ನ್ಯಾಶನಲ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಕರ್ನಾಟಕ ರಾಜ್ಯದ ಸೌತ್ ಇಂಡಿಯನ್ ಕರಾಟೆ ಫೆಡ್‌ರೇಷನ್ ಸಂಸ್ಥೆಯ 9 ಕರಾಟೆ ವಿದ್ಯಾರ್ಥಿಗಳು ಆಯ್ಕೆಯಾಗುವ ಮೂಲಕ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಆಡಲಿಕ್ಕೆ ಅವಕಾಶ ಪಡೆದಿದ್ದಾರೆ.
Advertisement
ಸಾಕಷ್ಟು ಕಸರತ್ತುಗಳೊಂದಿಗೆ ವಿವಿಧ ರಾಜ್ಯಗಳಿಂದ ಭಾಗವಹಿಸಿದ್ದ ಮೂರು ಸಾವಿರಕ್ಕೂ ಅಧಿಕ ಕರಾಟೆ ಕ್ರೀಡಾ ವಿದ್ಯಾರ್ಥಿಗಳ ಜೊತೆಗೆ ಸೆಣಸಾಡಿ ಅದ್ಭುತ ಆಟದ ವೈಖರಿಯಿಂದ ಪಶ್ಚಿಮ ಬಂಗಾಳ, ಹರಿಯಾಣ, ಗುಜರಾತ್,ಆಂಧ್ರಪ್ರದೇಶ, ತಮಿಳುನಾಡು, ಆಸ್ಸಾಂ, ಸಿಕ್ಕಿಂ, ಓರಿಸ್ಸಾ, ಬಿಹಾರ, ಕೇರಳ, ಮಹಾರಾಷ್ಟ್ರ, ರಾಜಸ್ತಾನ, ಪಂಜಾಬ್, ಜಾರ್ಖಂಡ, ತೆಲಂಗಾಣ, ಮಧ್ಯಪ್ರದೇಶ, ಉತ್ತರಾಖಂಡ್, ದೆಹಲಿ ಹಾಗೂ ವಿವಿಧ ರಾಜ್ಯಗಳ ಕರಾಟೆ ಆಟಗಾರರ
ಜೊತೆ ಕಠಿಣ ಆಟದ ಸೋಲು ಗೆಲುವಿನ ಮೆಲುಗೈದೊಂದಿಗೆ 4 ಚಿನ್ನ, 3 ಬೆಳ್ಳಿ ಮತ್ತು 4 ಕಂಚು ಪದಕಗಳನ್ನು ಪಡೆಯುವಲ್ಲಿ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಆಟಗಾರರು ಪಡೆದರು.