Advertisement

ನೀರು ಸರಬರಾಜು-ಒಳಚರಂಡಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ

12:35 PM Apr 04, 2022 | Team Udayavani |

ಹುಬ್ಬಳ್ಳಿ: ನೀರು ಸರಬರಾಜು ಮಾಡುವ ಲೈನ್‌ಗಳು ಹಾಗೂ ರಸ್ತೆ ಮತ್ತು ಒಳಚರಂಡಿ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಯಾವುದೇ ಕಾರಣ ನೀಡದೆ ಕಾಮಗಾರಿಗಳನ್ನು ಮುಂದೂಡಬಾರದು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.

Advertisement

ವಿವಿಧ ವಾರ್ಡ್‌ಗಳಲ್ಲಿ ಹಮ್ಮಿಕೊಂಡಿರುವ ಕಾಮಗಾರಿಗಳಿಗೆ ರವಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ವಾರ್ಡ್‌ ನಂ. 46ರ ಕೊಂಚಗೇರಿ ಓಣಿಯಲ್ಲಿ ಪಾಲಿಕೆ ಅನುದಾನದ 16 ಲಕ್ಷ ರೂ. ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ. ವಿವೇಕಾನಂದ ಕಾಲೋನಿಯ ಚಿನ್ಮಯ ಶಾಲೆ ಹತ್ತಿರ ಮೂರು ಉದ್ಯಾನಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಜೊತೆಗೆ ಸಮುದಾಯ ಭವನ ನಿರ್ಮಿಸಲಾಗುವುದು. ಇದರಿಂದ ಮಹಿಳಾ ಮಂಡಳ ಹಾಗೂ ಪ್ರೋಬಸ್‌ ಕ್ಲಬ್‌ನ ಸದಸ್ಯರಿಗೆ ಅನುಕೂಲವಾಗಲಿದೆ. ಉದ್ಯಾನಕ್ಕೆ ವಾಕಿಂಗ್‌ ಪಾತ್‌ ಮತ್ತು ವಿದ್ಯುತ್‌ ದೀಪಗಳನ್ನು ಅಳವಡಿಸಲಾಗುವುದು. 42 ಲಕ್ಷ ರೂ.ದಲ್ಲಿ ಅಶೋಕ ನಗರದಲ್ಲಿನ ರಸ್ತೆಗಳನ್ನು ಅಭಿವೃದ್ಧಿ ಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಸ್ತೆ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗಿದೆ ಎಂದರು.

ವಾರ್ಡ್‌ ನಂ. 39ರ ಪಾಟೀಲ ಲೇಔಟ್‌ನಲ್ಲಿ 53 ಲಕ್ಷ ರೂ.ದಲ್ಲಿ ಉದ್ಯಾನ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ. ಇಲ್ಲಿನ ರಸ್ತೆ ಅಭಿವೃದ್ಧಿ ಪಡಿಸಲಾಗುವುದು. ನೀರಿನ ಸಮಸ್ಯೆ ಕೂಡಲೇ ಬಗೆಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲಾಗುವುದು. ಬೀದಿ ದೀಪ ಸರಿಪಡಿಸಿ ಹೈಮಾಸ್ಟ್‌ ದೀಪಗಳನ್ನು ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

1.75 ಲಕ್ಷ ರೂ. ಚೆಕ್‌ ವಿತರಣೆ: ವಾರ್ಡ್‌ ನಂ. 39ರಲ್ಲಿ ಶನಿ ದೇವರ ದೇವಸ್ಥಾನಕ್ಕೆ ಮುಜರಾಯಿ ಇಲಾಖೆಯು ದೇವಸ್ಥಾನದ ಜೀರ್ಣೋದ್ಧಾರಕ್ಕೆ ನೀಡಿದ್ದ 1.75ಲಕ್ಷ ರೂ.ಗಳ ಚೆಕ್‌ ಅನ್ನು ಆರಾಧನಾ ಸಮಿತಿಯಿಂದ ಲಕ್ಷ್ಮೀ ನರಸಿಂಹ ದೇವಸ್ಥಾನದ ಸಮಿತಿಯವರಿಗೆ ಶೆಟ್ಟರ ನೀಡಿದರು.

Advertisement

ದೇವಸ್ಥಾನದ ಸಮಿತಿಯವರಿಗೆ ಇನ್ನೂ ಹೆಚ್ಚಿನ ಹಣದ ಅವಶ್ಯಕತೆ ಬಗ್ಗೆ ತಿಳಿಸಿದರೆ ಅದನ್ನು ಮುಜರಾಯಿ ಇಲಾಖೆಯಿಂದ ಬಿಡುಗಡೆ ಮಾಡಿಸಲು ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು.

ಓಪನ್‌ ಜಿಮ್‌ ಉದ್ಘಾಟನೆ: ನೃಪತುಂಗ ಬೆಟ್ಟದಲ್ಲಿ 54 ಲಕ್ಷ ರೂ. ವೆಚ್ಚದಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ನಿರ್ಮಿಸಿದ ಓಪನ್‌ ಜಿಮ್‌ ಅನ್ನು ಶೆಟ್ಟರ ಅವರು ಉದ್ಘಾಟಿಸಿದರು. ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ, ಸೀಮಾ ಮೊಗಲಿಶೆಟ್ಟರ, ಮುಖಂಡರಾದ ಪ್ರಮೋದ ಮುನೋಳಿ, ಸಿದ್ದು ಮೊಗಲಿಶೆಟ್ಟರ, ಮೋಹನ ಬಡಿಗೇರ, ವಲಯ ಅರಣ್ಯ ಅಧಿಕಾರಿ ಶ್ರೀಧರ ತೆಗ್ಗಿನಮನಿ, ಡಿವೈಆರ್‌ಎಫ್‌ಒ ಪಿ.ಎಂ. ಕರಗುಪ್ಪಿ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next