Advertisement
ಜಿಲ್ಲಾಡಳಿತದ ವತಿಯಿಂದ ನಗರದಲ್ಲಿ ಆಯ್ಕೆಯಾಗಿದ್ದ ಜಲಾಮೃತ ಹಾಗೂ ಸ್ವತ್ಛಮೇವ ಜಯತೆ ಕಾರ್ಯಕ್ರಮ ಉದ್ಘಾಟಿಸಲು ಆಗಮಿಸಿದ್ದ ವೇಳೆ ತಮ್ಮನ್ನುಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷದಲ್ಲಿ ರಾಜ್ಯದಲ್ಲಿ ಇಷ್ಟೊತ್ತಿಗಾಗಲೇ 18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿ ಶೇ. ಶೇ.27 ರಷ್ಟು ಗುರಿ ಸಾಧಿಸಲಾಗಿತ್ತು. ಆದರೆ ಈ ವರ್ಷ ಇದುವರೆಗೂ ಶೇ.14 ರಷ್ಟು ಪ್ರಮಾಣದಲ್ಲಿ ಮಾತ್ರ ಬಿತ್ತನೆಯಾಗಿದ್ದು, ರಾಜ್ಯಾದ್ಯಂತ ಒಟ್ಟಾರೆ 8 ಲಕ್ಷ ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಬಿತ್ತನೆಗೊಂಡಿದೆ ಎಂದರು.
ರೈತರಿಗೆ ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರಗಳನ್ನು ಇಲಾಖೆ ಮೂಲಕ ವಿತರಿಸಲು ಕ್ರಮ ವಹಿಸಲಾಗಿದ್ದು, ಅಗತ್ಯ ಬೇಡಿಕೆಗೆ ಅನುಗುಣಮವಾಗಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದರು. ಕಾಂಟ್ರ್ಯಾಕ್ಟ್ ಕೃಷಿ ಅಲ್ಲ: ಸಾಮೂಹಿಕವಾಗಿ ನಡೆಸುವ ಕೃಷಿಯನ್ನು ಕೆಲವರು ಕಾಂಟ್ರ್ಯಾಕ್ಟ್ ಕೃಷಿಯೆಂದು ತಪ್ಪಾಗಿ ಅರ್ಥೈಸಲಾಗಿದೆ. ಹೆಚ್ಚು ಆಹಾರ ಉತ್ಪಾದನೆ ಮಾಡುವ ದೃಷ್ಟಿಯಿಂದ 500, 1000 ಹೆಕ್ಟೇರ್ ಪ್ರದೇಶದಲ್ಲಿ ರೈತರನ್ನು ಒಗ್ಗೂಡಿಸಿ ಸಾಮೂಹಿಕವಾಗಿ ಕೃಷಿ ಮಾಡಿಸುವ ಬಗ್ಗೆ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
Related Articles
Advertisement
ಇಸ್ರೇಲ್ ಮಾದರಿ ಕೃಷಿ ಪದ್ಧತಿಯನ್ನು ರಾಜ್ಯದಲ್ಲಿ ವಿಸ್ತರಿಸಿ ಸರ್ಕಾರವೇ ರೈತರಿಗೆ ಬೇಕಾದ ಎಲ್ಲಾ ರೀತಿಯ ಮೂಲ ಸೌಕರ್ಯ, ಆಧುನಿಕ ಯಂತ್ರೋಪಕರಣಗಳನ್ನು ಒದಗಿಸಿ ಹೆಚ್ಚು ಉತ್ಪಾದನೆ ಮಾಡಿಸುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಇಲಾಖೆ ಮೂಲಕ ಕೈಗೆತ್ತಿಕೊಳ್ಳಲಾಗಿದ್ದು, ಇದಕ್ಕೆ ಕಾನೂನು ತಿದ್ದುಪಡಿ ಕೂಡ ಮಾಡಬೇಕಿದೆ. ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ತಿಳಿಸಿದರು.
ರಾಜೀನಾಮೆ ನೀಡಲು ಸಿದ್ಧ – ಶಿವಶಂಕರ ರೆಡ್ಡಿ: ಪಕ್ಷೇತರ ಶಾಸಕರಿಗೆ ಸಚಿವ ಸ್ಥಾನ ನೀಡಿರುವ ಕುರಿತು ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರಲ್ಲಿ ಅಸಮಾದಾನ ಭುಗಿಲೇಳಿರುವ ಕುರಿತು ಪತ್ರಿಕ್ರಿಯೆ ನೀಡಿದ ಕೃಷಿ ಸಚಿವ ಎನ್.ಹೆಚ್.ಶಿವಶಂಕರರೆಡ್ಡಿ, ಸದ್ಯದಲೇ ಮತ್ತೂಮ್ಮೆ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ವರಿಷ್ಠರ ಸೂಚನೆಯಂತೆ ನಮಗೆಲ್ಲಾ ಟೈಮ್‌ಬೌಂಡ್ ನಿಗದಿಯಾಗಿದೆ. ಸದ್ಯಕ್ಕೆ ಯಾರು ಅಸಮಾಧಾನ ಹೊಂದುವ ಅಗತ್ಯವಿಲ್ಲ.
ಹಿರಿಯ ಶಾಸರಿಗೆ ಸಚಿವರಾಗುವ ಅವಕಾಶ ಬರಲಿದೆ. ಹಾವೇರಿ ಜಿಲ್ಲೆಗೆ ಸಚಿವ ಸ್ಥಾನ ಸಿಗಬೇಕಿತ್ತು. ಬಿ.ಸಿ.ಪಾಟೀಲ್‌ಗೆ ಮಂತ್ರಿ ಸ್ಥಾನ ಸಿಗಬೇಕಿತ್ತು. ಆದರೆ ಪಕ್ಷದಲ್ಲಿ ಕೆಲವರಿಗೆ ತೊಂದರೆ ಆಗಿರುವುದು ನಿಜ, ಮೈತ್ರಿ ಸರ್ಕಾರದ ಪಾಲನೆಯಲ್ಲಿ ಕೆಲವೊಂದು ತೊಂದರೆಗಳಾಗುತ್ತವೆ. ಆದರೆ ಎಲ್ಲವನ್ನು ಸಹಿಸಿಕೊಂಡು ಹೋಗಬೇಕು ಎಂದರು.