Advertisement

ಪಶು ಇಲಾಖೆಯಲ್ಲಿ ಖಾಲಿ ಹುದ್ದೆ ಭರ್ತಿಗೆ ಶೀಘ್ರ ಕ್ರಮ : ಪ್ರಭು ಚವ್ಹಾಣ್

05:28 PM Aug 31, 2021 | Team Udayavani |

ಹೊಸಪೇಟೆ : ಪಶುಸಂಗೋಪನಾ ಇಲಾಖೆಯಲ್ಲಿ ಖಾಲಿ ಇರುವ ಶೇ. 5೦ ರಷ್ಟು ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮವಹಿಸಲಾಗುವುದು ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.

Advertisement

ನಗರದ ಮುನ್ಸಿಪಲ್ ಮೈದಾನದ ಒಳ ಕ್ರೀಡಾಂಗಣ ಸಭಾಂಗಣದಲ್ಲಿ ಇಂದು (ಮಂಗಳವಾರ, ಆಗಸ್ಟ್ 31) ಪಶುಸಂಗೋಪನಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೇಕ ವರ್ಷಗಳಿಂದ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚಿಸಲಾಗುವುದು ಎಂದಿದ್ದಾರೆ.

ಇದನ್ನೂ ಓದಿ : ಒಪೆಕ್, ಒಪೆಕ್+ ನಾಳೆ ಸಭೆ : ತೈಲೋತ್ಪನ್ನ ಹೆಚ್ಚಳಕ್ಕೆ ನಿರ್ಧಾರ..?

ಕಲ್ಯಾಣ ಕರ್ನಾಟಕ ಅಡಿ 83 ಪಶುವೈದ್ಯರನ್ನು ನೇರನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. 32 ಪಶು ವೈದ್ಯಕೀಯ ಪರೀಕ್ಷಕರು ಹಾಗೂ 27 ಪಶುವೈದ್ಯರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಇಲಾಖೆಯಲ್ಲಿ ಕಳೆದ 12 ವರ್ಷಗಳಿಂದ ಬಡ್ತಿ ಸಮಸ್ಯೆ ಎದುರಿಸುತ್ತಿದ್ದ ಅನೇಕರಿಗೆ ಸಹಾಯಕ ನಿರ್ದೇಶಕ, ಉಪನಿರ್ದೇಶಕ ಮತ್ತು ಜಂಟಿ ನಿರ್ದೇಶಕ ಹುದ್ದೆಗಳಿಗೆ ಬಡ್ತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಪಶು ಮೇಳದಂತೆಯೇ ಎಲ್ಲಾ ತಳಿಗಳ ಪಶುಗಳು ನೋಡುವುದಕ್ಕೆ ಲಭ್ಯವಾಗುವ ಪಶು ಲೋಕವನ್ನು 1೦೦ ಎಕರೆ ಪ್ರದೇಶದಲ್ಲಿ ಆರಂಭಿಸಲು ಉದ್ದೇಶಿಸಲಾಗಿದೆ.

Advertisement

ಗೋಹತ್ಯೆ ನಿಷೇಧ ಕಾಯ್ದೆ, ಪ್ರತಿ ಜಿಲ್ಲೆಗೊಂದು ಗೋಶಾಲೆ, ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ರಚನೆ, ಪಶು ಸಂಜೀವಿನಿ ಆ್ಯಂಬ್ಯುಲೆನ್ಸ್, ಬೆಂಗಳೂರಿನಲ್ಲಿ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆ ಆರಂಭ, ಸಿಬ್ಬಂದಿ ಬಡ್ತಿಗೆ ಕ್ರಮ, ಪ್ರಾಣಿ ಕಲ್ಯಾಣ ಸಹಾಯವಾಣಿ, ಪಶುಲೋಕ, ಅಮೃತ ಸಿರಿ, ಅಮೃತ ಧಾರೆ ಯೋಜನೆಗಳನ್ನು ಜಾರಿಗೆ ತರುವ ಮೂಲಕ ದೇಶಿ ತಳಿ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಹೇಳಿದ್ದಾರೆ.

ಗೋಮಾತೆ ಕಸಾಯಿ ಖಾನೆಗೆ ಹೋಗಬಾರದು ಎನ್ನುವ ಸದುದ್ದೇಶದಿಂದ ಹೊಸ ಗೋ ಹತ್ಯೆ ನಿಷೇಧ ಕಾಯ್ದೆ ಅನುಷ್ಠಾನಕ್ಕೆ ತಂದು ಕಾನೂನು ಬಿಗಿಗೊಳಿಸಲಾಗಿದೆ. 3 ಜನ ಮುಸ್ಲಿಂ ಬಾಂಧವರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ತೀರ್ಪು ನಮ್ಮ ಪರವಾಗಿ ಬರಲಿದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

ಇದನ್ನೂ ಓದಿ : ಅಪ್ರಾಪ್ತರ ಪ್ರೇಮ ಪ್ರಕರಣ : ಪ್ರಿಯಕರನ ಸಾವಿನಿಂದ ಮನನೊಂದ ಯುವತಿಯೂ ಆತ್ಮಹತ್ಯೆಗೆ ಶರಣು

Advertisement

Udayavani is now on Telegram. Click here to join our channel and stay updated with the latest news.

Next