Advertisement
ಭಾನುವಾರ ಈ ಸಂಬಂಧ ಪರೋಕ್ಷ ತೆರಿಗೆ ಮತ್ತು ಸೀಮಾ ಸುಂಕದ ಕೇಂದ್ರೀಯ ಮಂಡಳಿ ಮತ್ತು ಜಿಎಸ್‌ಟಿ ನೆಟ್ವರ್ಕ್ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದ ನಿರ್ಮಲಾ, ದಕ್ಷ ರಿಫಂಡ್ ತಾಂತ್ರಿಕತೆಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಜಿಎಸ್‌ಟಿ ರಿಫಂಡ್ ಮೊತ್ತ ತುಂಬಾ ದೊಡ್ಡದೇನೂ ಅಲ್ಲ. ಆದರೂ ನಾವು ಅದನ್ನು ಶೀಘ್ರ ಪಾವತಿ ಮಾಡುತ್ತೇವೆ ಎಂದು ಅವರು ಈ ವೇಳೆ ಹೇಳಿದ್ದಾರೆ. ಸರ್ಕಾರಿ ಇಲಾಖೆಗಳು ಮತ್ತು ಸರ್ಕಾರಿ ಸ್ವಾಮ್ಯದ ಕಂಪನಿಗಳಿಂದ ಸಣ್ಣ ಉದ್ದಿಮೆಗಳಿಗೆ ಪಾವತಿಯಾಗುವ ಈ ಜಿಎಸ್‌ಟಿ ರಿಫಂಡ್ ಸಣ್ಣ ಉದ್ಯಮಗಳಿಗೆ ಹಣಕಾಸು ದ್ರವ್ಯತೆ ಒದಗಿಸುವಲ್ಲಿ ಅತ್ಯಂತ ಪ್ರಮುಖ ಅಂಶವಾಗಿದೆ. ಹೀಗಾಗಿ ಈ ಸಂಸ್ಥೆಗಳಿಗೆ ಸರ್ಕಾರ ಹಣ ಪಾವತಿ ಬಾಕಿ ಉಳಿಸಿಕೊಂಡಲ್ಲಿ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ. Advertisement
ಸಣ್ಣ ಉದ್ದಿಮೆಗೆ ತ್ವರಿತ ಬಾಕಿ ಪಾವತಿ
12:56 AM Aug 26, 2019 | mahesh |
Advertisement
Udayavani is now on Telegram. Click here to join our channel and stay updated with the latest news.