Advertisement

ಜಿಲ್ಲಾದ್ಯಂತ 7ನೇ ಆರ್ಥಿಕ ಗಣತಿ ತ್ವರಿತವಾಗಿ ನಡೆಸಿ

09:20 PM Feb 12, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ನಡೆಸಲಾಗುವ 7ನೇ ಆರ್ಥಿಕ ಗಣತಿಯ ಕಾರ್ಯವನ್ನು ತ್ವರಿತವಾಗಿ ನಡೆಸುವ ಮೂಲಕ ಗಣತಿಯ ಸಮಗ್ರ ವರದಿಯನ್ನು ಕಾಲಮಿತಿಯೊಳಗೆ ಜಿಲ್ಲಾಡಳಿತಕ್ಕೆ ನೀಡಬೇಕೆಂದು ಜಿಲ್ಲೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್‌.ಲತಾ ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ 7ನೇ ಆರ್ಥಿಕ ಗಣತಿಯ ಕಾರ್ಯಾಚರಣೆ ಕುರಿತು ಆಯೋಜಿಸಿದ್ದ ಜಿಲ್ಲಾ ಉಸ್ತುವಾರಿ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯ ಸರ್ಕಾರದ ಆದೇಶದಂತೆ 7ನೇ ಆರ್ಥಿಕ ಗಣತಿಯ ಕಾರ್ಯಾಚರಣೆಯನ್ನು ಸುಗಮವಾಗಿ ಹಾಗೂ ತ್ವರಿತವಾಗಿ ನಡೆಸಬೇಕು ಎಂದರು.

ಗಣತಿಗೆ ಚಾಲನೆ: ಈಗಾಗಲೇ 7ನೇ ಆರ್ಥಿಕ ಗಣತಿಗೆ ಚಾಲನೆ ನೀಡಲಾಗಿದ್ದು, ಮೊಬೈಲ್‌ ಆಫ್ ಮೂಲಕ ಗಣತಿಯ ಮಾಹಿತಿಯನ್ನು ಸಂಗ್ರಹಿಸಲು ಸೂಚಿಸಲಾಗಿದೆ ಎಂದರು.

ಅಂತಿಮ ವರದಿ ಜಿಲ್ಲಾಡಳಿತಕ್ಕೆ ನೀಡಿ: ಜಿಲ್ಲಾ ಮತ್ತು ತಾಲೂಕು ಮಟ್ಟದ ಗಣತಿದಾರರಿಗೆ ಈಗಾಗಲೇ ಸೂಕ್ತ ತರಬೇತಿ ನೀಡಲಾಗಿದ್ದು, ಜಿಲ್ಲೆಯ ಪ್ರತಿ ಹಳ್ಳಿಯ ಮನೆ ಮನೆಗಳಿಗೆ ಭೇಟಿ ಆರ್ಥಿಕ ಗಣತಿಯನ್ನು ಕಾಲಮಿತಿಯೊಳಗೆ ಕಡ್ಡಾಯವಾಗಿ ನಡೆಸಿ ಶೀಘ್ರವಾಗಿ ಅಂತಿಮ ವರದಿಯನ್ನು ಜಿಲ್ಲಾಡಳಿತಕ್ಕೆ ನೀಡಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.

ಪಾರದರ್ಶಕವಾಗಿ ಗಣತಿ ನಡೆಸಿ: ಮನೆ ಮನೆಗೆ ಭೇಟಿ ನೀಡಲಿರುವ ಗಣತಿದಾರರು, ಹೈನುಗಾರಿಕೆ, ವ್ಯಾಪಾರ, ಟೈಲರಿಂಗ್‌, ಬೀಡಿ ಕಟ್ಟುವುದು ಟ್ಯೂಶನ್‌ ನಡೆಸುವುದು, ಗಿರಣಿ ನಡೆಸುವುದು ಹೀಗೆ ಯಾವುದೇ ರೀತಿಯ ಆರ್ಥಿಕ ಚಟುವಟಿಕೆಗಳ ಬಗ್ಗೆ ಅಂಕಿಅಂಶಗಳನ್ನು ಸಮಗ್ರವಾಗಿ ಕಲೆಹಾಕಬೇಕು.

Advertisement

ಇದಕ್ಕೆ ಸಾರ್ವಜನಿಕರು, ಉದ್ಯಮಿಗಳು ವಾಸ್ತವವಾದ ಮಾಹಿತಿಯನ್ನು ನೀಡಿ ಸಹಕರಿಸಬೇಕೆಂದ ಅವರು, ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಗಣತಿ ಕಾರ್ಯ ನಡೆಯಲಿದ್ದು, ತಾಲೂಕು ಮಟ್ಟದ ಅಧಿಕಾರಿಗಳು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಪಾರದರ್ಶಕವಾಗಿ ಗಣತಿ ನಡೆಸಬೇಕು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಆರತಿ ಆನಂದ್‌, ಜಿಪಂ ಮುಖ್ಯ ಯೋಜನಾಧಿಕಾರಿ ಮಾಧುವ ರಾವ್‌, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ಹಾಗೂ ಜಿಲ್ಲಾ ಜನನ-ಮರಣ ನೋಂದಣಾಧಿಕಾರಿಗಳ ಇಲಾಖೆಯ ಸದಸ್ಯ ಕಾರ್ಯದರ್ಶಿಗಳು, ಸಮಾನ್ಯ ಸೇವೆ ಕೇಂದ್ರದ ನಿರ್ವಾಹಕರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next