ತುಮಕೂರು: ನಾಡಪ್ರಭು ಕೆಂಪೇಗೌಡರ ಅಭಿವೃದ್ಧಿ ಪರ್ವ ಇಂದು ಇಡೀ ವಿಶ್ವವೇ ಕೊಂಡಾಡುತ್ತಿದ್ದು, ಇಂಥ ಮಹಾನ್ ವ್ಯಕ್ತಿಯ ಪುತ್ಥಳಿಯನ್ನು ತುಮಕೂರು ನಗರದಲ್ಲಿ ನಿರ್ಮಾಣ ಮಾಡಬೇಕು. ಹಾಗೆಯೇ ಡಾ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಪುತ್ಥಳಿ ಯನ್ನೂ ಅನಾವರಣ ಮಾಡ ಬೇಕು ಎಂಬುದು ನಮ್ಮೆಲ್ಲರ ಆಶಯ ಎಂದು ಗ್ರಾಮಾಂತರ ಶಾಸಕ ಡಿ.ಸಿ. ಗೌರಿಶಂಕರ್ ಹೇಳಿದರು.
ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ನಡೆದ ಕೆಂಪೇಗೌಡರ 511ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಇಡೀ ವಿಶ್ವಕ್ಕೆ ಬೆಂಗಳೂರು ಎಂದರೆ ದೊಡ್ಡ ಸಿಟಿ, ಜಾತಿ ಇಲ್ಲ, ಪಕ್ಷ ಇಲ್ಲ, ಹೈಟೆಕ್ ಸಿಟಿ, ಸಿಲಿಕಾನ್ ಸಿಟಿ ಎಂತೆಲ್ಲಾ ಕರೆಯುವ ಬೆಂಗಳೂರಿ ನಲ್ಲಿ ಕೂಲಿ ಮಾಡುವವನಿಂದ ಹಿಡಿದು ದೊಡ್ಡ ಶ್ರೀಮಂತರವರೆಗೂ ಜೀವನ ನಡೆಸುವಂತಹ ಶಕ್ತಿ ಕೆಂಪೇಗೌಡರು ಕಲ್ಪಿಸಿಕೊಟ್ಟಿದ್ದಾರೆ ಎಂದರು.
ಗೌಡರ ಕೊಡುಗೆ ಅಪಾರ: ಕೆಂಪೇಗೌಡರ ಬಗ್ಗೆ ಎಷ್ಟು ಅಭಿಮಾನ, ಸ್ವಾಭಿಮಾನ ಇಟ್ಟುಕೊಂಡಿದ್ದೇವೋ ಅದೇರೀತಿ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳ ಸ್ವರೂಪದಲ್ಲಿ ನಾವು ದೇವರನ್ನು ಕಾಣುತ್ತಿದ್ದೇವೆ. ಅದೇ ರೀತಿ ಜನಾಂಗದಲ್ಲಿ ಇಡೀ ದೇಶದಲ್ಲಿ ಒಬ್ಬ ಒಕ್ಕಲಿಗರ ಮಗ ಪ್ರಧಾನಿಯಾಗಬಹುದು ಎಂಬುದನ್ನು ರೈತನ ಮಗನಾಗಿ ದೇವೇ ಗೌಡರು ತೋರಿಸಿಕೊಟ್ಟಿದ್ದಾರೆ ಎಂದರು.
ಶ್ರೀಗಳ ಪುತ್ಥಳಿ ನಿರ್ಮಾಣ: ಇಂದು ದೊಡ್ಡ ದೊಡ್ಡ ಇತಿಹಾಸ ಸೃಷ್ಟಿಸಿರುವ ಅನೇಕ ವಿದ್ಯಾಸಂಸ್ಥೆಗಳನ್ನು ಹೊಂದಿ ಅನ್ನದಾಸೋಹ ಮಾಡುತ್ತಿರುವ ಸಿದ್ಧಗಂಗಾ ಮಠ, ಆದಿ ಚುಂಚನಗಿರಿ ಮಠ ಆಗಿರಬಹುದು ಅನೇಕ ಮಠಗಳ ಪೀಠಾಧ್ಯಕ್ಷರ ಪುತ್ಥಳಿಗಳನ್ನು ಅನಾವರಣ ಮಾಡುವಂತಹ ಕಾರ್ಯ ಜಿಲ್ಲೆಯಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.
