Advertisement
ಮಂತ್ರಿ ಇರಲಿ, ಶಾಸಕರಿರಲಿ ಅಥವಾ ವಿರೋಧ ಪಕ್ಷದಲ್ಲಿರಲಿ ತಾವು ಹುಟ್ಟಿ ಬೆಳೆದ ಪಟ್ಟಣದ ಬಗ್ಗೆ ಅಪಾರ ಕಾಳಜಿ ಹೊಂದಿರುವ ಆರ್.ವಿ.ಡಿ ಅವರು ಪಟ್ಟಣದ ಜನತೆಗಾಗಿ ಹತ್ತು ಹಲವಾರು ಯೋಜನೆ ಜಾರಿ ಮಾಡಿ ಮೂಲಸೌಕರ್ಯ ಒದಗಿಸಿಕೊಡುವಲ್ಲಿ ನಿಸ್ಸೀಮರು. ಅವರ ಸುದೀರ್ಘ ನಾಲ್ವತ್ತು ವರ್ಷಗಳ ರಾಜಕೀಯ ಪಯಣದಲ್ಲಿ ಪಟ್ಟಣದ ಸಾರ್ವಜನಿಕರನ್ನು ಕಿಂಚಿತ್ತು ಕಡೆಗಣಿಸದೆ ಅವರ ನೆರವಿಗೆ ನಿಂತಿದ್ದಾರೆ.
Related Articles
Advertisement
ಈ ಎಲ್ಲ ಯೋಜನೆ ಮತ್ತು ಕಾಮಗಾರಿಗಳ ರೂವಾರಿಯಾಗಿರುವ ದೇಶಪಾಂಡೆ ಅವರಿಂದಾಗಿ ಹಳಿಯಾಳದ ಭೂಮಿಗೆ ಬಂಗಾರದ ಬೆಲೆ ದೊರೆಯುತ್ತಿದ್ದು, ಕೆಲ ವರ್ಷಗಳ ಹಿಂದೆ ಸಾವಿರ ರೂಪಾಯಿಗಳಲ್ಲಿದ್ದ ಭೂಮಿ ಇಂದು ಲಕ್ಷಾಂತರ ರೂಪಾಯಿ ಬೆಲೆ ಬಾಳುತ್ತಿದೆ. ಅಲ್ಲದೆ ಸಕಲ ಸೌಲಭ್ಯಗಳನ್ನು ಹೊಂದಿರುವ ಹಳಿಯಾಳ ಪಟ್ಟಣದಲ್ಲಿ ಶಾಶ್ವತವಾಗಿ ನೆಲೆಯೂರುತ್ತಿರುವವರ ಸಂಖ್ಯೆ ಕೆಲ ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಶಿಕ್ಷಕರು, ಅಧಿಕಾರಿಗಳು, ಸೈನಿಕರು, ಗುತ್ತಿಗೆದಾರರು, ವ್ಯಾಪಾರಿಗಳು, ಪರ ಪಟ್ಟಣಗಳ ಜನತೆ ಹಳಿಯಾಳದಲ್ಲಿ ವಾಸಿಸಲು ಅಣಿಯಾಗುತ್ತಿದ್ದಾರೆ.
ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ: ಕೊಳಗೇರಿ ನಿವಾಸಿಗಳ ಸಮಸ್ಯೆಯನ್ನರಿತ ದೇಶಪಾಂಡೆಯವರು 40 ವರ್ಷಗಳಿಂದ ಸಾಧ್ಯವಾಗದ ಸಮಸ್ಯೆಯನ್ನು ಪರಿಹರಿಸಲು ಸರಕಾರ ಮಟ್ಟದಲ್ಲಿ ಸಾಕಷ್ಟು ಪ್ರಯತ್ನಿಸಿ ಅವರಿಗೆ ಸ್ವಂತ ನಿವೇಶನ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದು,ಇತ್ತೀಚೆಗೆ 290 ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಿದ್ದಾರೆ. ಅಲ್ಲದೆ ಸ್ಲಮ್ ಬೋರ್ಡ್ ಮುಖಾಂತರ 661 ಮನೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ನೆರವಾಗಿದ್ದಾರೆ.
