Advertisement

ಚೀನ ಬೆಂಬಲಕ್ಕೆ ಪಾಕಿಸ್ಥಾನ ಥ್ಯಾಂಕ್ಸ್‌ : CPEC ತ್ವರಿತಕ್ಕೆ ಭರವಸೆ

01:24 PM Mar 19, 2019 | Team Udayavani |

ಬೀಜಿಂಗ್‌ : ಜಾಗತಿಕ ಸವಾಲುಗಳ ನಡುವೆ ತನ್ನನ್ನು ಬೆಂಬಲಿಸಿರುವ ಚೀನಕ್ಕೆ ಪಾಕಿಸ್ಥಾನ ಧನ್ಯವಾದ ಹೇಳಿದೆ ಮಾತ್ರವಲ್ಲ ಇದಕ್ಕೆ ಪ್ರತಿಯಾಗಿ ತಾನು ಚೀನ-ಪಾಕ್‌ ಆರ್ಥಿಕ ಕಾರಿಡಾರ್‌ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಿಸುವ ಭರವಸೆ ನೀಡಿದೆ. 

Advertisement

ಭಯೋತ್ಪಾದನೆಯನ್ನು ಮಟ್ಟ ಹಾಕುವಲ್ಲಿ ಯಾವುದೇ ರೀತಿಯ ದ್ವಂದ್ವ ನೀತಿ ಇರಕೂಡದೆಂಬ ಚೀನದ ನಿಲುವನ್ನು ಪಾಕಿಸ್ಥಾನ ಪ್ರಶಂಸಿಸುತ್ತದೆ ಎಂದಿರುವ ಪಾಕ್‌ ವಿದೇಶ ಸಚಿವ ಶಾ ಮಹಮೂದ್‌ ಕುರೇಶಿ, ಈಚಿನ ಜಾಗತಿಕ ಒತ್ತಡಗಳನ್ನು ನಿಭಾಯಿಸುವಲ್ಲಿ ಪಾಕಿಸ್ಥಾನವನ್ನು ಬೆಂಬಲಿಸಿರುವ ಚೀನವನ್ನು ಅಭಿನಂದಿಸಿದರು. 

ಚೀನ ವಿದೇಶ ಸಚಿವ ವಾಂಗ್‌ ಯೀ ಭಾಗವಹಿಸಿದ ಚೀನ -ಪಾಕ್‌ ವಿದೇಶ ಸಚಿವರ ಮಟ್ಟದ ಮೊದಲ ವ್ಯೂಹಾತ್ಮಕ ಸಂವಾದದಲ್ಲಿ ಮಾತನಾಡುತ್ತಿದ್ದ ಕುರೇಶಿ ಅವರು ಚೀನವು ಪಾಕಿಸ್ಥಾನದ ನೈಜ ಮಿತ್ರ ಎಂದು ಕೊಂಡಾಡಿದರು. 

ಮುಂಬಯಿ ಮೇಲಿನ ಉಗ್ರ ದಾಳಿ (26/11) ಮತ್ತು ಪುಲ್ವಾಮಾ ಉಗ್ರ ದಾಳಿ ಸೇರಿದಂತೆ ಭಾರತದ ಮೇಲಿನ ಹಲವು ಭಯೋತ್ಪಾದಕ ದಾಳಿಯ ಮಾಸ್ಟರ್‌ ಮೈಂಡ್‌, ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆ ಮುಖ್ಯಸ್ಥನಾಗಿರುವ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸುವ ವಿಶ್ವಸಂಸ್ಥೆಯ ನಿರ್ಣಯವನ್ನು ನಿರಂತರ ನಾಲ್ಕನೇ ಬಾರಿಗೆ ವಿಫ‌ಲಗೊಳಿಸುವ ಮೂಲಕ ಚೀನ, ತನ್ನ ಸರ್ವಋತು ಮಿತ್ರ ಪಾಕಿಸ್ಥಾನವನ್ನು ಅಂತಾರಾಷ್ಟ್ರೀಯ ಆಕ್ಷೇಪ, ಖಂಡನೆಗಳ ಹೊರತಾಗಿಯೂ, ಬೆಂಬಲಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next