ಸಿಬ್ಬಂದಿಗಳು ಇದ್ದರು.