ಯಾಗುವ ರೀತಿಯಲ್ಲಿ ಶೀಘ್ರದಲ್ಲಿ ನಿರ್ಮಿಸುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಸೂಚಿಸಿದರು.
Advertisement
ಜಿಲ್ಲಾಧಿಕಾರಿ ಕಚೇರಿಲ್ಲಿ ಶುಕ್ರವಾರ ನಡೆದ ಜಿಲ್ಲಾ ಪ್ರಾಣಿದಯಾ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
Related Articles
ಹೆಬ್ರಿ ತಾಲೂಕಿನ ಕೆರೆಬೆಟ್ಟು ಗ್ರಾಮದ ಸರ್ವೇ ನಂ. 79/2ರಲ್ಲಿ 13.24 ಎಕ್ರೆ ಜಮೀನನ್ನು ಹಾಗೂ ಕುಂದಾಪುರದ ಗೋಳಿಹೊಳೆ ಗ್ರಾಮದ ಸರ್ವೆ ನಂ. 279ರಲ್ಲಿ 9.85 ಎಕ್ರೆ ಜಮೀನನ್ನು ಸರಕಾರಿ ಗೋಶಾಲೆ ನಿರ್ಮಿಸಲು ಕಾದಿರಿಸಲಾಗಿದೆ. ಗೋಶಾಲೆಗೆ ತಡೆ ಬೇಲಿ, ಕೆರೆ ನಿರ್ಮಾಣದ ಕಾಮಗಾರಿಗಳನ್ನು ಕೈಗೊಳ್ಳ ಬೇಕೆಂದು ತಿಳಿಸಿದರು.
Advertisement
ಗೋಹತ್ಯೆ ನಿಷೇಧ ಕಾಯ್ದೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಜತೆಗೆ ಅದರ ಸಮ ರ್ಪಕ ಅನುಷ್ಠಾನಗೊಳಿಸಬೇಕು.
ಜಿಲ್ಲೆಯಲ್ಲಿ ಈಗಾಗಲೇ 12 ಗೋಶಾಲೆಯನ್ನು ಖಾಸಗಿ ಸಂಸ್ಥೆ ಗಳು ನಡೆಸುತ್ತಿದ್ದು 2,660ಕ್ಕೂ ಹೆಚ್ಚು ಗೋವು ಗಳು ಆಶ್ರಯ ಪಡೆದಿವೆ. ಜಾನುವಾರುಗಳನ್ನು ರಕ್ಷಣೆ ಮಾಡುವ ರೀತಿಯಲ್ಲಿಯೇ ಇತರ ಪ್ರಾಣಿ ಗಳನ್ನು ರಕ್ಷಿಸಲು ಗೋಶಾಲೆ ಮಾದರಿಯ ಲ್ಲಿಯೇ ಪ್ರಾಣಿ ರಕ್ಷಣೆ ಶೆಲ್ಟರ್‌ಗಳನ್ನು ಪ್ರಾರಂಭಿಸಲು ಪ್ರಾಣಿ ಪ್ರಿಯರು ಹಾಗೂ ಅಧಿಕಾರಿಗಳು ಚಿಂತಿಸಬೇಕು ಎಂದರು.
ಸರಕಾರದಿಂದ ಜಿಲ್ಲಾ ಪ್ರಾಣಿ ದಯಾ ಸಂಘಕ್ಕೆ ಪ್ರಾಣಿಗಳ ಕಲ್ಯಾಣಕ್ಕೆ ಬಿಡುಗಡೆಯಾಗಿರುವ ಅನು ದಾನವನ್ನು ಬಳಕೆ ಮಾಡಿಕೊಳ್ಳು ವುರೊಂದಿಗೆ ಅವುಗಳ ರಕ್ಷಣೆಗೆ ಇರುವ ಕಾಯ್ದೆ ಮತ್ತು ನಿಯಮಗಳ ಬಗ್ಗೆ ಜಾಗೃತಿ ಅಭಿಯಾನಗಳನ್ನು ಪರಿಣಾಕಾರಿಯಾಗಿ ಅನುಷ್ಠಾನ ಗೊಳಿಸುವಂತೆ ಸೂಚಿಸಿದರು.
ಸ್ವಾವಲಂಬಿ ಗೋಶಾಲೆಜಿ.ಪಂ. ಸಿಇಒ ಪ್ರಸನ್ನ ಎಚ್. ಮಾತನಾಡಿ, ಹೆಬ್ರಿಯ ಕೆರೆಬೆಟ್ಟುವಿನ ಗೋಶಾಲೆಗೆ ನೀರಿನ ಸೌಲಭ್ಯ ಕಲ್ಪಿಸಲು ಕೊಳವೆ ಬಾವಿಯನ್ನು ಕೊರೆಸಿದರೂ ನೀರು ದೊರೆತಿಲ್ಲ. ಇಲ್ಲಿಗೆ ಅಗತ್ಯವಿರುವ ನೀರನ್ನು ಜಲ ಜೀವನ್ ಮಿಷನ್ ಯೋಜನೆಯಡಿ ಕಲ್ಪಿಸಲಾಗುವುದು. ಗೋಶಾಲೆಗಳ ನಿರ್ವಹಣೆಗೆ ಸರಕಾರವನ್ನು ಎದುರು ನೋಡದೇ ಅಲ್ಲಿಯೇ ಬರುವ ಉತ್ಪನ್ನಗಳಿಂದ ನಿರ್ವಹಣೆ ಮಾಡುವ ಬಗ್ಗೆ ಯೋಜನೆಗಳನ್ನು ರೂಪಿಸಿ, ಗೋಶಾಲೆಗಳು ಸ್ವಾವಲಂಬಿ ಯಾಗಬೇಕು ಎಂದರು.