Advertisement
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ಪರಿಣಾಮ ಕಾರಿ ಯಾಗಿ ಕೆಲಸ ಮಾಡಿದ್ದರೂ ಕಡಲ್ಕೊರೆತ ನಿಂತಿಲ್ಲ. ಎಡಿಬಿ ಯೋಜನೆಯಡಿ 300 ಕೋಟಿ ರೂ. ವೆಚ್ಚ ಮಾಡಿದೆ. 330 ಕಿ.ಮೀ. ಕಡಲ ತೀರದಲ್ಲಿ ಕಡಲ್ಕೊರೆತ ತಡೆಗೆ ಎಡಿಬಿ ಮಾಡಿರುವ ಕಾರ್ಯದಲ್ಲೂ ಲೋಪ ದೋಷ ಆಗಿದೆ. ಒಟ್ಟಾರೆ ಯಾಗಿ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸೀ ವೇವ್ ಬ್ರೇಕರ್ ಹೊಸ ತಂತ್ರ ಜ್ಞಾನ ವನ್ನು ಮಂಗಳೂರಿನ ಉಳ್ಳಾಲ ಭಾಗದಲ್ಲಿ ಒಂದು ಕಿ.ಮೀ.ಗೆ ಪ್ರಾಯೋಗಿಕವಾಗಿ ಅಳ ವಡಿಸ ಲಾಗುವುದು. ಅದು ಯಶಸ್ವಿಯಾದರೆ ಇಡೀ ಕರಾವಳಿ ಭಾಗದಲ್ಲಿ ಅನುಷ್ಠಾನಕ್ಕೆ ತರುವ ಚಿಂತನೆಯಿದೆ ಎಂದರು.
ಕಡಲ್ಕೊರೆತ ತಡೆಗೆ ತತ್‌ಕ್ಷಣ ಕಾಮ ಗಾರಿಗೆ ಹಣವನ್ನು ಎಸ್‌ಡಿಆರ್‌ಎಫ್ ಅಡಿಯಲ್ಲಿ ಜಿಲ್ಲಾಡಳಿತಕ್ಕೆ ಒದಗಿಸಲಾಗುವುದು. ಶಾಶ್ವತ ಯೋಜನೆಯ ಜತೆಗೆ ತಾತ್ಕಾಲಿಕ ಕಾರ್ಯಕ್ರಮಗಳು ಬೇಕಾಗುತ್ತವೆ. ಪ್ರತೀ ವರ್ಷ ಆಗುವ ಕಡಲ ಕೊರೆತ ತಡೆಯಲು ಜಿಲ್ಲಾಧಿಕಾರಿಗಳ ಹಂತದಲ್ಲಿ ಕೆಲವು ಕಾರ್ಯಕ್ರಮಗಳನ್ನು ನಿರಂತರ ವಾಗಿ ರೂಪಿಸಬೇಕು. ಇದಕ್ಕೆ ವಿಶೇಷ ಅನುದಾನ ಒದಗಿಸಲಾಗುವುದು. ಸಣ್ಣ ಪ್ರಮಾಣದ ಕೆಲಸಗಳನ್ನು ಕೈಗೊಳ್ಳಲು ಅವಕಾಶ ನೀಡಲಾಗು ವುದು ಎಂದು ತಿಳಿಸಿದರು.
