Advertisement

ಥಿಯೇಟರ್‌ನತ್ತ ರಾಕ್ಷಸರು ಬರ್ತಿದ್ದಾರೆ!

02:18 PM Dec 06, 2022 | Team Udayavani |

ಸಾಯಿಕುಮಾರ್‌ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ “ರಾಕ್ಷಸರು’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ.

Advertisement

ಕನ್ನಡ, ಹಿಂದಿ, ತೆಲುಗು, ತಮಿಳು, ಮಲೆಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ನಿರ್ಮಾಣವಾಗಿರುವ “ರಾಕ್ಷಸರು’ ಸಿನಿಮಾದ ಮೊದಲ ಟೀಸರ್‌ ಮತ್ತು ಹಾಡುಗಳು ಇತ್ತೀಚೆಗೆ ಬಿಡುಗಡೆಯಾಯಿತು.

“ಗರುಡಾದ್ರಿ ಸಿನಿಮಾಸ್‌’ ಬ್ಯಾನರ್‌ನಲ್ಲಿ ರಮೇಶ್‌ ಕಶ್ಯಪ್‌ ನಿರ್ಮಾಣ ಮಾಡಿರುವ “ರಾಕ್ಷಸರು’ ಸಿನಿಮಾಕ್ಕೆ ರಜತ್‌ ನಿರ್ದೇಶನವಿದೆ.

“ರಾಕ್ಷಸರು’ ಸಿನಿಮಾದ ಟೀಸರ್‌ ಮತ್ತು ಹಾಡುಗಳ ಬಿಡುಗಡೆ ಬಳಿಕ ಮಾತನಾಡಿದ ನಟ ಸಾಯಿಕುಮಾರ್‌, “ಸುಮಾರು 25 ವರ್ಷಗಳ ಹಿಂದೆ ತೆರೆಕಂಡ “ಪೊಲೀಸ್‌ ಸ್ಟೋರಿ’ ಸಿನಿಮಾ ನನಗೆ ದೊಡ್ಡ ಹೆಸರು, ಜನಪ್ರಿಯತೆ ತಂದುಕೊಟ್ಟಿತು. ಅದಾದ ನಂತರ ನಾನು ಪೊಲೀಸ್‌ ಆಗಿ ಕಾಣಿಸಿಕೊಂಡ ಬಹುತೇಕ ಸಿನಿಮಾಗಳು ಹಿಟ್‌ ಆದವು. ಈಗ ಮತ್ತೂಮ್ಮೆ ನಾನು ಪೊಲೀಸ್‌ ಆಫೀಸರ್‌ ಆಗಿ ಕಾಣಿಸಿಕೊಂಡಿರುವ “ರಾಕ್ಷಸರು’ ಸಿನಿಮಾ ತೆರೆಗೆ ಬರುತ್ತಿದೆ.  ಈ ಸಿನಿಮಾ ಕೂಡ ನನ್ನ ಹಿಂದಿನ ಪೊಲೀಸ್‌ ಸ್ಟೋರಿ ಸಿನಿಮಾಗಳಂತೆ ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಥಾಹಂದರದ ಬಗ್ಗೆ ಮಾತನಾಡಿದ ನಿರ್ಮಾಪಕ ರಮೇಶ್‌ ಕಶ್ಯಪ್‌, “ಐವರು ಕ್ರಿಮಿನಲ್‌ಗ‌ಳು ಕ್ರೈಂ ಮಾಡಿ ತಲೆ ಮರಸಿಕೊಂಡಿರುತ್ತಾರೆ. ಇವರನ್ನು ಪೊಲೀಸರು ಹೇಗೆ ಹುಡುಕುತ್ತಾರೆ? ಎಂಬುದೇ ಸಿನಿಮಾದ ಕಥೆಯ ಒಂದು ಎಳೆ. ಪೊಲೀಸರ ಸಾಹಸಗಾಥೆ ಈ ಸಿನಿಮಾದಲ್ಲಿದ್ದು, ಈ ಸಿನಿಮಾವನ್ನು ಪೊಲೀಸರಿಗೆ ಅರ್ಪಿಸುತ್ತಿದ್ದೇವೆ’ ಎಂದರು.

