Advertisement

ರಾಹುಲ್‌ ಕುರಿತು ಪವಾರ್‌ ಹೇಳಿಕೆ ಅಸ್ಪಷ್ಟ: ರಾಜ್ಯ ಕಾಂಗ್ರೆಸ್‌

03:36 PM Jul 02, 2020 | mahesh |

ಮುಂಬಯಿ: ಭಾರತ-ಚೀನ ಗಡಿ ಚಕಮಕಿಗಳನ್ನು ರಾಜಕೀಯಗೊಳಿಸಬಾರದೆಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಕೋರಿ ಆಡಳಿತಾರೂಢ ಮಿತ್ರಪಕ್ಷ ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್‌ ಪವಾರ್‌ ಅವರು ಶನಿವಾರ ನೀಡಿರುವ ಹೇಳಿಕೆಯನ್ನು ಮಹಾರಾಷ್ಟ್ರ ಕಾಂಗ್ರೆಸ್‌ ಅಸ್ಪಷ್ಟವಾಗಿದೆ ಎಂದಿದೆ.

Advertisement

ಈ ವಿಷಯದಲ್ಲಿ ರಾಜತಾಂತ್ರಿಕ ನಿಲುವನ್ನು ಅಳವಡಿಸಿಕೊಂಡಿರುವ ರಾಜ್ಯ ಕಾಂಗ್ರೆಸ್‌ ಮುಖ್ಯಸ್ಥ ಮತ್ತು ಕಂದಾಯ ಸಚಿವ ಬಾಳಾಸಾಹೇಬ್‌ ಥೋರಟ್‌ ಅವರು, ಕಳೆದ 45 ವರ್ಷಗಳಲ್ಲಿ ಭಾರತ-ಚೀನ ಗಡಿಯಲ್ಲಿ ಒಬ್ಬ ಸೈನಿಕನೂ ಪ್ರಾಣ ಕಳೆದುಕೊಂಡಿಲ್ಲವಾದರೂ, ಚೀನದ ಆಕ್ರಮಣದಿಂದಾಗಿ ಗಲ್ವಾನ್‌ ಕಣಿವೆಯಲ್ಲಿ ನಮ್ಮ 20 ಸೈನಿಕರು ಹುತಾತ್ಮರಾದರು ಎಂದು ಕಿಡಿಕಾರಿದ್ದಾರೆ. ಇವೆಲ್ಲದರ ಹೊರತಾಗಿಯೂ, ಪ್ರಧಾನಿಯವರು ನಮ್ಮ ಭೂಪ್ರದೇಶದಲ್ಲಿ ಯಾರೂ ಒಳನುಗ್ಗಿಲ್ಲ ಎಂದು ಹೇಳುತ್ತಾರೆ. ಅವರ ಹೇಳಿಕೆಯನ್ನು ಬಳಸಿಕೊಂಡು ಚೀನ ನಮ್ಮ ಹುತಾತ್ಮರನ್ನು ಒಳನುಗ್ಗುವವರು ಎಂದು ಕರೆಯುತ್ತಿದೆ. ಕಾಂಗ್ರೆಸ್ಸಿನಂತೆಯೇ, ಪವಾರ್‌ ಸಾಹೇಬರೂ ಕೂಡ ಇದರಿಂದ ದುಃಖೀತರಾಗಿರಬೇಕು. ಚೀನಿ ಆಕ್ರಮಣದಿಂದಲೂ ಅವರು ದುಃಖೀತರಾಗಿದ್ದಾರೆ ಎಂದು ನಾನು ಖಡಾ ಖಂಡಿತವಾಗಿ ಹೇಳುತ್ತೇನೆ ಎಂದು ಥೋರಟ್‌ ನುಡಿದಿದ್ದಾರೆ.

ರಾಹುಲ್‌ ಗಾಂಧಿ ಕುರಿತ ಪವಾರ್‌ ಹೇಳಿಕೆಯನ್ನು ಅಸ್ಪಷ್ಟ ಎಂದು ಕರೆದ ಥೋರಟ್‌, ಪವಾರ್‌ ಅವರ ಕೇವಲ ಒಂದು ಹೇಳಿಕೆಯನ್ನು ಬಳಸಿ ಮಾಧ್ಯಮಗಳು ತೀರ್ಮಾನಗಳನ್ನು ತೆಗೆದುಕೊಳ್ಳಬಾರದು ಎಂದರು. ಚೀನ ವಿಷಯದಲ್ಲಿ ಕಾಂಗ್ರೆಸ್‌ ಸರಕಾರದ ಪರವಾಗಿದೆ, ಆದರೆ ಪಕ್ಷವು ರಾಷ್ಟ್ರೀಯ ಹಿತಾಸಕ್ತಿಯ ಪ್ರಶ್ನೆಗಳನ್ನು ಹುಟ್ಟುಹಾಕುವುದಿಲ್ಲ ಎಂಬುದು ಇದರರ್ಥವಲ್ಲ ಎಂದವರು ತಿಳಿಸಿದ್ದಾರೆ. ರಾಹುಲ್‌ ಕುರಿತು ಪವಾರ್‌ ಹೇಳಿಕೆ ಅಸ್ಪಷ್ಟ: ರಾಜ್ಯ ಕಾಂಗ್ರೆಸ್‌ಗಡಿ ಭದ್ರತೆಯ ಬಗ್ಗೆ ರಾಹುಲ್‌ ಗಾಂಧಿ ಅವರು ಎತ್ತಿದ ಪ್ರಶ್ನೆಗಳು ರಾಜಕೀಯವಲ್ಲ, ಆದರೆ ಅದು ಜನರು ನೀಡಿದ ಜವಾಬ್ದಾರಿ ಮತ್ತು ಸಾರ್ವಜನಿಕರ ಮನಸ್ಸಿನಲ್ಲಿರುವ ಪ್ರಶ್ನೆಗಳಾಗಿವೆ. 1962ರ ಪರಿಸ್ಥಿತಿಯನ್ನು ಇಂದು ನಡೆಯುತ್ತಿರುವ ಸಂಗತಿಗಳೊಂದಿಗೆ ಹೋಲಿಸಲು ನಮಗೆ ಸಾಧ್ಯವಿಲ್ಲ ಎಂದು ಥೋರಟ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next