Advertisement

ಆಯ್ಕೆ ಸಮಿತಿಯನ್ನು ಆಯ್ಕೆ ಮಾಡುವ ಕ್ರಿಕೆಟ್ ಸಲಹಾ ಸಮಿತಿಗೆ ಆರ್.ಪಿ.ಸಿಂಗ್, ಮದನ್ ಲಾಲ್

10:03 AM Feb 02, 2020 | keerthan |

ಮುಂಬೈ: ಟೀಂ ಇಂಡಿಯಾ ತಂಡದ ಆಯ್ಕೆ ಸಮಿತಿಯನ್ನು ಆಯ್ಕೆ ಮಾಡುವ ಕ್ರಿಕೆಟ್ ಸಲಹಾ ಸಮಿತಿಯನ್ನು ಬಿಸಿಸಿಐ ರಚಿಸಿದೆ. ಮಾಜಿ ಆಟಗಾರರಾದ ರುದ್ರ ಪ್ರತಾಪ್ ಸಿಂಗ್, ಮದನ್ ಲಾಲ್ ಮತ್ತು ಸುಲಕ್ಷಣ ನಾಯಕ್ ಅವರನ್ನು ಕ್ರಿಕೆಟ್ ಸಲಹಾ ಸಮಿತಿಗೆ ಆಯ್ಕೆ ಮಾಡಲಾಗಿದೆ.

Advertisement

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರಕಟಣೆಯಲ್ಲಿ ಈ ವಿಚಾರ ತಿಳಿಸಿದ್ದು, ಈ ಮೂವರ ನೇಮಕಾತಿಯ ಅವಧಿ ಒಂದು ವರ್ಷ ಇರುತ್ತದೆ ಎಂದಿದ್ದಾರೆ.

ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥರಾದ ಎಂಎಸ್ ಕೆ ಪ್ರಸಾದ್ ಮತ್ತು ಗಗನ್ ಖೋಡಾ ಅವರ ಕಾರ್ಯಾವಧಿ ಮುಕ್ತಾಯವಾಗಲಿದೆ. ಹಾಗಾಗಿ ಹೊಸ ಆಯ್ಕೆ ಸಮಿತಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ನೂತನ ಸಲಹಾ ಸಮಿತಿಗಿದೆ.

34 ವರ್ಷದ ಆರ್ ಪಿ ಸಿಂಗ್ ಸಮಿತಿಯ ಅತ್ಯಂತ ಕಿರಿಯ ಸದಸ್ಯರಾಗಿದ್ದಾರೆ. ಹಿರಿಯ ಸದಸ್ಯರಾಗಿರುವ ಮದನ್ ಲಾಲ್ ಅವರಿಗೆ 68 ವರ್ಷ ವಯಸ್ಸು.ಮಹಿಳಾ ಸದಸ್ಯೆ ಸುಲಕ್ಷಣಾ ನಾಯಕ್ ಅವರಿಗೆ 41 ವರ್ಷ.

Advertisement

Udayavani is now on Telegram. Click here to join our channel and stay updated with the latest news.

Next