ಸ್ವಚ್ಛತೆಯಲ್ಲಿ ಹಲವು ಬಾರಿ ಹಳಿಯಾಳ ಪ್ರಥಮ: ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವ ಆರ್.ವಿ. ದೇಶಪಾಂಡೆ ಅವರು ಬೆಳ್ಳಂಬೆಳಗ್ಗೆ ಪಟ್ಟಣದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಸ್ವಚ್ಛತೆ ಕುರಿತು ಪರಿಶೀಲನೆ ನಡೆಸುತ್ತಾರೆ. ಅಲ್ಲದೆ ಸೂಕ್ತ ಸಲಹೆ-ಸೂಚನೆ ನೀಡಿ ಸ್ವತ್ಛತಾ ಕಾರ್ಯಕ್ಕೆ ಹಿನ್ನಡೆ ಉಂಟಾಗಬಾರದೆಂದು ಖಡಕ್ ಆದೇಶ ನೀಡುತ್ತಾರೆ. ದೇಶಪಾಂಡೆಯವರಿಗೆ ಸ್ವತ್ಛತೆ ಕುರಿತು ಇರುವ ಕಾಳಜಿ ಹಾಗೂ ಪುರಸಭೆ ಮುಖ್ಯಾಧಿಕಾರಿ, ಪರಿಸರ ಅಧಿಕಾರಿ, ಪೌರ ಕಾರ್ಮಿಕರ ಪ್ರತಿನಿತ್ಯದ ಪರಿಶ್ರಮದಿಂದಾಗಿ 2021-22ರ ಸ್ವಚ್ಛ ಸರ್ವೇಕ್ಷಣ ಅಭಿಯಾನದ 25,000 ಜನಸಂಖ್ಯೆ ಹೊಂದಿರುವ ಪಟ್ಟಣಗಳ ಪೈಕಿ ಹಳಿಯಾಳ ಪಟ್ಟಣ ದಕ್ಷಿಣ ವಲಯದಲ್ಲಿ 7ನೇ ಸ್ಥಾನ ಹಾಗೂ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. 2020-21 ಸಾಲಿನ ದಕ್ಷಿಣ ವಲಯದಲ್ಲಿ 23ನೇ ಸ್ಥಾನ, ರಾಜ್ಯದಲ್ಲಿ 12ನೇ ಸ್ಥಾನವನ್ನು ತನ್ನದಾಗಿಸಿಕೊಂಡಿತ್ತು. 2019-20ರಲ್ಲಿ ಸೌತ್ ಜೋನ್ ಸ್ವಚ್ಛ ಸರ್ವೇಕ್ಷಣ ಅಭಿಯಾನದಲ್ಲಿ 233ನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿತ್ತು. ಘನತ್ಯಾಜ್ಯ ವಸ್ತು ವಿಲೇವಾರಿ ಸೂಕ್ತ ನಿರ್ವಹಣೆಗಾಗಿ ಹಳಿಯಾಳ ಪುರಸಭೆ 2022ರಲ್ಲಿ ಜಿಲ್ಲೆಗೆ ಎರಡನೇ ಸ್ಥಾನ ಪಡೆದಿದೆ. ಪ್ರಗತಿಯಲ್ಲಿರುವ ಕಾಮಗಾರಿ ವಿವರ
-ನೂತನ ಪುರಸಭೆ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿ: 4 ಕೋಟಿ 99 ಲಕ್ಷ
-ಶಿಥಿಲಾವಸ್ಥೆಯಲ್ಲಿದ್ದ ಗಜಾನನ ವಾಣಿಜ್ಯ ಮಳಿಗೆ ತೆರವುಗೊಳಿಸಿ ಹೊಸ ವಾಣಿಜ್ಯ ಸಂಕೀರ್ಣಗಳ ನಿರ್ಮಾಣ: 1 ಕೋಟಿ ಐವತ್ತು ಲಕ್ಷ.
-ಪುರಸಭೆ ಸಿಬ್ಬಂದಿಗಳ ವಸತಿ ಗೃಹ ನಿರ್ಮಾಣ: 1 ಕೋಟಿ ಐವತ್ತು ಲಕ್ಷ.
-ಹಳೆ ಪುರಸಭೆ ಕಚೇರಿ ಕಟ್ಟಡ ತೆರವುಗೊಳಿಸಿ ಹೊಸ ಪುರಭವನ ಕಟ್ಟಡ ನಿರ್ಮಾಣ ಕಾಮಗಾರಿ: 2 ಕೋಟಿ
-ಮೌರ್ಯ ಹೋಟೆಲ್ ಪಕ್ಕ ವಾಣಿಜ್ಯ ಮಳಿಗೆ ನಿರ್ಮಾಣದ ಮುಂದುವರಿದ ಕಾಮಗಾರಿ: 1 ಕೋಟಿ 10 ಲಕ್ಷ
-ಜಿ + 2. 240 ಮನೆಗಳ ನಿರ್ಮಾಣ: 12 ಕೋಟಿ .
