ಚೆನ್ನೈ: ಟೀಂ ಇಂಡಿಯಾದ ಪ್ರಮುಖ ಸ್ಪಿನ್ನರ್, ಟೆಸ್ಟ್ ಕ್ರಿಕೆಟ್ ನ ಅಗ್ರ ಶ್ರೇಯಾಂಕಿತ ಬೌಲರ್ ರವಿಚಂದ್ರನ್ ಅಶ್ವಿನ್ ಅವರನ್ನು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಬೆಂಚ್ ಕಾಯಿಸಲಾಗಿತ್ತು. ನಾಲ್ಕು ವೇಗಿಗಳು, ಓರ್ವ ಸ್ಪಿನ್ನರ್ ಕಾಂಬಿನೇಶನ್ ನಲ್ಲಿ ಆಡಿದ್ದ ಭಾರತ ತಂಡ ಜಡೇಜಾ ಅವರನ್ನು ಸ್ಪಿನ್ನರ್ ಆಗಿ ಆಡಿಸಿತ್ತು. ಅಶ್ವಿನ್ ಅವರನ್ನು ಹೊರಗಿಟ್ಟ ನಿರ್ಧಾರಕ್ಕೆ ಹಲವು ಮಾಜಿ ಆಟಗಾರರು ಟೀಕೆ ಮಾಡಿದ್ದರು.
ಇದೀಗ ಈ ವಿಚಾರದ ಬಗ್ಗೆ ಅಶ್ವಿನ್ ಮಾತನಾಡಿದ್ದಾರೆ. ಓವಲ್ ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಆಡುವ ಬಳಗದಲ್ಲಿ ತಾನು ಭಾಗವಾಗುವುದಿಲ್ಲ ಎಂದು ಮೊದಲೇ ತಿಳಿದಿತ್ತು ಎಂದು ಅಶ್ವಿನ್ ಬಹಿರಂಗಪಡಿಸಿದರು.
ಆಸ್ಟ್ರೇಲಿಯದ ವಿರುದ್ಧ ತಂಡದ ಯಶಸ್ಸಿಗೆ ಕೊಡುಗೆ ನೀಡುವ ಬಯಕೆಯ ಹೊರತಾಗಿಯೂ, ಯಾವುದೇ ರೀತಿಯಲ್ಲಿ ತಂಡವನ್ನು ಬೆಂಬಲಿಸಲು ಮಾನಸಿಕವಾಗಿ ಸಿದ್ಧವಾಗಿದ್ದೇನೆ ಎಂದು ಅಶ್ವಿನ್ ಒಪ್ಪಿಕೊಂಡರು.
ಇದನ್ನೂ ಓದಿ:Bantwal: ಕೌಟುಂಬಿಕ ಮನಸ್ತಾಪ; ಪತ್ನಿ ,ಮಾವನಿಗೆ ಚೂರಿ ಇರಿದು ಪರಾರಿಯಾದ ಪತಿ
ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ಅಶ್ವಿನ್ ಈ ಬಗ್ಗೆ ಮಾತನಾಡಿದ್ದಾರೆ. “ಫೈನಲ್ ವರೆಗಿನ ಪ್ರಯಾಣದಲ್ಲಿ ನಾನು ಇದ್ದ ಕಾರಣ ಆ ಪಂದ್ಯದಲ್ಲಿ ನಾನು ಆಡಲು ಬಯಸಿದ್ದೆ. ಕಳೆದ ವರ್ಷದ ಫೈನಲ್ ಪಂದ್ಯದಲ್ಲೂ ನಾನು ಉತ್ತಮ ಬೌಲಿಂಗ್ ಮಾಡಿ ನಾಲ್ಕು ವಿಕೆಟ್ ಪಡೆದಿದ್ದೆ” ಎಂದರು.
ಇದೇ ವೇಳೆ ಅಶ್ವಿನ್ ಅವರು ನಾಯಕ ಅಥವಾ ಕೋಚ್ ದೃಷ್ಟಿಕೋನದ ಬಗ್ಗೆಯೂ ಮಾತನಾಡಿದರು. ಇಂಗ್ಲೆಂಡ್ ನಲ್ಲಿ ನಡೆದಿದ್ದ ಈ ಹಿಂದಿನ ಸರಣಿಯ ಆಧಾರದ ಮೇಲೆ ನಾಲ್ಕು ವೇಗಿಗಳು ಮತ್ತು ಒಬ್ಬ ಸ್ಪಿನ್ನರ್‌ಗೆ ಆದ್ಯತೆ ನೀಡುವ ನಿರ್ಧಾರದ ಹಿಂದಿನ ತಾರ್ಕಿಕತೆಯನ್ನು ಒಪ್ಪಿಕೊಂಡರು. ನಾಲ್ಕನೇ ಇನ್ನಿಂಗ್ಸ್ ನಲ್ಲಿ ಸ್ಪಿನ್ನರ್ ಗಳ ಪ್ರಾಮುಖ್ಯತೆಯನ್ನು ಅವರು ಒತ್ತಿಹೇಳಿದರು.