Advertisement
ಶನಿವಾರ ಬೆಳಿಗ್ಗೆ 11 ಗಂಟೆಗೆ ಜಡಿಗೇನಹಳ್ಳಿಯ ಆಂಜನೇಯ ಸ್ವಾಮಿಗೆ ಸಚಿವರು ಪೂಜೆ ಸಲ್ಲಿಸಲಿದ್ದಾರೆ. ನಂತರ ಮೆರವಣಿಗೆಯೊಂದಿಗೆ ಜಡಿಗೇನಹಳ್ಳಿ ಗ್ರಾಮಸ್ಥರು ಸಚಿವರನ್ನು ಬರಮಾಡಿಕೊಳ್ಳಲಿದ್ದಾರೆ. ವಿವಿಧ ಇಲಾಖೆಗಳ ಸ್ಟಾಲ್ ಗಳನ್ನು ಕಂದಾಯ ಸಚಿವರು ಉದ್ಘಾಟಿಸಿ, ಕೃಷಿ ಸಲಕರಣೆಗಳನ್ನು ವಿತರಿಸಲಿದ್ದಾರೆ. ನಂತರ ಸಭಾ ಕಾರ್ಯಕ್ರಮ ನಡೆಯಲಿದ್ದು, ಅಂಬಿಗರ ಚೌಡಯ್ಯ ಜಯಂತ ಪ್ರಯುಕ್ತ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ವೇದಿಕೆ ಕಾರ್ಯಕ್ರಮಕ್ಕೆ ಆರ್ ಅಶೋಕ ಚಾಲನೆ ನೀಡಲಿದ್ದಾರೆ. ವಿಕಲಚೇತನರಿಗೆ ಕೃತಕ ಕಾಲು ಜೋಡನೆ, ವಿವಿಧ ಇಲಾಖೆಯ ಸವಲತ್ತುಗಳ ವಿತರಣೆ, ವಿವಿಧ ಇಲಾಖೆಗಳ ಕಾಮಗಾರಿಗಳ ಶಂಕುಸ್ಥಾಪನೆ/ಉದ್ಘಾಟನೆ ಮಾಡಲಿದ್ದಾರೆ.
ಸಂಜೆ 6:30 ಕ್ಕೆ ಗ್ರಾಮಸಭೆ ನಡೆಸಿ ಕುಂದು ಕೊರತೆಗಳ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಲಿದ್ದಾರೆ.
ಸಂಜೆ 7:30 ರಿಂದ ಸ್ಥಳೀಯ ಜಾನಪದ ಕಲಾವಿದರು ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ನಂತರ ಜಡಿಗೇನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳೊಂದಿಗೆ ಸಂವಾದ ನಡೆಸಿ, ಅವರ ಜೊತೆ ಭೋಜನ ಸೇವಿಸಿ, ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.
Related Articles
Advertisement
ಇದನ್ನೂ ಓದಿ: ವಿಜಯಪುರ ವಿಮಾನ ನಿಲ್ದಾಣಕ್ಕೆ ”ಸಿದ್ಧೇಶ್ವರ ಶ್ರೀ” ಹೆಸರು ಸೂಕ್ತ : ಹೆಚ್ ಡಿಕೆ