Advertisement

ರಾಣಿ ಅಬ್ಬಕ್ಕ: ಅನ್ವೇಷಣೆ ಅಗತ್ಯ

03:58 PM Mar 17, 2018 | |

ಮುಂಬಯಿ: ರಾಣಿ ಅಬ್ಬಕ್ಕ ದೇವಿಯ ಹೋರಾಡಿದ ಸಂಗ್ರಾಮಗಳು ಅವರು ಎದುರಿಸಿದ ಪ್ರಶ್ನೆಗಳು, ಪೋರ್ಚುಗೀಸರ ವಸಾಹತು ಶಾಹಿ ರಾಷ್ಟ್ರ ಸ್ಥಾಪನೆಯನ್ನು ಪ್ರಾರಂಭದಲ್ಲೇ ಮುರಿದಿರುವುದು ಅಲ್ಲದೆ ಅವರು ಇಷ್ಟೆಲ್ಲಾ ಹೋರಾಟಗಳ ಮಧ್ಯೆ ಪ್ರಜಾ ಸಂರಕ್ಷಣೆ, ಮುಖ್ಯವಾಗಿ ಕೃಷಿ ಉತ್ಪಾದನೆ, ಹಡಗು ನಿರ್ಮಾಣ, ವಾಣಿಜ್ಯಗಳಿಗೂ ಪ್ರೋತ್ಸಾಹವಿತ್ತು  ಎಂಬುವುದು ಗಮನಾರ್ಹ. ಇವರು ಸ್ಥಾಪಿಸಿದ ಹಡಗು ಕಟ್ಟುವ ತಳವಾಡಗಳನ್ನು ಮಂಗಳೂರು ಬಂದರಿನಲ್ಲಿ ಆಮೇಲೆ ಬಂದ ಟಿಪ್ಪು  ಸುಲ್ತಾನ್‌ ಬಳಸಿ ಆಂಗ್ಲರನ್ನು ಎದುರಿಸಿದನೆಂಬುದು ಗಮನಾರ್ಹ ಎಂದು ಖ್ಯಾತ ಬರಹಗಾರ  ಎಸ್‌. ಶ್ರೀನಿವಾಸನ್‌  ನುಡಿದರು.

Advertisement

ದೆಹಲಿ ಕರ್ನಾಟಕ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತ ಆಚರಿಸುತ್ತಿರುವ ರಾಷ್ಟ್ರೀಯ ಅಬ್ಬಕ್ಕ ಉತ್ಸವದ ಐದನೇ ದಿನವಾದ ಇಂದು  ಶ್ರೀನಿವಾಸ್‌ ಅವರು ಮಾತನಾಡಿ, ಬರೇ ಅಬ್ಬಕ್ಕನ ಹೆಸರನ್ನು ರಸ್ತೆಗೆ ಇಡುವುದು ಅವರ ಅಂಚೆಚೀಟಿ ಹೊರತರುವುದು, 

ಶಿಲಾಸ್ಥಾಪನೆ ಮಾತ್ರ ಮಾಡದೆ, ಆಗಿನ ಕಾಲದಲ್ಲಿ ಕೃಷಿ ಉತ್ಪಾದನೆ ಆರ್ಥಿಕ ಪರಿಸ್ಥಿತಿ, ಹಡಗು ಉತ್ಪಾದನಾ ಕಾರ್ಯಗಳ ಬಗ್ಗೆಯೂ ಅಧ್ಯಯನ, ಅನ್ವೇಷಣೆ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಡಾ| ಎಂ. ಎಸ್‌. ಶಶಿಕುಮಾರ್‌ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಮತ್ತು ಸಂಚಾಲಕತ್ವವನ್ನು ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸಿ. ಎಂ. ನಾಗರಾಜ ಅವರು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next