Advertisement

Rayanna Brigade ಸ್ಥಾಪನೆಗೆ ಶೀಘ್ರ ನಿರ್ಧಾರ: ಈಶ್ವರಪ್ಪ

08:38 PM Sep 22, 2024 | Team Udayavani |

ವಿಜಯಪುರ: ರಾಜ್ಯದಲ್ಲಿ ಲಿಂಗಾಯತರು, ಹಿಂದುಳಿದವರು, ದಲಿತರು ಹಾಗೂ ಬ್ರಾಹ್ಮಣರಿಗೂ ಸೇರಿದಂತೆ ಅನ್ಯಯವಾಗುವುದನ್ನು ತಡೆಯಲು “ರಾಯಣ್ಣ ಚನ್ನಮ್ಮ ಬ್ರಿಗೇಡ್‌’ (ಆರ್‌ಸಿಬಿ) ಸ್ಥಾಪನೆ ಸಂಬಂಧ ಕಾರ್ಯಕರ್ತರ ಜತೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಹೇಳಿದ್ದಾರೆ.

Advertisement

ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, ಈ ಬ್ರಿಗೇಡ್‌ ಮಾಡುವ ಬಗ್ಗೆ ಕೂಡಲಸಂಗಮ ಸ್ವಾಮೀಜಿ ಹೇಳಿಕೆ ವಿಚಾರವನ್ನು ಕಾರ್ಯಕರ್ತರೊಂದಿಗೆ ಚರ್ಚಿಸಲಾಗುತ್ತದೆ. ಬೇರೆ ಸ್ವಾಮೀಜಿಗಳು ಕೂಡ ಬ್ರಿಗೇಡ್‌ ಬೇಕು ಎಂದಿದ್ದಾರೆ. ಕಾರ್ಯಕರ್ತರ ಬಳಿ ಚರ್ಚಿಸಿದ ನಂತರ ಮುಂದಿನ ನಿರ್ಣಯ ಮಾಡುತ್ತೇವೆ ಎಂದರು.

ಬಿಜೆಪಿ ಬಿಡಲ್ಲ: ಭಾರತೀಯ ಜನತಾ ಪಾರ್ಟಿ ನನ್ನ ತಾಯಿ ಇದ್ದಂತೆ. ಆದರೆ, ಅಲ್ಲಿನ ಅವ್ಯವಸ್ಥೆಯಿಂದ ನಾನು ಪಕ್ಷ ಬಿಟ್ಟಿದ್ದೇನೆ. ಪಕ್ಷದಲ್ಲಿ ಹೊಂದಾಣಿಕೆ ರಾಜಕಾರಣ ಹೆಚ್ಚಾಗುತ್ತಿದೆ. ಆ ತಾಯಿಯನ್ನು ಬಿಟ್ಟು ನಾನು ಬೇರೆ ಯಾವ ಪಕ್ಷಕ್ಕೂ ಹೋಗಲ್ಲ. ಪಕ್ಷದಲ್ಲಿ ಶುದ್ಧೀಕರಣವಾಗಲಿ ಎಂಬ ಕಾರಣಕ್ಕೆ ಪಕ್ಷದಿಂದ ದೂರ ಇದ್ದೇನೆ ಎಂದರು.

ರಾಜ್ಯ ಬಿಜೆಪಿ ಘಟಕದ ಅವ್ಯವಸ್ಥೆ ಬಗ್ಗೆ ಇವತ್ತಲ್ಲ, ನಾಳೆ ಹೈಕಮಾಂಡ್‌ನ‌ವರು ಚಿಂತಿಸಿ ಮಾತನಾಡುವ ನಂಬಿಕೆ ಇದೆ. ಪಕ್ಷದಲ್ಲಿ ಹಿಂದೂತ್ವ ಪಕ್ಕಕ್ಕೆ ಹೋಗಿದೆ. ಜಾತಿ, ಉಪಜಾತಿಗೆ ಬೆಂಬಲ ಸಿಗುತ್ತಿದೆ. ಪಕ್ಷ ಶುದ್ಧೀಕರಣವಾಗಬೇಕು. ಆಗ ನಾನು ಕೂಡಾ ಬಿಜೆಪಿಗೆ ಸೇರುವ ವಿಚಾರವಾಗಿ ತೀರ್ಮಾನ ಮಾಡುವೆ. ಹಿರಿಯ ಶಾಸಕ ಬಸವಗೌಡ ಪಾಟೀಲ ಯತ್ನಾಳ ಹಿಂದೂತ್ವದ ಹುಲಿ. ನನ್ನನ್ನು ಬಿಜೆಪಿಗೆ ಕರೆತಂದು ಸಿಎಂ ಮಾಡುತ್ತೇವೆ ಎಂಬ ಅವರ ಪ್ರೀತಿ-ಮಾತಿಗೆ ಅಭಿನಂದಿಸುವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next