Advertisement

“ಮೊದಲ ಬಾರಿಗೆ ಈ ಸಿನಿಮಾಕ್ಕೆ ಕ್ರೈಂ-ಥ್ರಿಲ್ಲರ್‌, ಆ್ಯಕ್ಷನ್‌ ಕಥೆ ಬರೆದಿದ್ದೇನೆ. ಸಿನಿಮಾದಲ್ಲಿ ಹೆಚ್ಚು ಕ್ರೈಂ ದೃಶ್ಯಗಳಿದ್ದರಿಂದ, ಎಲ್ಲಾ ಭಾಷೆಗಳಲ್ಲೂ ಸೆನ್ಸಾರ್‌ ಸರ್ಟಿಫೀಕೆಟ್‌ ಪಡೆಯುವುದು ಕಷ್ಟವಾಯಿತು. ನಮ್ಮ ಸುತ್ತಮುತ್ತಲಿನ ನೈಜ ಘಟನೆಗಳನ್ನೇ ತೆಗೆದುಕೊಂಡು ಈ ಸಿನಿಮಾ ಮಾಡಲಾಗಿದೆ’ ಎಂಬುದು “ರಾಕ್ಷಸರ’ ಬಗ್ಗೆ ಕಥೆಗಾರ ಅಜಯ್‌ ಕುಮಾರ್‌ ಮಾತು.

“ಈ ಸಿನಿಮಾದಲ್ಲಿ 8 ಆ್ಯಕ್ಷನ್‌ಗಳಿವೆ. ಕ್ರೈಂ ಸ್ಟೋರಿ ಸಿನಿಮಾದಲ್ಲಿದ್ದರೂ, ಎಲ್ಲರೂ ನೋಡಲೇಬೇಕಾದ, ಮೆಸೇಸ್‌ ಇರುವಂಥ ಸಿನಿಮಾವಿದು’ ಎಂಬ ಭರವಸೆ ಮಾತು ಸಾಹಸ ನಿರ್ದೇಶಕ ಥ್ರಿಲ್ಲರ್‌ ಮಂಜು ಅವರದ್ದು. “ರಾಕ್ಷಸರು’ ಸಿನಿಮಾದಲ್ಲಿ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಪುನೀತ್‌, ಅಂಜಿ, ಜಿತಿನ್‌ ಅವಿ, ಕಿರಣ್‌ ಸುನೀಲ್‌, ರುಷಿಕಾ ರಾಜ್‌, ಚೈತ್ರಾ ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು.

ಉಳಿದಂತೆ ರಾಜಶೇಖರ್‌, ನಾಜರ್‌, ಸುಮನ್‌, ಅವಿನಾಶ್‌, ನೀರಜ್‌ ಯಾದವ್‌ ಮುಂತಾದವರು “ರಾಕ್ಷಸರು’ ಚಿತ್ರದ ಇತರ ಪಾತ್ರಗಳಲ್ಲಿ ಕಾಣಿಸಿ ಕೊಂಡಿದ್ದಾರೆ. “ರಾಕ್ಷಸರು’ ಚಿತ್ರಕ್ಕೆ ಎಮಿಲ್‌ ಸಂಗೀತ, ಜನಾರ್ದನ ಬಾಬು ಛಾಯಾಗ್ರಹಣ, ಕೆ.ಎಂ.ಪ್ರಕಾಶ್‌ ಸಂಕ ಲನವಿದೆ. ಅಂದಹಾಗೆ, “ಗಟ್ಟಿ ಗುಂಡಿಗೆ ಇರೋರ್ಗೆ ಮಾತ್ರ’ ಎಂಬ ಅಡಿಬರಹ ವಿರುವ “ರಾಕ್ಷಸರು’ ಚಿತ್ರ ಇದೇ ಡಿಸೆಂಬರ್‌ 16ಕ್ಕೆ ತೆರೆ ಕಾಣುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next