Advertisement

ಕೋವಿಡ್ ನಿಂದ ಮೃತಪಟ್ಟವರಿಗೆ ಸರಕಾರದಿಂದಲೇ ಗೌರವಪೂರ್ವಕ ಅಂತಿಮ ವಿದಾಯ

02:01 AM May 26, 2021 | Team Udayavani |

ಬೆಂಗಳೂರು: ಕೊರೊನಾದಿಂದ ಇಹಲೋಕ ತ್ಯಜಿಸುವವರ ಮೃತದೇಹಗಳು ಕುಟುಂಬದವರಿಗೂ ಬೇಡವಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸರಕಾರವೇ ಗೌರವ ಪೂರ್ವಕ ಅಂತ್ಯಕ್ರಿಯೆ ನಡೆಸುವ ಚಿಂತನೆಯಲ್ಲಿದೆ.

Advertisement

ಕೊರೊನಾ ಕಾಲದಲ್ಲಿ ಮಾನವೀಯ ಸಂಬಂಧಗಳ ಪತನದ ದರ್ಶನವೂ ಆಗುತ್ತಿದೆ. ಮೃತರ ಅಂತ್ಯ ಸಂಸ್ಕಾರ ಗೌರವಯುತವಾಗಿ ನೆರವೇರಲಿ ಎಂಬ ಸದಾಶಯ ಸರಕಾರದ್ದು.

ಆದರೆ, ಅಂತ್ಯಕ್ರಿಯೆ ವಿಚಾರದಲ್ಲಿ ಸಂಬಂಧ ಇಲ್ಲದಂತೆ ಇದ್ದರೂ ಭವಿಷ್ಯದಲ್ಲಿ ಆಸ್ತಿ ಪಾಲು ಮತ್ತಿತರ ವಾರಸುದಾರಿಕೆ ವಿಚಾರ ಬಂದಾಗ ಮರಣ ಪ್ರಮಾಣಪತ್ರ ಇಲ್ಲದಿದ್ದರೆ ಕಷ್ಟವಾಗಲಿದೆ. ಆ ಬಗ್ಗೆ ಕುಟುಂಬ ಸದಸ್ಯರು ಯೋಚಿಸಬೇಕಾದ್ದು ಅಗತ್ಯ.

ರಾಜ್ಯಾದ್ಯಂತ ಕೊರೊನಾದಿಂದ ಮರಣಿಸುವವರ ಸಮುದಾಯದ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನಡೆಸುವ ಹೊಣೆಗಾರಿಕೆಯನ್ನು ಕಂದಾಯ ಇಲಾಖೆಗೆ ವಹಿಸುವ ಬಗ್ಗೆ ಚರ್ಚೆ ನಡೆದಿದೆ. ಕೊರೊನಾದಿಂದ ಸಾವನ್ನಪ್ಪುವವರ ಮನೆ ಮಗನಾಗಿ ಈ ಕಾರ್ಯದ ಮೇಲುಸ್ತುವಾರಿ ವಹಿಸಲು ಸಚಿವ ಆರ್‌. ಅಶೋಕ್‌ ತೀರ್ಮಾನಿಸಿದ್ದಾರೆ.

ಕಂದಾಯ ಅಧಿಕಾರಿಗಳಿಗೂ ಜವಾಬ್ದಾರಿ ನೀಡುವ ಪ್ರಸ್ತಾವವೂ ಇದ್ದು, ಒಂದೆರಡು ದಿನಗಳಲ್ಲಿ ತೀರ್ಮಾನ ಆಗಲಿದೆ ಎಂದು ಮೂಲಗಳು ತಿಳಿಸಿವೆ.

Advertisement

ದಾಖಲೆ ಸಮಸ್ಯೆ
ಕೊರೊನಾದಿಂದ ಮೃತಪಟ್ಟವರ ಮರಣ ಪ್ರಮಾಣ ಪತ್ರ ಪಡೆಯುವುದು ಕಷ್ಟವಾಗಲಿದೆ. ಕುಟುಂಬ ಸದಸ್ಯರು ಅಂತ್ಯಸಂಸ್ಕಾರಕ್ಕೆ ಬಾರದಿದ್ದರೆ ಅನಾಥ ಶವ ಎಂದು ಅಂತ್ಯಸಂಸ್ಕಾರ ಮಾಡಲಾಗುತ್ತದೆ. ಹಾಗೆ ಆದಾಗ ಮರಣ ಪ್ರಮಾಣ ಪತ್ರ ಮತ್ತಿತರ ದಾಖಲೆ ಪಡೆಯಲು ಕಷ್ಟವಾಗಬಹುದು.

ಆಸ್ಪತ್ರೆಯಿಂದ ಕೊರೊನಾದಿಂದ ಮೃತಪಟ್ಟ ಡಿಸಾcರ್ಜ್‌ ಸಮ್ಮರಿ ಪಡೆದು ಸರಕಾರವೇ ಅಂತ್ಯ ಸಂಸ್ಕಾರ ಮಾಡಿದರೂ ಕುಟುಂಬದವರ ಸಹಿ ಮತ್ತು ಒಪ್ಪಿಗೆ ಇದ್ದರೆ ಚಿತಾಗಾರದಲ್ಲಿ ವಿವರಗಳು ದಾಖ ಲಾಗಿ ಮುಂದೆ ಮರಣ ಪ್ರಮಾಣಪತ್ರ ಪಡೆ ಯಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಆಸ್ತಿ ಪಾಲು ಅಥವಾ ಇತರ ವಾರಸುದಾರಿಕೆ ವಿಚಾರ ಬಂದಾಗ ಸಮಸ್ಯೆ ಎದುರಾಗಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ.

ಹಿಂದೂ ಸಮುದಾಯದವರ ಅಂತ್ಯಕ್ರಿಯೆಯ ಅನಂತರ ಕಾವೇರಿ ನದಿಯಲ್ಲಿ ನಾನೇ ಅಸ್ತಿ ವಿಸರ್ಜನೆ ಮಾಡುತ್ತೇನೆ. ಇತರ ಸಮುದಾಯಗಳ ಸಂಪ್ರದಾಯದಂತೆಯೂ ಅಂತಿಮ ಸಂಸ್ಕಾರಕ್ಕೆ ಕ್ರಮ ಕೈಗೊಳ್ಳಲಾಗುವುದು.
– ಆರ್‌. ಅಶೋಕ್‌, ಕಂದಾಯ ಸಚಿವ

–  ಎಸ್‌. ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next