ಜೇವರ್ಗಿ: ಅಫಜಲಪುರ ತಾಲೂಕಿನ ತಾಡತೆಗನೂರ ಗ್ರಾಮದಲ್ಲಿ ಪವಿತ್ರ ಕುರಾನ್ ಗ್ರಂಥ ಸುಟ್ಟು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದು ಸಮಾಜದಲ್ಲಿ ಶಾಂತಿ ಭಂಗಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸಿ ಗಡಿಪಾರು ಮಾಡುವಂತೆ ಖೀದ್ಮತೆ ಮಿಲ್ಲತ್ ಸಂಘಟನೆ ವತಿಯಿಂದ ಶುಕ್ರವಾರ ತಹಶೀಲ್ದಾರ್ ವಿನಯಕುಮಾರ ಪಾಟೀಲ ಮೂಲಕ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಇಸ್ಲಾಂ ಧರ್ಮದ ಪವಿತ್ರ ಗ್ರಂಥವಾದ ಕುರಾನ್ ಸುಟ್ಟು ಹಾಕಿ ಮುಸ್ಲಿಂ ಧರ್ಮದ ಜನರ ಭಾವನೆಗಳಿಗೆ ಕೆಲವು ಕಿಡಿಗೇಡಿಗಳು ಧಕ್ಕೆ ತಂದಿದ್ದಾರೆ. ಕಳೆದ ಡಿ.22ರಂದು ಅಫಜಲಪುರ ತಾಲೂಕಿನ ತಾಡತೆಗನೂರ ಗ್ರಾಮದಲ್ಲಿ ಮಸ್ಜಿದ್ ಗಪ್ಪಾರನಲ್ಲಿ ನುಗ್ಗಿ ಬೀಗ ಮುರಿದು ಕುರಾನ್ ಗ್ರಂಥ ಸುಟ್ಟು ಹಾಕಲಾಗಿದೆ. ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಗಮನವಿಯಲ್ಲಿ ತಿಳಿಸಲಾಗಿದೆ.
ಸಂಘಟನೆಯ ಮುಖಂಡರಾದ ಮಹ್ಮದ್ ಗೌಸ್, ಅಬ್ದುಲ್ ರಜಾಕ್, ರಫೀಕ್ ತಿರಂದಾಜ್, ಮೌಲಾನಾ ರಿಜ್ವಾನಸಾಬ್, ನವಾಜ್ ಇನಾಂದಾರ, ಶಾರುಕ ಗಿರಣಿ, ಲಿಯಾಖತ್ ಧಖನಿ, ಟಿಪ್ಪು ಚಿಗರಳ್ಳಿ, ವಾಜೀದ್, ಮಹ್ಮದ್ ಶಫೀಕ್ ಮತ್ತಿತರರು ಇದ್ದರು.ಕು
ರಾನ್ ಸುಟ್ಟ ಪ್ರಕರಣ ತನಿಖೆ ನಡೆಸಿ ಸುವರ್ಣ ವಿಧಾನಸೌಧ
ಅಫಜಲಪುರ ವಿಧಾನಸಭೆ ಕ್ಷೇತ್ರದ ತಾಡತೇಗನೂರಿನ ಮಜೀದ್‌ಗೆ ಹೋಗಿ ಕುರಾನ್ ಹಾಗೂ ಪ್ರಾರ್ಥನಾ ಸಾಮಗ್ರಿಗಳನ್ನು ಸುಟ್ಟುಹಾಕಿದವರ ವಿರುದ್ಧ ಕಠಿಣ ಕ್ರಮಕ್ಕೆ ಸದಸ್ಯ ಎಂ.ವೈ. ಪಾಟೀಲ ಆಗ್ರಹಿಸಿದರು. ಶೂನ್ಯವೇಳೆ ವಿಷಯ ಪ್ರಸ್ತಾಪಿಸಿ, ಇಂತಹ ಕಿಡಿಗೇಡಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಈ ಘಟನೆಯ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಸಚಿವ ಗೋವಿಂದ ಎಂ. ಕಾರಜೋಳ ಉತ್ತರಿಸಿ, ಇದೊಂದು ಸೂಕ್ಷ್ಮ ವಿಚಾರವಾಗಿರುದರಿಂದ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗುವುದು ಎಂದರು.