Advertisement

ಪಡಿತರ ಸಮಸ್ಯೆ ಶೀಘ್ರ ಪರಿಹರಿಸಿ: ಶ್ರೀನಿವಾಸ ಪೂಜಾರಿ

03:19 PM Feb 23, 2017 | |

ಇಡ್ಕಿದು : ವಿದ್ಯುತ್‌ ಬಿಲ್‌ನಿಂದಾಗಿ ಎಪಿಎಲ್‌ ಮತ್ತು ಬಿಪಿಎಲ್‌ ಪಡಿತರ ಬ್ಲಾಕ್‌ ಆಗಿದ್ದಲ್ಲಿ ಗುರುತಿಸಿ ಸರಿಪಡಿಸಲು ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.

Advertisement

ಇಡ್ಕಿದು ಗ್ರಾ.ಪಂ.ನಲ್ಲಿ  ನಡೆದ ಸಾಮಾನ್ಯಸಭೆ ಮತ್ತು ಸಮ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಧಾರ್‌ ಮತ್ತು ಸಂಬಂಧಪಟ್ಟ ದಾಖಲೆ ನೀಡಿ ಪಡಿತರ ಕಾರ್ಡ್‌ ಸರಿಪಡಿಸಬೇಕು. ಮೆಸ್ಕಾಂನಿಂದ ಗ್ರಾ.ಪಂ.ಗೆಬರುವ ವಿದ್ಯುತ್‌ ಬಿಲ್‌ ಮಾಹಿತಿ ಮತ್ತು ಬಳಸಿದ ಯುನಿಟ್‌ ಮಾಹಿತಿ ಪಡೆದ ಬಳಿಕ ವಿದ್ಯುತ್‌ ಬಿಲ್‌ ಪಾವತಿಸಬೇಕೆಂದು ಹೇಳಿದರು.

ಗ್ರಾ.ಪಂ. ಒಂದಕ್ಕೆ ಬಂದಿರುವ ವಿದ್ಯುತ್‌ ಬಿಲ್‌ ಪರಿಶೀಲನೆಗೆ ಆಗ್ರಹಿಸಿದ ಬಳಿಕ ಬಂದ ಬಿಲ್‌ನಲ್ಲಿ ಒಟ್ಟು 2 ಲಕ್ಷ ರೂ.ಗಳಷ್ಟು ಕಡಿಮೆ ಬಂದಿರುವ ಕುರಿತು ಅವರು ಉದಾಹರಿಸಿದರು. ಎ. 24ರಂದು ಪಂಚಾಯತ್‌ರಾಜ್‌ ದಿನವನ್ನು ವಿಶಿಷ್ಟವಾಗಿ ಆಚರಿಸಲು ಸಲಹೆ ನೀಡಿದರು. 

ಇಡ್ಕಿದು  ಮತ್ತು ಕುಳ ಗ್ರಾಮದಲ್ಲಿ 94ಸಿ, 94 ಸಿಸಿಯ ಅರ್ಜಿ ವಿಲೇವಾರಿಯಾಗದೆ ಬಾಕಿಯಾಗಿರುವ ಅರ್ಜಿಗಳನ್ನು ಸರಕಾರದ ನಿಯಮದಂತೆ ವಿಲೇವಾರಿ ಮಾಡಬೇಕೆಂದು ಗ್ರಾಮ ಕರಣಿಕರಿಗೆ ಸೂಚಿಸಿದರು.

ಕುಳ ಗ್ರಾಮದಲ್ಲಿ  ನಿರ್ಮಾಣಗೊಂಡ ಹಿಂದೂ ರುದ್ರ ಭೂಮಿಯನ್ನು ವೀಕ್ಷಿಸಿದ ಅವರು, ಜನರಿಗೆ  ಅನುಕೂಲವಾಗುವ ರೀತಿಯಲ್ಲಿ ರುದ್ರ ಭೂಮಿ ನಿರ್ಮಾಣಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಗ್ರಾಮ ಮಟ್ಟದಲ್ಲಿ ಮಹಾತ್ಮಾ ಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ  ಮಾಡಿರುವ   ಸಾರ್ವಜನಿಕ ಮತ್ತು ವೈಯಕ್ತಿಕ ಕೆಲಸಗಳ ಬಗ್ಗೆ ಮಾಹಿತಿ ಪಡೆದುಕೊಂಡರು. 2015-16ನೇ ಸಾಲಿನಲ್ಲಿ ತೆರಿಗೆ ಸಂಗ್ರಹ ಶೇ. 100 ಆಗಿರುವುದನ್ನು  ಶ್ಲಾಘಿಸಿದ ಅವರು, ಗ್ರಾ.ಪಂ. ಅನುದಾನ ನೀಡುವ ಕುರಿತು ಭರವಸೆ ನೀಡಿದರು.
 
ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆದ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ ಅಧಿಕಾರಿ ಗಿರೀಶ್‌ ಮತ್ತು ಅಭಿವೃದ್ಧಿ ಅಧಿಕಾರಿ ಗೋಕುಲ್‌ ದಾಸ್‌ ಭಕ್ತ ಅವರನ್ನು ಸಮ್ಮಾನಿಸಿದರು. 

