ಸೆಂಚೂರಿಯನ್: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸಮನ್ ಕ್ವಿಂಟನ್ ಡಿ ಕಾಕ್ ಅವರು ದಿಢೀರನೆ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ. ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಅಂತ್ಯವಾದ ಕೆಲವೇ ಗಂಟೆಗಳಲ್ಲಿ ಕ್ವಿನ್ನಿ ಈ ಘೋಷಣೆ ಮಾಡಿದ್ದಾರೆ.
ತಕ್ಷಣಕ್ಕೆ ಅನ್ವಯವಾಗುವಂತೆ ಡಿಕಾಕ್ ವಿದಾಯ ಹೇಳಿದ್ದಾರೆ. ಅಂದರೆ ಭಾರತದ ವಿರುದ್ದದ ಟೆಸ್ಟ್ ಸರಣಿಯ ಉಳಿದ ಪಂದ್ಯಗಳಿಗೆ ಅವರು ಲಭ್ಯರಿರುವುದಿಲ್ಲ. ಏಕದಿನ ಮತ್ತು ಟಿ20 ಪಂದ್ಯಗಳಿಗೆ ತಾನು ಲಭ್ಯ ಎಂದು ಕ್ವಿಂಟನ್ ಡಿಕಾಕ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ವರ್ಷದ ಏಕದಿನ ಕ್ರಿಕೆಟಿಗ: ಭಾರತೀಯರಿಗೆ ಸ್ಥಾನವಿಲ್ಲ
ಕುಟುಂಬಕ್ಕೆ ಹೆಚ್ಚಿನ ಸಮಯ ನೀಡಬೇಕಾದ ಕಾರಣ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗುತ್ತಿರುವುದಾಗಿ ಕ್ವಿಂಟನ್ ಹೇಳಿಕೊಂಡಿದ್ದಾರೆ. ಡಿಕಾಕ್ ಮತ್ತು ಪತ್ನಿ ಸಾಶಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಇನ್ನು ಹೆಚ್ಚಿನ ಸಮಯ ಕುಟುಂಬಕ್ಕೆ ಹೆಚ್ಚಿನ ಸಮಯ ಮೀಸಲಿಡುವ ಕಾರಣ ಈ ನಿರ್ಧಾರ ಮಾಡಿರುವುದಾಗಿ ಹೇಳಿಕೊಂಡಿದ್ದರೆ.
29 ವರ್ಷದ ಕ್ವಿಂಟನ್ ಡಿಕಾಕ್ ಅವರು ದಕ್ಷಿಣ ಆಫ್ರಿಕಾ ಪರ 54 ಟೆಸ್ಟ್ ಪಂದ್ಯವಾಡಿದ್ದು, 3,300 ರನ್ ಗಳಿಸಿದ್ದಾರೆ. 38.82ರ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಅವರು ಆರು ಶತಕ ಮತ್ತು 22 ಅರ್ಧಶತಕ ಗಳಿಸಿದ್ದಾರೆ.