Advertisement

ಜವಳಿ ವರ್ತಕರ ಸಂಘದ ಅಧ್ಯಕ್ಷ ಆರ್. ರವೀಂದ್ರ ಪೈ ನಿಧನ

03:52 PM Jun 27, 2021 | Team Udayavani |

ಮೂಡುಬಿದರೆ: ಮೂಡುಬಿದರೆ ಜವುಳಿ ವರ್ತಕರ ಸಂಘದ ಅಧ್ಯಕ್ಷ ಆರ್. ರವೀಂದ್ರ ಪೈ (59) ರವಿವಾರ ನಿಧನ ಹೊಂದಿದರು.

Advertisement

ಪತ್ನಿ , ಇಬ್ಬರು ಪುತ್ರಿಯರನ್ನು ಅವರು ಅಗಲಿದ್ದಾರೆ. ತೀವ್ರ ಹೃದಯಾಘಾತವೇ  ಕಾರಣವೆಂದು ತಿಳಿದುಬಂದಿದೆ.

ಶ್ರೀ ಮಹಾವೀರ ಕಾಲೇಜಿನಲ್ಲಿ ವಿಜ್ಞಾನ ಪದವಿ ಗಳಿಸಿ, ಅದಾಗಲೇ ಪಿತ ಆರ್. ಪಾಂಡುರಂಗ ಪೈ ಅವರು ಸ್ಥಾಪಿಸಿ ಮುನ್ನಡೆಸುತ್ತಿದ್ದ ‘ಭಾರತ್ ಟೆಕ್ಸ್ ಟೈಲ್ಲ್ಸ್ ‘ನಲ್ಲಿ ತಂದೆ ಹಾಗೂ ಅಣ್ಣ ರಾಮಚಂದ್ರ ಪೈ ಜತೆ ವ್ಯವಹಾರದಲ್ಲಿ ಅನುಭವ ಗಳಿಸಿ ಮುಂದೆ ಮೂಡುಬಿದಿರೆಯ ಜವುಳಿ ಅದರಲ್ಲೂ ಸಿದ್ಧ ಉಡುಪುಗಳಲ್ಲಿ ಹೊಸ ಟ್ರೆಂಡ್ ಸೆಟ್ ಮೂಡಿಸಿದ “ಸಿದ್ಧ” ಹೆಸರಿನ ಉಡುಪುಗಳ ಮಳಿಗೆ ಯನ್ನು ಸ್ಥಾಪಿಸಿದರು. ಸಿದ್ಧ ರೆಡಿಮೇಡ್ ಶರ್ಟ್ ಗಳ ತಯಾರಿಕಾ ಘಟಕವನ್ನೂ ಮೂಡುಬಿದಿರೆ ಯಲ್ಲಿ ಮೊದಲ ಬಾರಿಗೆಂಬಂತೆ ಆರಂಭಿಸಿ ಮೂಡುಬಿದಿರೆ ಯ ಹೊರಗಿನ ಮಾರುಕಟ್ಟೆ ಗಳಿಗೂ ಪೂರೈಸತೊಡಗಿದರು. ಮುಂದೆ “ಸಿದ್ಧ” ಪೂರ್ಣ ಪ್ರಮಾಣದ , ವಿಸ್ತೃತ ಜವುಳಿ ಮಳಿಗೆಯಾಗಿ ರೂಪುಗೊಂಡಿತು. ಸಾಕಷ್ಟು ಮಂದಿಗೆ ಉದ್ಯೋಗ ಅವಕಾಶ ಲಭಿಸಿತು.

