Advertisement

Queen’s Club ಚಾಂಪಿಯನ್‌: ಅಲ್ಕರಾಜ್‌ ಮರಳಿ ನಂಬರ್‌ ವನ್‌

10:55 PM Jun 25, 2023 | Team Udayavani |

ವೆಸ್ಟ್‌ ಕೆನ್ಸಿಂಗ್ಟನ್‌ (ಲಂಡನ್‌): ಸ್ಪೇನ್‌ನ ಕಾರ್ಲೋಸ್‌ ಅಲ್ಕರಾಜ್‌ ಪದಾರ್ಪಣೆಯಲ್ಲೇ “ಕ್ವೀನ್ಸ್‌ ಕ್ಲಬ್‌ ಟೆನಿಸ್‌” ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ರವಿವಾರದ ಫೈನಲ್‌ನಲ್ಲಿ ಅವರು ಆಸ್ಟ್ರೇಲಿಯದ ಅಲೆಕ್ಸ್‌ ಡಿ ಮಿನೌರ್‌ ವಿರುದ್ಧ 6-4, 6-4 ನೇರ ಸೆಟ್‌ಗಳ ಜಯ ಸಾಧಿಸಿದರು.

Advertisement

ಈ ಸಾಧನೆಯೊಂದಿಗೆ ಅಲ್ಕರಾಜ್‌ ಮರಳಿ ವಿಶ್ವದ ನಂಬರ್‌ ವನ್‌ ಟೆನಿಸಿ ಗನಾಗಿ ಮೂಡಿಬಂದರು. ಜೊಕೋವಿಕ್‌ ಕೆಳಗಿಳಿದರು. ಮುಂಬರುವ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಮ್‌ನಲ್ಲಿ ಅಲ್ಕರಾಜ್‌ ಅಗ್ರ ಶ್ರೇಯಾಂಕ ಗಳಿಸಲಿದ್ದಾರೆ.

20 ವರ್ಷದ ಅಲ್ಕರಾಜ್‌ 2000ದ ಬಳಿಕ ಕ್ವೀನ್ಸ್‌ ಕ್ಲಬ್‌ ಪ್ರಶಸ್ತಿ ಜಯಿಸಿದ ಅತೀ ಕಿರಿಯ ಟೆನಿಸಿಗ. ಅಂದು ಆಸ್ಟ್ರೇಲಿಯದ 19 ವರ್ಷದ ಲೇಟನ್‌ ಹೆವಿಟ್‌ ಚಾಂಪಿಯನ್‌ ಆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next