Advertisement

INDvsWI: 95 ‘ಬೌಲ್ಡ್‌’ : ವಿಶೇಷ ದಾಖಲೆ ಬರೆದ ಆರ್.ಅಶ್ವಿ‌ನ್‌

10:30 AM Jul 14, 2023 | Team Udayavani |

ಡೊಮೆನಿಕಾ: ಭಾರತದ ಸ್ಪಿನ್ನರ್ ಆರ್‌.ಅಶ್ವಿ‌ನ್‌ ಅವರು ವಿಂಡೀಸ್‌ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ದಾಖಲೆಯೊಂದನ್ನು ಬರೆದರು. ವಿಂಡೀಸ್ ಆರಂಭಿಕ ಆಟಗಾರ ತೇಜ್‌ನಾರಾಯಣ್‌ ಚಂದ್ರ ಪಾಲ್‌ ಅವರನ್ನು ಬೌಲ್ಡ್‌ ಮಾಡಿದರು. ಇದರೊಂದಿಗೆ ಅಶ್ವಿ‌ನ್‌ ಅತ್ಯಧಿಕ 95 ಬೌಲ್ಡ್‌ ಮಾಡಿದ ಭಾರತೀಯ ಬೌಲರ್‌ ಎಂಬ ದಾಖಲೆ ಸ್ಥಾಪಿಸಿದರು. ಅನಿಲ್‌ ಕುಂಬ್ಳೆ (94) ದ್ವಿತೀಯ ಸ್ಥಾನಕ್ಕೆ ಇಳಿದರು.

Advertisement

ತಂದೆ-ಮಗನ ವಿಕೆಟ್‌ ಕಿತ್ತ ಅಶ್ವಿ‌ನ್‌: ಇನ್ನೊಂದೆಡೆ, ತಂದೆ ವೆಸ್ಟ್‌ ಇಂಡಿಸ್‌ ತಂಡದ ಆಟಗಾರ ಶಿವನಾರಾಯಣ್‌ ಅವರ ವಿಕೆಟ್‌ ಅನ್ನು 2013ರಲ್ಲಿ ಕಿತ್ತಿದ್ದ ಆರ್‌.ಅಶ್ವಿ‌ನ್‌, ಇದೀಗ 2023ರಲ್ಲಿ ಮಗ ತೇಜ್‌ನಾರಾಯಣ್‌ ಚಂದ್ರಪಾಲ್‌ ವಿಕೆಟ್‌ ಕೆಡವಿದ್ದಾರೆ.

ಮೊದಲ ಇನ್ನಿಂಗ್ ನಲ್ಲಿ ಅಶ್ವಿನ್ 60 ರನ್ ನೀಡಿ ಐದು ವಿಕೆಟ್ ಪಡೆದರು. ವೆಸ್ಟ್ ಇಂಡೀಸ್ ತಂಡವು ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 150 ರನ್ ಗೆ ಆಲೌಟಾಯಿತು. ಎರಡನೇ ದಿನಪೂರ್ತಿ ಬ್ಯಾಟಿಂಗ್ ಮಾಡಿರುವ ಭಾರತ ಕೇವಲ ಎರಡು ವಿಕೆಟ್ ನಷ್ಟಕ್ಕೆ 312 ರನ್ ಗಳಿಸಿದೆ. ಪದಾರ್ಪಣೆಗೈದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅಜೇಯ 143 ರನ್ ಗಳಿಸಿದ್ದು, 36 ರನ್ ಗಳಿಸಿರುವ ವಿರಾಟ್ ಕೊಹ್ಲಿ ಜತೆ ಬ್ಯಾಟಿಂಗ್ ನಡೆಸುತ್ತಿದ್ದಾರೆ. ನಾಯಕ ರೋಹಿತ್ ಶರ್ಮಾ 103 ರನ್ ಗಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next