ವಿದ್ಯುತ್‌ ಸಮಸ್ಯೆ ಪರಿಹಾರಕ್ಕೆ ಆಗ್ರಹ
ಇಡ್ಕಿದು, ಕುಳ ಗ್ರಾಮದಲ್ಲಿ ವಿದ್ಯುತ್‌ ಸಮಸ್ಯೆ ಜಾಸ್ತಿಯಾಗಿದೆ. ಒಂದು ವರ್ಷದ ಹಿಂದೆ ವಿದ್ಯುತ್‌ ಪರಿವರ್ತಕ ಅಳವಡಿಸಿದ್ದರೂ ಅದಕ್ಕೆ ಸಂಪರ್ಕ ನೀಡಿಲ್ಲ. ಕಾರ್ಯಾಡಿ, ಉರಿಮಜಲು, ಅಳಕೆಮಜಲು, ಮಿತ್ತೂರಿನಲ್ಲಿ ಕಂಬಗಳನ್ನು ಮಾತ್ರ ಅಳವಡಿಸಲಾಗಿದೆ. ಆದ್ದರಿಂದ ಇಲ್ಲಿನ ವಿದ್ಯುತ್‌ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲು ಇಂಧನ ಸಚಿವರು ಮತ್ತು ಶಾಸಕಿಗೆ ಮನವಿ ಮಾಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
 
ಮೈಕೆ -ಬೆರ್ಕೋಡಿ -ಸೂರ್ಯ  ಸಂಪರ್ಕ ರಸ್ತೆಗಾಗಿ ಬಂದ ಅರ್ಜಿಯ ಕುರಿತು ಚರ್ಚಿಸಿ ಜಾಗದ ಮಾಲಕರಲ್ಲಿ  ಚರ್ಚೆ ನಡೆಸಿ ರಸ್ತೆ ನಿರ್ಮಿಸುವ ನಿರ್ಣಯ ಅಂಗೀಕರಿಸಲಾಯಿತು.  ಮೆಸ್ಕಾಂ ನೀಡುವ ವಿದ್ಯುತ್‌ ಬಿಲ್‌ ವರದಿಯನ್ನು ಪರಿಶೀಲನೆಗೆ ಮನವಿ ಮಾಡಲು ನಿರ್ಣಯಿಸಲಾಯಿತು. 

ಇಡ್ಕಿದು ಕುಳ-ವಿಟ್ಲ ಮುಟ್ನೂರು ಗ್ರಾಮದ ಜನರ ಅಭಿಪ್ರಾಯ ಪಡೆದು ಘನತ್ಯಾಜ್ಯ ಘಟಕ ನಿರ್ಮಿಸಲು ಒಂದು ಎಕರೆ ಜಾಗವನ್ನು ಖರೀದಿಸಲಾಗಿದೆ. ಸ್ವತ್ಛತೆ ದೃಷ್ಟಿಯಿಂದ ಎಲ್ಲ ಸಂಘ-ಸಂಸ್ಥೆಗಳ  ನೆರವಿನೊಂದಿಗೆ  ಘಟಕವನ್ನು ನಿರ್ಮಿಸಲು ನಿರ್ಣಯಿಸಲಾಯಿತು.

ವಿವೇಕಾನಂದ ಪದವಿ ಕಾಲೇಜಿನ ಪ್ರಾಣಿ ಶಾಸ್ತ್ರ ವಿಭಾಗದ  ಪ್ರಾಧ್ಯಾಪಕ ಗ್ರಾಮ ಮಟ್ಟದ ಜೀವ ವೈವಿಧ್ಯ ಮಾಹಿತಿ ನೀಡಿದರು.

ಅಧ್ಯಕ್ಷೆ ಚಂದ್ರಾವತಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸುಧೀರ್‌ ಕುಮಾರ್‌ ಶೆಟ್ಟಿ  ಸದಸ್ಯರಾದ ಜಯರಾಮ ಕಾರ್ಯಾಡಿ, ಚಿದಾನಂದ ಪಿ., ಕೇಶವ ಯು., ರತ್ನಾ, ಜಗದೀಶ್ವರಿ, ಪ್ರೇಮಾ, ವಸಂತಿ, ಬೇಬಿ, ಶಾರದಾ, ರಸಿಕಾ, ಆಶಾ, ಉಮಾ, ರಮೇಶ, ಲೆಕ್ಕ ಸಹಾಯಕಿ ರಾಜೇಶ್ವರಿ ಹಾಜರಿದ್ದರು. 

ಕಬಕ: ನೋಟಿಸ್‌ ಜಾರಿಗೆ ನಿರ್ಣಯ
ಕಬಕದಲ್ಲಿರುವ ಬಾರ್‌  ರೆಸ್ಟೋರೆಂಟ್‌, ಕೋಳಿ ಮಾಂಸದ ಅಂಗಡಿ ಮತ್ತು ಕಟ್ಟಡದ ಮಾಲಕರಿಗೆ  ನೋಟಿಸ್‌ ಜಾರಿ ಮಾಡಿದ್ದರೂ ಸ್ವತ್ಛತೆ ಕಾಪಾಡದ ಹಿನ್ನೆಲೆಯಲ್ಲಿ ಮತ್ತೋಮ್ಮೆ ನೋಟಿ ಜಾರಿ ಮಾಡಲು ನಿರ್ಣಯಿಸಲಾಯಿತು. ನೋಟಿಸ್‌ ನೀಡಿದ ಏಳು ದಿನದೊಳಗೆ ಸೂಕ್ತ ಕ್ರಮಕೈಗೊಳ್ಳಲು ನಿರ್ಧರಿಸಲಾಯಿತು. 

ಪಂಚಾಯತ್‌ ಮಟ್ಟದಲ್ಲಿ  ಸತತವಾಗಿ 23 ವರ್ಷಗಳಿಂದ ನಡೆಯುವ ನಾಯಿ ಹುಚ್ಚು  ರೋಗ ನಿಯಂತ್ರಣ ಲಸಿಕೆ ಶಿಬಿರವನ್ನು  ಮಾರ್ಚ್‌ ತಿಂಗಳಲ್ಲಿ ಮಾಡುವುದೆಂದು ನಿರ್ಣಯಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next