Advertisement

ಜಪಾನ್‌ನಲ್ಲಿ ರಸಪ್ರಶ್ನೆ ಸ್ಪರ್ಧೆ: KMC ವಿದ್ಯಾರ್ಥಿಗಳಿಗೆ ಪ್ರಶಸ್ತಿ

10:00 AM Oct 31, 2017 | |

ಮಂಗಳೂರು: ಜಪಾನ್‌ನ ಟೋಕಿಯೊದಲ್ಲಿ ಅ. 22ರಂದು ನಡೆದ ಅಂತಾರಾಷ್ಟ್ರೀಯ ಮಟ್ಟದ ಫುಜಿಯೋಕಪ್‌ ರಸಪ್ರಶ್ನೆ-2017 ಸ್ಪರ್ಧೆಯಲ್ಲಿ ಮಂಗಳೂರಿನ ಕಸ್ತೂರ್ಬಾ ಮೆಡಿಕಲ್‌ ಕಾಲೇಜಿನ ತೃತೀಯ ಎಂಬಿಬಿಎಸ್‌ ವಿದ್ಯಾರ್ಥಿಗಳಾದ ಅನಿರುದ್ಧ್ ಪೈ ಹಾಗೂ ಸಿದ್ಧಾರ್ಥ ಶಂಕರ್‌ ಅವರ ತಂಡ ಪ್ರಥಮ ಸ್ಥಾನ ಗಳಿಸಿ ಪ್ರತಿಷ್ಠಿತ ಫುಜಿಯೋಕಪ್‌ ಪ್ರಶಸ್ತಿ ಗಳಿಸಿದೆ.

Advertisement

ಆತಿಥೇಯ ಜಪಾನ್‌, ಭಾರತ, ವಿಯೆಟ್ನಾಂ ಹಾಗೂ ಇಂಡೋನೇಶಿಯಾ ದೇಶಗಳ ವಿವಿಧ ವೃತ್ತಿಪರ ಕಾಲೇಜುಗಳ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಒಟ್ಟು 24 ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಜಪಾನಿನ ವೈದ್ಯಕೀಯ ತಜ್ಞ ಡಾ| ಫುಜಿಯೋಟಕಯಾಮ ಅವರ ಹೆಸರಿನಲ್ಲಿ ಈ ಪ್ರತಿಷ್ಠಿತ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. 

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ಪರ್ಧಾ ಸಂಘಟಕರಾದ ಡಾ| ಹಿಟೋಶಿ ಒಕೊಚಿ, ಪ್ರೊ| ಗ್ಯಾರಿ ಲೆವಿ, ಪ್ರೊ| ಜುರ್ಗನ್‌ ಹೆಶರ್‌ ಹಾಗೂ ಪ್ರೊ| ಟಕಹಿರೊಒಚಿಯಾ ಮುಂತಾದವರು ಉಪಸ್ಥಿತರಿದ್ದರು. ಮಂಗಳೂರಿನ ಕಸ್ತೂರ್ಬಾ ಮೆಡಿಕಲ್‌ ಕಾಲೇಜಿನ ಡೀನ್‌ ಡಾ| ವೆಂಕಟ್ರಾಯ ಪ್ರಭು ಅವರು ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next