-ಒಳಚರಂಡಿ ಯೋಜನೆ: 76 ಕೋಟಿ 20 ಲಕ್ಷ
-ಕನ್ವೆನ್ಷನ್ ಹಾಲ್: 8 ಕೋಟಿ
-ನೂತನ ಬಸ್ ನಿಲ್ದಾಣ ಕಾಮಗಾರಿ: 4 ಕೋಟಿ 5 ಲಕ್ಷ
-ಖೇಲೋ ಇಂಡಿಯಾ ಸ್ಟೇಡಿಯಂ: 7 ಕೋಟಿ 50 ಲಕ್ಷ
-ಡಿಪ್ಲೊಮಾ ಕಾಲೇಜು: 8 ಕೋಟಿ. ಸ್ಥಳೀಯ ಜನಪ್ರತಿನಿಧಿಗಳು ಮತ್ತು ಆಡಳಿತ ಮಂಡಳಿ ಸಹಕಾರದೊಂದಿಗೆ ನಾವು ಉತ್ತಮವಾಗಿ ಕಾರ್ಯ ನಿರ್ವಹಿಸಲು ಪ್ರಯತ್ನಿಸುತ್ತಿದ್ದೇವೆ. ಸಾರ್ವಜನಿಕರಿಗೆ ತ್ವರಿತ ಹಾಗೂ ಗುಣಮಟ್ಟದ ಸೇವೆ ಒದಗಿಸುವುದು ನಮ್ಮ ಆದ್ಯ ಕರ್ತವ್ಯ. ಜನತೆ ಸ್ವಚ್ಛತೆ ಹಾಗೂ ಇನ್ನಿತರೆ ವಿಷಯಗಳಿಗೆ ಸಂಬಂಧಪಟ್ಟಂತೆ ಸಂಪೂರ್ಣ ಸಹಕಾರ ನೀಡಬೇಕು.
ಪರಶುರಾಮ ಶಿಂಧೆ,
ಮುಖ್ಯಾಧಿಕಾರಿಗಳು, ಪುರಸಭೆ ಹಳಿಯಾಳ ಮಾಜಿ ಶಾಸಕ ಸುನೀಲ ಹೆಗಡೆ ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಕಾರ್ಯ ನಿರ್ವಹಿಸುತ್ತಿದ್ದೇವೆ. ಪಟ್ಟಣದ ಅಭಿವೃದ್ಧಿಗಾಗಿ ಕೇಂದ್ರ-ರಾಜ್ಯ ಸರಕಾರ ಸಾಕಷ್ಟು ಅನುದಾನ ಒದಗಿಸಿದೆ. ಸರ್ಕಾರ ಜಾರಿ ಮಾಡುವ ಯೋಜನೆಗಳನ್ನು ಅರ್ಹರಿಗೆ ತಲುಪಿಸುವುದು ನಮ್ಮ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಸರ್ವ ಸದಸ್ಯರು ಕಾರ್ಯ ಪ್ರವೃತ್ತರಾಗಿದ್ದೇವೆ.
-ಸಂತೋಷ ಘಟಕಾಂಬಳೆ,
ಸದಸ್ಯರು, ಪುರಸಭೆ ಹಳಿಯಾಳ ಶೇ. 95 ಸ್ವಚ್ಛತೆಯ ಕಾರ್ಯವನ್ನು ಪೌರಕಾರ್ಮಿಕರು ನಿರ್ವಹಿಸುತ್ತಾರೆ. ಬೇರೆ ಪಟ್ಟಣ ಮತ್ತು ನಗರಗಳಿಗೆ ಹೋಲಿಸಿದರೆ ಹಳಿಯಾಳದ ಪೌರಕಾರ್ಮಿಕರು ಸಹಕಾರಿಗಳು ಮತ್ತು ಕಠಿಣ ಪರಿಶ್ರಮಿಗಳಾಗಿದ್ದಾರೆ. ಸ್ವಚ್ಛ ಸರ್ವೆಕ್ಷನ್ ಸ್ಥಾನ ಕಾಪಾಡಿಕೊಂಡು ರಾಜ್ಯ ಹಾಗೂ ದೇಶಕ್ಕೆ ಮಾದರಿಯಾಗಬೇಕೆಂಬ ಮಹತ್ವಾಕಾಂಕ್ಷೆ ಇದೆ. ಯಾವುದೇ ಕಸವು ವ್ಯರ್ಥವಾಗದಂತೆ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ.
-ಬಿ.ಎಸ್ ದರ್ಶಿತಾ,
ಪರಿಸರ ಅಧಿಕಾರಿಗಳು, ಪುರಸಭೆ ಹಳಿಯಾಳ