ಇದನ್ನೂ ಓದಿ: ವದಂತಿಗಳಿಗೆ ಕಿವಿಗೊಡಬೇಡಿ, ಹಿಂಜರಿಕೆ ಬಿಟ್ಟು ಲಸಿಕೆ ಪಡೆಯಿರಿ: ಪ್ರಧಾನಿ ಮೋದಿ

ಯುವಕನಾಗಿದ್ದಾಗ ಕತೆ,ಕವನ ಬರೆಯುತ್ತಲಿದ್ದು, ಉದಯವಾಣಿ ಸಿನಿಮಾ ಪುಟಕ್ಕೆ ‘ಸೂರ್ಯ ಮೂಡುಬಿದಿರೆ’ ಹೆಸರಿನಲ್ಲಿ ನೂರಿಪ್ಪತ್ತಕ್ಕೂ ಅಧಿಕ ಸಿನಿ- ಲೇಖನಗಳನ್ನು ಬರೆದಿದ್ದರು.

Advertisement

ರಂಗಕರ್ಮಿ ಐ.ಕೆ. ಬೊಳುವಾರು ಸಂಚಾಲಿತ ಮೂಡುಬಿದಿರೆ ಯ  ಚದುರಂಗ ಸ್ವಾಧ್ಯಯನ ನಾಟಕ ಶಾಲೆಯ ನಾಟಕಗಳಲ್ಲೂ ಕಾಣಿಸಿಕೊಂಡಿದ್ದರು. ಅವಿಭಜಿತ ದ.ಕ.ಜಿಲ್ಲೆಯ ಕಾರ್ಕಳ ತಾಲೂಕಿನ (ಮೂಡುಬಿದಿರೆ ಸಹಿತ)ಕಾರ್ಯನಿರತ ಪತ್ರಕರ್ತರ ‌ಸಂಘ ಮೂಡುಬಿದಿರೆ  ಸಮಾಜಮಂದಿರದಲ್ಲಿ ಏರ್ಪಡಿಸಿದ್ದ ವಿಧಾನಸಭಾ ಅಭ್ಯರ್ಥಿಗಳ ಜತೆಗೆ ಮತದಾರರ ಮುಖಾಮುಖಿ ಎಂಬ ಯಶಸ್ವೀ ಕಾರ್ಯಕ್ರಮ ಸಂಯೋಜನೆ ಯಲ್ಲಿ  ಸಕ್ರಿಯ ಪಾತ್ರ ವಹಿಸಿದ್ದರು.  ಮೂಡುಬಿದಿರೆ ವೆಂಕಟರಮಣ ದೇವಳದಲ್ಲಿ ಮಹೋತ್ಸವ ನಿಮಿತ್ತ ನಡೆಯುತ್ತಿದ್ದ ಸಾಂಸ್ಕೃತಿಕ ವಿಶೇಷವಾಗಿ ರಸಪ್ರಶ್ನೆ ಕಾರ್ಯಕ್ರಮ ಸಂಯೋಜನೆ ಅವರ ಆಸಕ್ತಿಗಳಲ್ಲಿ ಒಂದಾಗಿತ್ತು.

ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ, ಮೂಡುಬಿದಿರೆ ಚೌಟರ ಅರಮನೆ ಕುಲದೀಪ ಎಂ., ಡಾ. ಎಂ. ಮೋಹನ ಆಳ್ವ, ವೆಂಕಟರಮಣ ಮತ್ತು ಹನುಮಂತ ದೇವಾಲಯ ಗಳ ಆಡಳಿತ ಮೊಕ್ತೇಸರ ಜಿ.ಉಮೇಶ ಪೈ

,ಉದ್ಯಮಿ ಶ್ರೀಪತಿ ಭಟ್, ಅಬುಲಾಲ ಪುತ್ತಿಗೆ, ಜವುಳಿ ವರ್ತಕರ ಸಂಘದ ಗೌರವಾಧ್ಯಕ್ಷ ಪ್ರಭಾತ್ ಚಂದ್ರ ಜೈನ್, ಕಾರ್ಯದರ್ಶಿ ಎನ್. ಸದಾಶಿವರಾವ್ , ಮೂಡುಬಿದಿರೆ ಯ ವಿವಿಧ ರಂಗಗಳ ಪ್ರಮುಖರು, ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಮೃತರ ಅಂತಿಮ ದರ್ಶನಗೈದು ಶ್ರದ್ಧಾಂಜಲಿ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next