Related Articles
ಕುಂದಾಪುರ: ಮರವಂತೆಯಲ್ಲಿ ಕಡಲ್ಕೊರೆತದಿಂದ ಹಾನಿಗೀಡಾದ ಪ್ರದೇಶಗಳನ್ನು ವೀಕ್ಷಿಸಿದ್ದು, ಸಾಕಷ್ಟು ಹಾನಿಯಾಗಿದೆ. ಇನ್ನಷ್ಟು ತೀರ ಪ್ರದೇಶ ಕುಸಿಯದಂತೆ ತುರ್ತು ಕಾಮಗಾರಿಯನ್ನು ಶೀಘ್ರ ಆರಂಭಿಸಲಾಗುವುದು. ಶಾಶ್ವತ ಯೋಜನೆಗೆ ಹೊಸ ತಂತ್ರಜ್ಞಾನ ಮಾದರಿ ಅನುಷ್ಠಾನ ಸಂಬಂಧ ಡಿಪಿಆರ್ ಸಿದ್ಧಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
Advertisement
ಅವರು ಬುಧವಾರ ಬೈಂದೂರು ತಾಲೂಕಿನ ಮರವಂತೆಯ ಕರಾವಳಿ ಭಾಗದಲ್ಲಿ ಕಡಲ್ಕೊರೆತದಿಂದ ಹಾನಿಗೀಡಾದ ಪ್ರದೇಶವನ್ನು ವೀಕ್ಷಿಸಿ ಪತ್ರಕರ್ತ ರೊಂದಿಗೆ ಮಾತನಾಡಿದರು.
ಅಕ್ರಮ ನಡೆದಿದ್ದರೆ ಕ್ರಮಮರವಂತೆ ಸಹಿತ ಕರಾವಳಿ ತೀರದುದ್ದಕ್ಕೂ ಈ ಹಿಂದೆ ನಡೆದಿದ್ದ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಿಸದಿರುವ ಬಗ್ಗೆ ದೂರು ಕೇಳಿ ಬಂದಿದೆ. ಈ ಬಗ್ಗೆ ತನಿಖೆ ನಡೆಸಿ, ಅಕ್ರಮ ನಡೆದಿದ್ದರೆ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕಳೆದ ವರ್ಷ ನಡೆಸಿದ ಕಡಲ್ಕೊರೆತ ತುರ್ತು ಕಾಮಗಾರಿಯ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಲಾಗುವುದು ಎಂದರು. ಶೀಘ್ರ ಬಿಡುಗಡೆ
ಮರವಂತೆಯ ಮೀನುಗಾರಿಕೆ ಹೊರ ಬಂದರಿನ ಎರಡನೇ ಹಂತದ ಅಭಿವೃದ್ಧಿಗೆ ಮಂಜೂರಾಗಿರುವ 84 ಕೋಟಿ ರೂ. ಟೆಂಡರ್ ಪ್ರಕ್ರಿಯೆಯಲ್ಲಿದ್ದು, ಶೀಘ್ರ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ನಡೆಸಲು ಆದೇಶಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು. ಸಚಿವರಾದ ಆರ್. ಅಶೋಕ್, ಎಸ್. ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕುಂದಾಪುರ ಎಸಿ ಕೆ. ರಾಜು, ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು. ಮೀನುಗಾರರ
ಅಹವಾಲು ಆಲಿಸಿದ ಸಿಎಂ
ಮರವಂತೆಗೆ ಬರುತ್ತಿದ್ದಂತೆ ಜಮಾಯಿಸಿದ್ದ ನೂರಾರು ಮಂದಿ ಮೀನುಗಾರರ ಬಳಿಗೆ ತೆರಳಿದ ಮುಖ್ಯಮಂತ್ರಿಗಳು ಅಲ್ಲಿನ ಸಂಕಷ್ಟ, ಅಹವಾಲುಗಳನ್ನು ಆಲಿಸಿದರು. ಪ್ರತೀ ವರ್ಷ ಕಡಲ್ಕೊರೆತದಿಂದಾಗಿ ಈ ಭಾಗದ ಜನರ ಜೀವನ ಕಂಗೆಟ್ಟಿದೆ. ಈ ಪರಿಸರ ಬಿಟ್ಟು ಹೋಗಲು ಸಾಧ್ಯವಿಲ್ಲ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಿ, ನಮಗೆ ಬದುಕಲು ಬಿಡಿ ಎಂದು ತೀರದ ವಾಸಿಗಳು ಮನವಿ ಸಲ್ಲಿಸಿದರು.