ಬೆಂಗಳೂರು: “ಆಜಾದಿ ಕಾ ಅಮೃತ ಮಹೋತ್ಸವ’ ಅಂಗವಾಗಿ ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಸಹಯೋಗದೊಂದಿಗೆ ಇಂಡಿಯನ್ ಆಯಿಲ್ ಕಾರ್ಪೊ ರೇಷನ್ ಸಂಸ್ಥೆಯು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಸ್ಮರಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗಾಗಿ “ಜಿಗ್ಯಾಸ ಆ್ಯಂಡ್ ದಿ ಹೆರಿಟೇಜ್ ಕ್ವಿಜ್'(JIGYASA & The Heritage Quiz) ಎಂಬ ಆನ್‌ಲೈನ್ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿದೆ.
ಸ್ಪರ್ಧೆಯಲ್ಲಿ ದೇಶದ ವಿಶ್ವಮಾನ್ಯ ಸಾಂಸ್ಕೃತಿಕ ಪರಂಪರೆಯನ್ನು ಆಧಾರಿತ ಪ್ರಶ್ನೆಗಳನ್ನು ರಚಿಸಲಾಗುತ್ತಿದೆ. ಇದು ವಿಶ್ವದ ಅತಿದೊಡ್ಡ ಆನ್‌ಲೈನ್ ರಸ ಪ್ರಶ್ನೆ ಸ್ಪರ್ಧೆಯಾಗಿದ್ದು, 17 ಭಾಷೆ ಗಳಲ್ಲಿ ನಡೆಯಲಿದೆ.
ಆಸಕ್ತರು www.akamquiz.com ಮೂಲಕ ಭಾಗ ವಹಿಸಬಹುದು. ಎಲ್ಲ ಸ್ಪರ್ಧಿಗಳಿಗೂ ಇ-ಪ್ರಶಸ್ತಿ ಪತ್ರ ಹಾಗೂ ಸೂಕ್ತ ಬಹು ಮಾನ ನೀಡಲಾಗುವುದು.
10 ಲಕ್ಷ ರೂ. ಬಂಪರ್ ಬಹುಮಾನ ಗೆಲ್ಲುವ ಅವಕಾಶವೂ ಇದೆ. ಜೂ.30ರ ಒಳಗಾಗಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಕನಿಷ್ಠ 13 ವರ್ಷ ತುಂಬಿರಬೇಕು ಎಂದು ಪ್ರಕಟನೆ ತಿಳಿಸಿದೆ.