ಬೆಂಗಳೂರು : ಆರ್ ಎಸ್ ಎಸ್ ವಿರುದ್ಧ ಟೀಕೆ ಮಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸಚಿವ ಆರ್ ಅಶೋಕ್ ಕಿಡಿಕಾರಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಅಶೋಕ್ ನಮಗೆ ಆರ್ ಎಸ್ ಎಸ್ ತಾಯಿ ಸಮಾನ, ನಮಗೆಲ್ಲಾ ಒಂದೇ ಪಕ್ಷ, ಆದರೆ ಇವರಿಗೆ ಜೆಡಿಎಸ್, ಸ್ವಾತಂತ್ರ್ಯ ಹಾಗೂ ಈಗ ಕಾಂಗ್ರೆಸ್ ಎಂದು ಎರಡು ಮೂರು ಪಕ್ಷ ಆಗಿದೆ, ಆರ್ ಎಸ್ ಎಸ್ ಯಾವತ್ತೂ ಸಿದ್ದರಾಮಯ್ಯ ಬಗ್ಗೆ ಮಾತಾಡಿಲ್ಲ. ಆದರೆ ಇವರು ಯಾಕೆ ಆರ್ ಎಸ್ ಎಸ್ ಬಗ್ಗೆ ಮಾತಾಡ್ತಾ ಇದಾರೆ ಜೊತೆಗೆ ಈಗ ಕೈ ಕೈ ಹುಸುಕಿಕೊಳ್ತಾ ಇದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರಿಗೆ ಆರ್ ಎಸ್ ಎಸ್ ಬಗ್ಗೆ ಮಾತಾಡುವ ನೈತಿಕತೆ ಇಲ್ಲ, ಮಾಡಲು ಕೆಲಸ ಇಲ್ಲದವರು ಏನೋ ಮಾಡಿದ್ರಂತೆ ಅನ್ನೋ ಹಾಗಿದೆ ಸಿದ್ದರಾಮಯ್ಯ ವರ್ತನೆ ಎಂದು ವ್ಯಂಗ್ಯವಾಡಿದ ಸಚಿವರು ಪ್ರತಿದಿನ ಡಿಕೆ ಶಿವಕುಮಾರ್ ಮಾಧ್ಯಮಗಳಲ್ಲಿ ಕಾಣಿಸಿಕೊಳ್ತಾ ಇದ್ದಾರೆ. ಆದರೆ ತಾನು ಎಲ್ಲಿ ಕಾಣೆಯಾಗುತಿದ್ದೆನೋ ಎಂಬ ಅಭದ್ರತೆ ಸಿದ್ದರಾಮಯ್ಯ ಅವರಿಗೆ ಕಾಡ್ತಾ ಇದೆ. ಅದಕ್ಕಾಗಿ ಹೀಗೆಲ್ಲಾ ಆಡ್ತಾ ಇದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಉದಯಪುರದ ರೀತಿ ರಾಜ್ಯದಲ್ಲೂ ಕಾಂಗ್ರೆಸ್ ಚಿಂತನಾ ಶಿಬಿರ : ಡಿ.ಕೆ.ಶಿವಕುಮಾರ್
ಬಳಿಕ ಮಾತನಾಡಿದ ಅವರು ರಾಜ್ಯ ಸಭೆ ಚುನಾವಣೆಯಲ್ಲಿ ನಾವು ಯಾವುದೇ ಕಾರಣಕ್ಕೂ ಜೆಡಿಎಸ್ ಗೆ ಬೆಂಬಲ ನೀಡುವುದಿಲ್ಲ ಎಂದ ಅವರು ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಲು ಏನು ಬೇಕೋ ಅದು ಮಾಡುತ್ತೇವೆ ಎಂದು ಈ ಮೂಲಕ ಆಪರೇಷನ್ ಕಮಲದ ಸೂಚನೆ ಕೊಟ್ಟಿದ್ದಾರೆ.