ಶೀಘ್ರದಲ್ಲಿಯೇ ಸ್ಥಳ ನಿಗದಿ: ಈಗಾಗಲೇ ತುಮಕೂರಿನ ಟೌನ್‌ಹಾಲ್ ವೃತ್ತಕ್ಕೆ ಬಿಜಿಎಸ್ ವೃತ್ತ ಎಂದು ನಾಮಕರಣ ಮಾಡಲಾಗಿದೆ. ಅಲ್ಲಿ ಡಾ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಗಳ ಪುತ್ಥಳಿ ನಿರ್ಮಿಸುವುದರ ಜೊತೆಗೆ ಪಾಲಿಕೆ ಆವರಣದಲ್ಲಿರುವ ಉದ್ಯಾನ ವನದಲ್ಲಿ ಕೆಂಪೇಗೌಡರ ಪ್ರತಿಮೆ ಅನಾ ವರಣ ಮಾಡಲು ಪಾಲಿಕೆ ಮೇಯರ್‌ಗೆ ಮನವಿ ಸಲ್ಲಿಸಲಾಗಿದೆ. ಆಯುಕ್ತ ರೊಂದಿಗೂ ಮಾತ ನಾಡಿದ್ದೇನೆ ಜುಲೈ ತಿಂಗಳಲ್ಲಿ ನಡೆಯುವ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಸದರಿ ವಿಷಯ ವನ್ನು ಮಂಡಿಸಿ, ಸದಸ್ಯರು ಒಪ್ಪಿಗೆ ಪಡೆದು ಶೀಘ್ರದಲ್ಲಿಯೇ ಜಾಗ ಗೊತ್ತು ಮಾಡಿ ತಿಳಿಸಲಾಗುವುದು ಎಂಬ ಭರವಸೆಯನ್ನು ನೀಡಿದ್ದಾರೆ ಎಂದರು.
ಕೈಲಾದಷ್ಟು ಸಹಾಯ ಮಾಡಿ: ಎಷ್ಟು ಅಡಿ ಪುತ್ಥಳಿ ನಿರ್ಮಾಣ ಮಾಡಬೇಕು ಎಂಬುದನ್ನು ಜಾತ್ಯತೀತ, ಪಕ್ಷಾತೀತವಾಗಿ ಹಿರಿಯ ಮುಖಂಡರೊಂದಿಗೆ ಸಭೆ ನಡೆಸಿ ಚರ್ಚಿಸ ಲಾಗುವುದು. ಪುತ್ಥಳಿ ನಿರ್ಮಾಣಕ್ಕೆ ಅಂದು ನಿಮ್ಮ ಕೈಲಾದಷ್ಟು ಸಹಾಯ ಮಾಡಬಹುದು ಎಂದರು. ಬಾಲಗಂಗಾಧರನಾಥ ಸ್ವಾಮೀಜಿ ಪುತ್ಥಳಿಯನ್ನು ನಿರ್ಮಾಣ ಮಾಡಬೇಕೆ ನ್ನುವ ನಿಟ್ಟಿನಲ್ಲಿ ಆದಿಚುಂಚನಗಿರಿ ಶ್ರೀಗಳನ್ನು ನಿಯೋಗದಲ್ಲಿ ಭೇಟಿ ಮಾಡಿ, ಸರ್ಕಾರಕ್ಕೆ ಮನವಿ ಸಲ್ಲಿಸಿ ಸೂಕ್ತವಾದ ಜಾಗ ಸರ್ಕಾರ ಕಲ್ಪಿಸಿಕೊಟ್ಟರೆ, ಈಗಿರುವ ಬಿಜಿಎಸ್ ವೃತ್ತದಲ್ಲಿ ಪುತ್ಥಳಿ ನಿರ್ಮಾಣ ಮಾಡಲು ಸಿದ್ಧರಿರುವುದಾಗಿ ತಿಳಿಸಿದರು.
ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್. ನಾಗರಾಜು, ಮಹಾಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ, ತಾಲೂಕು ಜೆಡಿಎಸ್ ಅಧ್ಯಕ್ಷ ಹಾಲನೂರು ಅನಂತಕುಮಾರ್, ರಾಜ್ಯ ಹಿರಿಯ ಉಪಾಧ್ಯಕ್ಷ ಗಂಗಣ್ಣ, ಜಿಲ್ಲಾ ಉಪಾಧ್ಯಕ್ಷ ಆರ್.ದೇವರಾಜು, ನಗರಾಧ್ಯಕ್ಷ ಬೆಳ್ಳಿ ಲೋಕೇಶ್ ಇದ್ದರು.