Advertisement

ಕೋಟಿ ಕೋಟಿ ಸಂಭಾವನೆಗೆ ಖೋತಾ!

12:40 AM Jan 07, 2019 | Team Udayavani |

ಮುಂಬಯಿ: ಭಾರತೀಯ ಕ್ರಿಕೆಟಿಗರು ಸೇರಿದಂತೆ ವಿಶ್ವದ ನಾನಾ ಕ್ರಿಕೆಟಿಗರ ಜತೆಗೆ ಜಾಹೀರಾತು ಒಪ್ಪಂದ ಮಾಡಿಕೊಂಡಿದ್ದ ಸಿಡ್ನಿ ಮೂಲದ ಸ್ಪಾರ್ಟನ್‌ ನ್ಪೋರ್ಟ್ಸ್ ಕ್ಲಬ್‌ ಈಗ ಈ ಕ್ರಿಕೆಟಿಗರಿಗೆ ತಾನು ನೀಡಬೇಕಿರುವ ಕೋಟಿಗಟ್ಟಲೆ ಸಂಭಾವನೆಯನ್ನು ಬಾಕಿ ಉಳಿಸಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. 

Advertisement

ಈ ಕಂಪೆನಿಯಿಂದ ಹಣ ನಿರೀಕ್ಷಿಸುತ್ತಿರುವ ಭಾರತೀಯ ಕ್ರಿಕೆಟಿಗರ ಪಟ್ಟಿಯಲ್ಲಿ ಸಚಿನ್‌ ತೆಂಡುಲ್ಕರ್‌, ಮಹೇಂದ್ರ ಸಿಂಗ್‌ ಧೋನಿ ಕೂಡ ಸೇರಿದ್ದಾರೆ. ಇತರ ದೇಶಗಳ ಆಟಗಾರರ ಪಟ್ಟಿಯಲ್ಲಿ ಕ್ರಿಸ್‌ ಗೇಲ್‌, ಇಯಾನ್‌ ಮಾರ್ಗನ್‌ ಅವರಂಥ ದೊಡ್ಡ ಹೆಸರುಗಳೇ ಇವೆ.

ನಷ್ಟದಲ್ಲಿರುವ ಸ್ಪಾರ್ಟನ್‌ ನ್ಪೋರ್ಟ್ಸ್ ಕ್ಲಬ್‌ ಅನ್ನು ಆಸ್ಟ್ರೇಲಿಯದ ಸ್ಥಳೀಯ ನ್ಯಾಯಾಲಯ ಇತ್ತೀಚೆಗೆ ದಿವಾಳಿಯೆಂದು ಘೋಷಿಸಿದೆ. ಹೀಗಾಗಿ ಕಂಪೆನಿಯ ಉತ್ಪನ್ನಗಳನ್ನು ಬಳಸಿ ನೀಡಿದ್ದ ಜಾಹೀರಾತಿನಿಂದ ಬರಬೇಕಿದ್ದ ಆದಾಯ ಖೋತಾ ಆಗಿದೆ. ಕಂಪೆನಿಯೊಂದಿಗೆ 2013ರಿಂದ 2016ರ ವರೆಗಿನ ಒಪ್ಪಂದದಂತೆ ಧೋನಿಗೆ ಬರಬೇಕಿದ್ದ 20 ಕೋಟಿ ರೂ. ಕೈಬಿಟ್ಟಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next