Advertisement

ಮ್ಯಾಟ್‌ ಕುಹ್ನೆಮನ್‌ ಟೆಸ್ಟ್‌ಗೆ ಪದಾರ್ಪಣೆ ಸಾಧ್ಯತೆ

11:19 PM Feb 12, 2023 | Team Udayavani |

ಹೊಸದಿಲ್ಲಿ: ಮಿಚೆಲ್‌ ಸ್ವೀಪ್ಸನ್‌ ಬದಲಿಗೆ ಆಸ್ಟ್ರೇಲಿಯ ತಂಡಕ್ಕೆ ಸೇರಿಕೊಂಡಿರುವ ಎಡಗೈ ಸ್ಪಿನ್ನರ್‌ ಮ್ಯಾಟ್‌ ಕುಹ್ನೆಮನ್‌ ಅವರು ಫೆ. 17ರಿಂದ ಹೊಸದಿಲ್ಲಿಯಲ್ಲಿ ಆರಂಭವಾಗುವ ದ್ವಿತೀಯ ಪಂದ್ಯದ ಮೂಲಕ ಟೆಸ್ಟ್‌ಗೆ ಪದಾರ್ಪಣೆಗೈಯುವ ಸಾಧ್ಯತೆಯಿದೆ ಎಂದು ಆಸ್ಟ್ರೇಲಿಯ ತಂಡದ ಕೋಚ್‌ ಮೆಕ್‌ಡೋನಲ್ಡ್‌ ಹೇಳಿದ್ದಾರೆ.

Advertisement

ಸ್ಪಿನ್‌ ದಾಳಿಗೆ ತತ್ತರಿಸಿ ಮೊದಲ ಪಂದ್ಯವನ್ನು ಇನ್ನಿಂಗ್ಸ್‌ ಅಂತರದಿಂದ ಸೋತಿರುವ ಪ್ರವಾಸಿ ತಂಡವು ದ್ವಿತೀಯ ಪಂದ್ಯದಲ್ಲಿ ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕೆ ಇಳಿಯುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಕುಹ್ನೆಮನ್‌ ಅವರಿಗೆ ಟೆಸ್ಟ್‌ ನಲ್ಲಿ ಆಡುವ ಅವಕಾಶ ಲಭಿಸುವ ನಿರೀಕ್ಷೆಯಿದೆ.

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಲೆಗ್‌ ಸ್ಪಿನ್ನರ್‌ ಸ್ವೀಪ್ಸನ್‌ ಪೂರ್ವಯೋಜಿತ ನಿರ್ಧಾರದಂತೆ ತವರಿಗೆ ಮರಳ ಲಿದ್ದು ಮೂರನೇ ಟೆಸ್ಟ್‌ಗಿಂತ ಮುಂಚಿತವಾಗಿ ಭಾರತಕ್ಕೆ ಮರಳ ಲಿದ್ದಾರೆ. ಅವರ ಬದಲಿಗೆ 26ರ ಹರೆಯದ ಕುಹ್ನೆಮನ್‌ ತಂಡವನ್ನು ಸೇರಿಕೊಂಡಿದ್ದಾರೆ.

ಆಶ್ಚರ್ಯವಾಗಿದೆ
ಅಭ್ಯಾಸ ನಡೆಸಲು ಹೊರಗೆ ಹೋಗುತ್ತಿರುವಾಗ ಕರೆ ಬಂದಾಗ ನನಗೆ ನಿಜವಾಗಿಯೂ ಆಶ್ಚರ್ಯವಾಯಿತು. ನನಗೀಗ ಭಾರತಕ್ಕೆ ತೆರಳಲು ಅತೀವ ಸಂತೋವಾಗುತ್ತಿದೆ ಎಂದು ಕುಹ್ನೆಮನ್‌ ಹೇಳಿದರು.

ಗ್ರೀನ್‌ ಲಭ್ಯ ಸಾಧ್ಯತೆ
ಬೆರಳಿನ ಮುರಿತದಿಂದ ಚೇತರಿಸಿಕೊಳ್ಳುತ್ತಿರುವ ಕ್ಯಾಮ ರೂನ್‌ ಗ್ರೀನ್‌ ಅವರು ದ್ವಿತೀಯ ಟೆಸ್ಟ್‌ಗೆ ಲಭ್ಯರಿರುವ ಸಾಧ್ಯ ತೆಯಿದೆ. ಬೆರಳ ಗಾಯದಿಂದ ಚೇತರಿಸಿಕೊಂಡಿರುವ ಮಿಚೆಲ್‌ ಸ್ಟಾರ್ಕ್‌ ಅವರು ಸೋಮವಾರ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದು ದ್ವಿತೀಯ ಟೆಸ್ಟ್‌ನಲ್ಲಿ ಆಡುವ ಸಾಧ್ಯತೆಯಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next